Site icon Vistara News

IND vs ENG ODI | ರಿಷಭ್‌ ಪಂತ್‌ ಮಾಜಿ ಕೋಚ್​ ರವಿ ಶಾಸ್ತ್ರಿಗೆ ಕೊಟ್ಟ ಗುರುದಕ್ಷಿಣೆ ಸೂಪರ್‌

IND vs ENG ODI

ಮ್ಯಾಂಚೆಸ್ಟರ್‌: ಭಾರತ ತಂಡದ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ ಹಾಗೂ ಮಾಜಿ ಕೋಚ್‌ ರವಿ ಶಾಸ್ತ್ರಿ ಇಂಗ್ಲೆಂಡ್​ ಹಾಗೂ ಭಾರತ ನಡವಿನ ಏಕದಿನ ಸರಣಿ (IND vs ENG ODI) ಮೂರನೇ ಪಂದ್ಯ ಮುಕ್ತಾಯದ ಬಳಿಕ ಕ್ರೀಡಾಂಗಣದಲ್ಲೇ ಭೇಟಿಯಾದರು. ಈ ವೇಳೆ ಮಾಜಿ ಗುರುವಿಗೆ ಕೊಟ್ಟ ಗುರುದಕ್ಷಿಣೆ ಕ್ರಿಕೆಟ್‌ ಅಭಿಮಾನಿಗಳ ಗಮನ ಸೆಳೆದಿದೆ.

ರಿಷಭ್‌ ಪಂತ್‌ ಇಂಗ್ಲೆಂಡ್‌ ವಿರುದ್ಧ ಅಜೇಯ ೧೨೫ ರನ್‌ ಬಾರಿಸಿದ್ದರು. ಅವರ ಸ್ಫೋಟಕ ಹಾಗೂ ಸಮಯೋಚಿತ ಬ್ಯಾಟಿಂಗ್‌ನಿಂದಾಗಿ ಭಾರತ ತಂಡದ ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಯ ಮೂರನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಜಯಗಳಿಸಿ ಸರಣಿ ಕೈ ವಶ ಮಾಡಿಕೊಂಡಿತ್ತು. ಹೀಗಾಗಿ ಅವರಿಗೆ ಪಂದ್ಯಶ್ರೇಷ್ಠ ಪುರಸ್ಕಾರ ಸಿಕ್ಕಿದೆ. ಸರಣಿ ಶ್ರೇಷ್ಠ ಪ್ರಶಸ್ತಿ ಹಾರ್ದಿಕ್​ ಪಾಂಡ್ಯ ತಮ್ಮದಾಗಿಸಿಕೊಂಡಿದ್ದರು.

ಮಾಜಿ ಗುರುವಿಗೆ ಶಾಂಪೆನ್ ಗಿಫ್ಟ್​

ರಿಷಭ್​ ಪಂತ್​ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಜತೆ ಶಾಂಪೆನ್​ ಬಾಟಲ್​ ದೊರಕಿತ್ತು. ಅದನ್ನವರು ಕೈಯಲ್ಲಿ ಹಿಡಿದುಕೊಂಡು ನಿಂತಿದ್ದರು. ಇದೇ ವೇಳೆ ವೀಕ್ಷಕ ವಿವರಣೆಗಾರರಾಗಿ ಕೆಲಸ ಮಾಡುತ್ತಿದ್ದ ರವಿ ಶಾಸ್ತ್ರಿ ಅವರು ರಿಷಭ್​ಗೆ ಅಭಿನಂದನೆ ಸಲ್ಲಿಸಲು ಬಂದಿದ್ದಾರೆ. ಮಾಜಿ ಗುರುವನ್ನು ನೋಡಿದ ರಿಷಭ್​ ಕೂಡ ಓಡಿ ಹೋಗಿ ಅವರನ್ನು ಅಪ್ಪಿಕೊಂಡಿದ್ದಾರೆ. ಇನ್ನೇನು ಅವರು ವಾಪಸ್​ ಹೊರಡುವಾಗ ತಮ್ಮ ಕೈಯಲ್ಲಿದ್ದ ಶಾಂಪೆನ್​ ಬಾಟಲ್​ ಅವರ ಕೈಗಿಟ್ಟಿದ್ದಾರೆ. ಬಳಿಕ ಬೆನ್ನು ಹಿಡಿದು ನಗೆಯಾಡಿದ್ದಾರೆ.

ರವಿ ಶಾಸ್ತ್ರಿಯ ಸಾಕಷ್ಟು ಫೋಟೋಗಳಲ್ಲಿ ಅವರು ಬಿಯರ್​ ಅಥವಾ ಶಾಂಪೆನ್​ ಗ್ಲಾಸ್​ ಹಿಡಿದಿಕೊಂಡಿರುತ್ತಾರೆ. ಹೀಗಾಗಿ ಅವರು ಮದ್ಯಪ್ರಿಯ ಎಂಬ ಮಾತುಗಳು ಅಲ್ಲಲ್ಲಿ ಕೇಳಿ ಬರುತ್ತಿರುತ್ತಿರುತ್ತವೆ. ಹೀಗಾಗಿ ರವಿ ಶಾಸ್ತ್ರಿಗೆ ಸರಿಯಾದ ಗುರುದಕ್ಷಿಣೆಯನ್ನೇ ನೀಡಿದ್ದಾರೆ ಎಂದು ನೆಟ್ಟಿಗರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ | IND vs ENG ODI | ಚೊಚ್ಚಲ ಏಕದಿನ ಶತಕ ಬಾರಿಸಿ ಭರವಸೆ ಮೂಡಿಸಿದ ರಿಷಭ್‌ ಪಂತ್‌

Exit mobile version