ಬೆಂಗಳೂರು: ವಿಶಾಖಪಟ್ಟಣಂನ ಡಾ.ವೈ.ಎಸ್.ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮಾರ್ಚ್ 31 ರಂದು ನಡೆದ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ವಿರುದ್ಧದ ಇಂಡಿಯನ್ ಪ್ರೀಮಿಯರ್ ಲೀಗ್ 2024 ರ (IPL 2024) ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Dehli Capitals) ನಾಯಕ ರಿಷಭ್ ಪಂತ್ (Rishabh Pant) ಅವರ ತಂಡವು ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿತ್ತು. ಹೀಗಾಗಿ ನಾಯಕ ರಿಷಭ್ ಪಂತ್ಗೆ ದಂಡ ವಿಧಿಸಲಾಗಿದೆ. ಕನಿಷ್ಠ ಓವರ್ ರೇಟ್ ಅಪರಾಧಗಳಿಗೆ ಸಂಬಂಧಿಸಿದ ಐಪಿಎಲ್ನ ನೀತಿ ಸಂಹಿತೆಯ ಅಡಿಯಲ್ಲಿ ಇದು ಅವರ ತಂಡದ ಮೊದಲ ಅಪರಾಧವಾಗಿರುವುದರಿದ ಅವರಿಗೆ 12 ಲಕ್ಷ ರೂ.ಗಳ ದಂಡ ವಿಧಿಸಲಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸಿಎಸ್ಕೆ ನಡುವಿನ ರೋಮಾಂಚಕಾರಿಯಾಗಿತ್ತು. ಪಂತ್ ಗಾಯದ ನಂತರ ಅದ್ಭುತ ಅರ್ಧಶತಕದೊಂದಿಗೆ ಫಾರ್ಮ್ಗೆ ಮರಳಿದ್ದರು. ಕ್ಯಾಪಿಟಲ್ಸ್ ಋತುವಿನ ಮೊದಲ ಪಂದ್ಯವನ್ನು 20 ರನ್ಗಳೊಂದಿಗೆ ಗೆದ್ದಿತು. ಮೊದಲ ಎರಡು ಪಂದ್ಯಗಳನ್ನು ಗೆದ್ದಿದ್ದ ಸಿಎಸ್ಕೆ ಈ ಪಂದ್ಯವನ್ನು ಸೋತಿತು. ಎಂಎಸ್ ಧೋನಿ ಸ್ಫೋಟಕ ಬ್ಯಾಟಿಂಗ್ ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಗಮನ ಸೆಳೆದರು. ಅವರ ಅಭಿಮಾನಿಗಳಿಗೆ ಇದು ಸಂತಸದ ವಿಚಾರ ಎನಿಸಿತು.
ಧೋನಿ 16 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ಗಳ ಸಹಾಯದಿಂದ 37* ನಿರ್ಣಾಯಕ ರನ್ ಗಳಿಸಿದರು. ಆದಾಗ್ಯೂ, ಸಿಎಸ್ಕೆ ಪಂದ್ಯವನ್ನು 20 ರನ್ಗಳಿಂದ ಕಳೆದುಕೊಂಡಿದ್ದರಿಂದ ಅವರಿಗೆ ಜಡೇಜಾ ಅವರಿಂದ ಅಗತ್ಯವಾದ ಬೆಂಬಲದ ಕೊರತೆ ಎದುರಾಯಿತು.
ಇದನ್ನೂ ಓದಿ : IPL 2024 : ರೋಹಿತ್ ಔಟ್ ಆದಾಗ ಸಂಭ್ರಮಿಸಿದ್ದಕ್ಕೆ ಹೊಡೆದು ಕೊಂದೇ ಹಾಕಿದರು!
ಬೌಲರ್ಗಳು ಇಂದು ನಿರ್ಣಾಯಕರಾಗಿದ್ದರು. ನಾವು ನಮ್ಮ ತಪ್ಪುಗಳಿಂದ ಪಾಠ ಕಲಿತಿದ್ದೇವೆ. ಅವರು ಕಳೆದ ಎರಡು ವಾರಗಳಿಂದ ಪೃಥ್ವಿ ಶಾ ಅವರಿಗೆ ಕಾಯುತ್ತಿದ್ದೆವು. ಅವರು ಉತ್ತಮ ಪ್ರದರ್ಶನ ನೀಡಿದರು. ಖಲೀಲ್ ಬೌಲಿಂಗ್ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದರು. ಮುಖೇಶ್ ಡೆತ್ ಓವರ್ಗಳ ಸಮಯದಲ್ಲಿ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದರು. ಒಬ್ಬ ಕ್ರಿಕೆಟಿಗನಾಗಿ ನಾನು ನನ್ನ 100 ಪ್ರತಿಶತವನ್ನು ನೀಡಬೇಕಾಗಿದೆ. ಕಳೆದ 1.5 ವರ್ಷಗಳಲ್ಲಿ ನಾನು ಹೆಚ್ಚು ಕ್ರಿಕೆಟ್ ಆಡದ ಕಾರಣ ಆರಂಭದಲ್ಲಿ ಸ್ವಲ್ಪ ಸಮಯ ತೆಗೆದುಕೊಂಡೆ. ಇದು ನನ್ನ ವೃತ್ತಿ ಜೀವನವನ್ನು ಅವಲಂಬಿಸಿರುವ ವಿಷಯ ಎಂದು ಪಂತ್ ಪಂದ್ಯದ ಬಳಿಕ ಹೇಳಿದ್ದಾರೆ.
