Site icon Vistara News

Rishabh Pant: ಉಪನಾಯಕನ ಸ್ಥಾನಕ್ಕೆ ರಿಷಭ್​ ಪಂತ್ ಸೂಕ್ತ ಆಟಗಾರ; ಸಬಾ ಕರೀಮ್

Rishabh Pant: Rishabh Pant is a suitable player for the position of vice-captain; Saba Karim

Rishabh Pant: Rishabh Pant is a suitable player for the position of vice-captain; Saba Karim

ಮುಂಬಯಿ: ಕಳಪೆ ಬ್ಯಾಟಿಂಗ್​ನಿಂದಾಗಿ ಕೆ.ಎಲ್​. ರಾಹುಲ್(KL Rahul)​ ಟೀಮ್​ ಇಂಡಿಯಾದ ಉಪನಾಯಕ ಸ್ಥಾನ ಕಳೆದುಕೊಂಡಿದ್ದಾರೆ. ಇದರ ಬೆನ್ನಲ್ಲೇ ಅನೇಕ ಮಾಜಿ ಆಟಗಾರರು ಮುಂದಿನ ಉಪನಾಯಕ ಯಾರಾಗಬೇಕು ಎಂದು ಸೂಚಿಸಲಾರಂಭಿಸಿದ್ದಾರೆ. ಇದೀಗ ಮಾಜಿ ಕ್ರಿಕೆಟಿಗ ಸಬಾ ಕರೀಮ್(Saba Karim) ಅವರು ಈ ಸ್ಥಾನಕ್ಕೆ ರಿಷಭ್​ ಪಂತ್(Rishabh Pant)​ ಸೂಕ್ತ ಎಂದು ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಸಾಬಾ ಕರೀಮ್​, ಟೆಸ್ಟ್ ತಂಡದ ಉಪನಾಯಕನ ಸ್ಥಾನಕ್ಕೆ ರಿಷಭ್​ ಪಂತ್​ ಸೂಕ್ತ ಆಟಗಾರ ಎಂದು ಹೇಳಿದ್ದಾರೆ. ಕಾರು ಅಪಘಾತದಲ್ಲಿ ಗಾಯಗೊಂಡು ಸದ್ಯ ಚೇತರಿಕೆ ಕಾಣುತ್ತಿರುವ ಪಂತ್​ ತಂಡಕ್ಕೆ ಆಗಮಿಸಿದ ಬಳಿಕ ಅವರಿಗೆ ಟೆಸ್ಟ್ ತಂಡದ ನಾಯಕತ್ವ ನೀಡಬಹುದು. ಟೆಸ್ಟ್​ ಕ್ರಿಕೆಟ್​ನಲ್ಲಿ ಅವರು ಉತ್ತಮ ದಾಖಲೆಯನ್ನು ಹೊಂದಿದ್ದಾರೆ ಹೀಗಾಗಿ ಅವರು ಸೂಕ್ತ ಎಂದು ಬಿಸಿಸಿಐಗೆ ಸಾಬಾ ಕರೀಮ್ ಸಲಹೆ ನೀಡಿದ್ದಾರೆ.

ರಿಷಭ್ ಪಂತ್ ಅವರು ಬಹು-ಮಾದರಿ ಆಟಗಾರರೂ ಆಗಿರುವುದರಿಂದ ಉಪನಾಯಕರಾಗಲು ಹೆಚ್ಚಿನ ಅವಕಾಶಗಳಿವೆ ಎಂದು ನಾನು ಭಾವಿಸುತ್ತೇನೆ. ಅವರು ಎಲ್ಲ ಮೂರು ಸ್ವರೂಪಗಳನ್ನು ಆಡುತ್ತಾರೆ. ಡೆಲ್ಲಿ ಕ್ಯಾಪಿಟಲ್ಸ್ ನಾಯಕನಾಗಿ ಪಂತ್ ಅವರ ಪ್ರದರ್ಶನಗಳು ತುಂಬಾ ಚೆನ್ನಾಗಿವೆ. ಅವರು ಪಂದ್ಯವನ್ನು ಹೇಗೆ ಅರಿಯುತ್ತಾರೆ ಎಂಬುದನ್ನು ನಾವು ನೋಡುತ್ತಿದ್ದೇವೆ, ಅವರಿಗೆ ಸಾಕಷ್ಟು ಆಟದ ಅರಿವು ಇದೆ ಎಂದು ಸಬಾ ಕರೀಂ ಹೇಳಿದ್ದಾರೆ.

ಇದನ್ನೂ ಓದಿ IND VS AUS: ರಾಹುಲ್​ಗೆ ಉಸಿರಾಡಲು ಬಿಡಿ; ಟೀಕಾಕಾರರಿಗೆ ಇಯಾನ್​ ಬಿಷಪ್ ಕಿವಿಮಾತು​

ಈ ಹಿಂದೆ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ರೋಹಿತ್​ ಅನುಪಸ್ಥಿತಿಯಲ್ಲಿ ಕೆ.ಎಲ್​. ರಾಹುಲ್​ಗೆ ನಾಯಕತ್ವ ನೀಡಲಾಗಿತ್ತು. ಉಪನಾಯಕ ಸ್ಥಾನವನ್ನು ಜಸ್​ಪ್ರೀತ್​ ಬುಮ್ರಾಗೆ ನೀಡಲಾಗಿತ್ತು. ಈ ವೇಳೆಯೂ ಅವರು ಪಂತ್​ಗೆ ಉಪನಾಯಕನ ಸ್ಥಾನ ನೀಡದ​ ಕುರಿತು ಬಿಸಿಸಿಐ ವಿರುದ್ಧ ನೇರವಾಗಿ ಕಿಡಿಕಾರಿದ್ದರು.

Exit mobile version