Site icon Vistara News

Rishabh Pant: ಪಂತ್​ ಭೇಟಿಯಾಗಿ ಆರೋಗ್ಯ ವಿಚಾರಿಸಿದ ಸುರೇಶ್​ ರೈನಾ, ಶ್ರೀಶಾಂತ್​, ಹರ್ಭಜನ್​ ಸಿಂಗ್​

Rishabh Pant: Pant met Raina, Sreesanth, Harbhajan Singh

Rishabh Pant: Pant met Raina, Sreesanth, Harbhajan Singh

ನವದೆಹಲಿ: ಕಳೆದ ಡಿಸೆಂಬರ್​ನಲ್ಲಿ ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡ ಟೀಮ್​ ಇಂಡಿಯಾ ಕ್ರಿಕೆಟಿಗ ರಿಷಭ್​ ಪಂತ್​ ಚೇತರಿಕೆಯ ಹಾದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ತಮ್ಮ ಚೇತರಿಕೆಯ ಫೋಟೊವನ್ನು ಪಂತ್​ ಟ್ವಿಟರ್​ ಮೂಲಕ ಹಂಚಿಕೊಂಡಿದ್ದರು. ಸದ್ಯ ಮನೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಪಂತ್​ ಅವರನ್ನು ಟೀಮ್​ ಇಂಡಿಯಾದ ಮಾಜಿ ಆಟಗಾರರಾದ ಹರ್ಭಜನ್​ ಸಿಂಗ್(harbhajan singh)​, ಸುರೇಶ್​ ರೈನಾ(suresh raina) ಮತ್ತು ಎಸ್‌. ಶ್ರೀಶಾಂತ್‌(s sreesanth) ಅವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

ಈಗಾಗಲೇ ಪಂತ್​ ಅವರನ್ನು ಯುವರಾಜ್​ ಸಿಂಗ್ ಸೇರಿ ಹಲವು ಕ್ರಿಕೆಟಿಗರು ಭೇಟಿ ಮಾಡಿ ಆರೋಗ್ಯ ಯೋಗಕ್ಷೇಮ ವಿಚಾರಿಸಿದ್ದಾರೆ. ಇದೀಗ ಸುರೇಶ್ ರೈನಾ, ಹರ್ಭಜನ್ ಸಿಂಗ್ ಹಾಗೂ ಎಸ್. ಶ್ರೀಶಾಂತ್ ಭೇಟಿ ಮಾಡಿ ಚೇತರಿಕೆಯ ಹಾದಿಯಲ್ಲಿರುವ ಪಂತ್​ಗೆ ಸ್ಫೂರ್ತಿದಾಯಕ ಮಾತುಗಳಿಂದ ಧೈರ್ಯ ತುಂಬಿದ್ದಾರೆ.

ಇದನ್ನೂ ಓದಿ Urvashi Rautela: ಪಂತ್ ಬಗ್ಗೆ ಪ್ರಶ್ನಿಸಿದಕ್ಕೆ ಗರಂ ಆದ ನಟಿ ಊರ್ವಶಿ ರೌಟೇಲಾ; ವಿಡಿಯೊ ವೈರಲ್​

ರಿಷಭ್​ ಪಂತ್​ ಅವರನ್ನು ಭೇಟಿ ಮಾಡಿದ ಫೋಟೊವನ್ನು ಹಂಚಿಕೊಂಡಿರುವ ಸುರೇಶ್​​ ರೈನಾ, ಸಹೋದರತ್ವದ ಮುಂದೆ ಯಾವ ಸಮಸ್ಯೆಯೂ ಎದುರಾಗದು. ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಶುಭಹಾರೈಸಿದ್ದಾರೆ. ಶ್ರೀಶಾಂತ್ ಅವರು ಪಂತ್‌ಗೆ ನಿಮ್ಮಲ್ಲಿ ನೀವು ವಿಶ್ವಾಸದಿಂದಿರಿ ಹಾಗೂ ದೃತಿಗೆಡಬೇಡಿ ಎಂದು ಕಿವಿಮಾತು ಹೇಳಿದ್ದಾರೆ.

ಸುಧಾರಣೆಯ ಹಾದಿಯಲ್ಲಿ ಪಂತ್​

ಕಳೆದ ಡಿಸೆಂಬರ್​ 30 ರಂದು ಡೆಲ್ಲಿಯಿಂದ ಡೆಹ್ರಾಡೂನ್​ಗೆ ಹೋಗುವ ಹಾದಿಯಲ್ಲಿ ರಿಷಭ್​ ಪಂತ್​ ಚಲಾಯಿಸುತ್ತಿದ್ದ ಕಾರು ಡಿವೈಡರ್​ಗೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಕಾರು ಬೆಂಕಿ ಹೊತ್ತಿಕೊಂಡು ಸಂಪೂರ್ಣ ಭಸ್ಮವಾಗಿತ್ತು. ಪವಾಡಸದೃಶ ಪಂತ್​ ಪಾರಾಗಿದ್ದರು. ಮೊದಲಿಗೆ ಡೆಹ್ರಾಡೂನ್​ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಅವರು ಬಳಿಕ ಮಂಡಿಯ ಗಾಯಕ್ಕಾಗಿ ಮುಂಬಯಿಯ ಕೋಕಿಲಾ ಬೆನ್​ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು.

ಎಡಗೈ ಬ್ಯಾಟರ್​ ಪ್ರಸ್ತುತ ಮನೆಯಲ್ಲಿಯೇ ಪುನಶ್ಚೇತನಕ್ಕೆ ಒಳಗಾಗುತ್ತಿದ್ದಾರೆ. ಕಳೆದ ಕೆಲವೊಂದು ದಿನಗಳಿಂದ ಅವರು ತಾವು ಊರುಗೋಲಿನ ಸಮೇತ ನಡೆದುಕೊಂಡು ಹೋಗುವ ವಿಡಿಯೊವನ್ನು ಶೇರ್​ ಮಾಡಿಕೊಂಡಿದ್ದರು. ಅಲ್ಲದೇ ಗುಣಮುಖರಾಗುವ ವಿಶ್ವಾಸ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ Rishabh Pant: ರಿಷಭ್​ ಪಂತ್​ ಭೇಟಿಯಾದ ಟೀಮ್​ ಇಂಡಿಯಾದ ಮಾಜಿ ಆಟಗಾರ ಯುವರಾಜ್​ ಸಿಂಗ್​

ಪಂತ್​ ಅವರಿಗೆ ವಿಶ್ವಾಸ ತುಂಬ ನಿಟ್ಟಿನಲ್ಲಿ ಈ ಬಾರಿಯ ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಆಟಗಾರರು ಧರಿಸುವ ಜೆರ್ಸಿ ಅಥವಾ ಕ್ಯಾಪ್​ನಲ್ಲಿ ರಿಷಭ್​ ಪಂತ್​ ಜೆರ್ಸಿ ಸಂಖ್ಯೆ 17 ಪ್ರಿಂಟ್​ ಮಾಡಲು ಮುಂದಾಗಿದ್ದಾರೆ ಎಂದೂ ಮೂಲಗಳು ತಿಳಿಸಿವೆ.

Exit mobile version