ಕಾರು ಅಪಘಾತದ ಬಳಿಕ ಮೊದಲ ಅರ್ಧ ಶತಕ ಬಾರಿಸಿದ ಪಂತ್
ವಿಶಾಖಪಟ್ಟಣ ಡೆಲ್ಲಿ ತಂಡದ ನಾಯಕ ರಿಷಭ್ ಪಂತ್ (Rishabh Pant) ಭಾನುವಾರ ರಾತ್ರಿ ಚೆನ್ನೈ ಸೂಪರ್ ಕಿಂಗ್ಸ್ ಬೌಲರ್ಗಳನ್ನು ಬಲಶಾಲಿ ಹೊಡೆತಗಳ ಮೂಲಕ ಬೆಚ್ಚಿ ಬೀಳಿಸಿದರು. ವಿಶಾಖಪಟ್ಟಣಂನಲ್ಲಿ ನಡೆದ ಐಪಿಎಲ್ (IPL 2024) ಪಂದ್ಯದಲ್ಲಿ ಪಂತ್ ಕೇವಲ 32 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ಗಳ ಸಹಾಯದಿಂದ 51 ರನ್ ಗಳಿಸಿದರು. 2022 ರ ಡಿಸೆಂಬರ್ನಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಿಂದ ಸುಧಾರಿಸಿಕೊಂಡ ಅವರಿಗೆ ಸ್ಪರ್ಧಾತ್ಮಕ ಕ್ರಿಕೆಟ್ನಲ್ಲಿ ದೊರಕಿದ ಮೊದಲ ಅರ್ಧಶತಕವಾಗಿದೆ. ಐಪಿಎಲ್ 2024ರಲ್ಲಿಯೇ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಿದ ಪಂತ್ ಮೊದಲ ಎರಡು ಪಂದ್ಯಗಳಲ್ಲಿ ಬ್ಯಾಟಿಂಗ್ನಲ್ಲಿ ಹೆಚ್ದು ಪ್ರಭಾವ ಬೀರಿರಲಿಲ್ಲ. ಆದಾಗ್ಯೂ, ಮೂರನೇ ಪಂದ್ಯವು ಪಂತ್ ಅವರ ಅದೃಷ್ಟ ಬದಲಾಯಿಸಿತು.
That iconic one-handed six is back 🥹#DCvCSK #JioCinemaSports #TATAIPL #IPLonJioCinema pic.twitter.com/N01gOlTLRM
— JioCinema (@JioCinema) March 31, 2024
ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 5 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿದೆ. ಆರಂಭಿಕ ಜೋಡಿ ಡೇವಿಡ್ ವಾರ್ನರ್ ಮತ್ತು ಪೃಥ್ವಿ ಶಾ ಅವರ ಅರ್ಧಶತಕದ ಜತೆಯಾಟದ ನಂತರ ಪಂತ್ ತಮ್ಮ ಇನಿಂಗ್ಸ್ ತೋರಿದರು. ಅವರು ಅದ್ಭುತ ಅರ್ಧಶತಕದೊಂದಿಗೆ ತಮ್ಮ ಆಗಮನವನ್ನು ಪ್ರಸ್ತುತಪಡಿಸಿದರು.
ವಾರ್ನರ್ ಮತ್ತು ಶಾ 93 ರನ್ಗಳ ಆರಂಭಿಕ ಜೊತೆಯಾಟವನ್ನು ಹಂಚಿಕೊಂಡರು. ಆದಾಗ್ಯೂ ಪಂತ್ ಅವರ ಇನಿಂಗ್ಸ್ ಹೆಚ್ಚು ಗಮನ ಸೆಳೆಯಿತು. 2022 ರ ಡಿಸೆಂಬರ್ನಲ್ಲಿ ರಸ್ತೆ ಅಪಘಾತದಿಂದ ಚೇತರಿಸಿಕೊಂಡ ನಂತರ ಪಂದ್ಯಾವಳಿಗೆ ಬಂದ ಪಂತ್, ಘಟನೆಯ ಬಳಿಕ 15 ತಿಂಗಳಲ್ಲಿ ತಮ್ಮ ಮೊದಲ ಅರ್ಧಶತಕ ಗಳಿಸಿದರು.