ದುಬೈ: ಐಸಿಸಿ ಪ್ರಕಟಿಸಿರುವ 2022ರ ಸಾಲಿನ ವರ್ಷದ ಟೆಸ್ಟ್ ಕ್ರಿಕೆಟ್(ICC Men’s Test Team of the Year) ತಂಡದಲ್ಲಿ ಟೀಮ್ ಇಂಡಿಯಾದ ಯುವ ಆಟಗಾರ ರಿಷಭ್ ಪಂತ್(Rishabh pant test) ಸ್ಥಾನ ಪಡೆದಿದ್ದಾರೆ. ಪಂತ್ ಹೊರತುಪಡಿಸಿ ಉಳಿದ ಯಾವುದೇ ಭಾರತೀಯ ಆಟಗಾರರಿಗೂ ಈ ತಂಡದಲ್ಲಿ ಸ್ಥಾನ ಲಭಿಸಿಲ್ಲ.
ಈ ತಂಡಕ್ಕೆ ಇಂಗ್ಲೆಂಡ್ ಕ್ರಿಕೆಟ್ ತಂಡದ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ನಾಯಕನಾಗಿ ಆಯ್ಕೆಯಾಗಿದ್ದಾರೆ. ರಿಷಭ್ ಪಂತ್ ಅವರು ಕಳೆದ ವರ್ಷ ಆಡಿದ್ದ 12 ಟೆಸ್ಟ್ ಇನಿಂಗ್ಸ್‌ಗಳಲ್ಲಿ 61.81ರ ಸರಾಸರಿಯಲ್ಲಿ 680 ರನ್ ಕಲೆ ಹಾಕಿದ್ದರು. ಎರಡು ಶತಕ ಮತ್ತು ನಾಲ್ಕು ಅರ್ಧಶತಕ ಗಳಿಸಿದ್ದರು. ಇದೇ ಸಾಧನೆಗೆ ಅವರಿಗೆ ಐಸಿಸಿ ತನ್ನ ಟೆಸ್ಟ್ ತಂಡದಲ್ಲಿ ಸ್ಥಾನ ನೀಡಿದೆ.
ಸದ್ಯ ಪಂತ್ ಕಾರು ಅಪಘಾತದಲ್ಲಿ ಗಾಯಗೊಂಡು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಚೇತರಿಕೆಗೆ ಸುಮಾರು 7ರಿಂದ8 ತಿಂಗಳುಗಳ ಸಮಯ ಬೇಕಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಹೀಗಾಗಿ ಪಂತ್ ಅವರು ಈ ವರ್ಷ ಕ್ರಿಕೆಟ್ ಆಡುವುದು ಅನುಮಾನ ಎನ್ನಲಾಗಿದೆ.
ಐಸಿಸಿ ಟೆಸ್ಟ್ ತಂಡ: ಬೆನ್ ಸ್ಟೋಕ್ಸ್ (ನಾಯಕ), ಉಸ್ಮಾನ್ ಖವಾಜಾ, ಕ್ರೇಗ್ ಬ್ರಾಥ್‌ವೇಟ್, ಮಾರ್ನಸ್ ಲಾಬುಶೇನ್, ಬಾಬರ್ ಅಜಂ, ಜಾನಿ ಬೇರ್ಸ್ಟೋ, ರಿಷಭ್ ಪಂತ್ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್, ಕಗಿಸೊ ರಬಾಡ, ನಥನ್ ಲಿಯೊನ್, ಜೇಮ್ಸ್ ಆ್ಯಂಡರ್ಸನ್.
ಇದನ್ನೂ ಓದಿ | ICC Women’s ODI Team of the Year: ಐಸಿಸಿ ವರ್ಷದ ಮಹಿಳಾ ಏಕದಿನ ತಂಡಕ್ಕೆ ಟೀಮ್ ಇಂಡಿಯಾದ ಹರ್ಮನ್ಪ್ರೀತ್ ಕೌರ್ ನಾಯಕಿ