Site icon Vistara News

Rishabh Pant | ಹೆಚ್ಚಿನ ಚಿಕಿತ್ಸೆಗೆ ರಿಷಭ್​ ಪಂತ್​ ಮುಂಬೈಗೆ ಶಿಫ್ಟ್​; ಶ್ಯಾಮ್ ಶರ್ಮಾ ಮಾಹಿತಿ

rishabh pant

ಡೆಹ್ರಾಡೂನ್​: ಕಾರು ಅಪಘಾತದಲ್ಲಿ ಗಾಯಗೊಂಡಿರುವ ಟೀಮ್​ ಇಂಡಿಯಾದ ಕ್ರಿಕೆಟಿಗ ರಿಷಭ್​ ಪಂತ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬುಧವಾರ ಡೆಹ್ರಾಡೂನ್​ನಿಂದ ಮುಂಬಯಿಗೆ ಸ್ಥಳಾಂತರಿಸಲಾಗುತ್ತಿದೆ ಎಂದು ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ (ಡಿಡಿಸಿಎ) ನಿರ್ದೇಶಕ ಶ್ಯಾಮ್ ಶರ್ಮಾ ತಿಳಿಸಿದ್ದಾರೆ.

“ರಿಷಭ್​ ಪಂತ್ ಅವರನ್ನು ಇಂದು(ಬುಧವಾರ ಜ.4) ಮುಂಬೈಗೆ ಸ್ಥಳಾಂತರಗೊಳಿಸಲಿದ್ದೇವೆ. ಅವರನ್ನು ಯಾವ ಆಸ್ಪತ್ರೆಗೆ ದಾಖಲಿಸಲಾಗುತ್ತದೆ ಎಂಬುದನ್ನು ನಂತರ ತಿಳಿಸಲಾಗುವುದು” ಎಂದು ಶ್ಯಾಮ್ ಶರ್ಮಾ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

“ರಿಷಭ್​ ಪಂತ್​ಗೆ ಈಗಾಗಲೇ ಪ್ಲಾಸ್ಟಿಕ್​ ಸರ್ಜರಿ ಮಾಡಲಾಗಿದೆ. ಆದರೆ ಅವರಿಗೆ ಕಾಲಿನ ಇಂಜುರಿ ಹೆಚ್ಚಾಗಿ ಕಾಡುತ್ತಿದೆ. ಹೀಗಾಗಿ ಉತ್ತಮ ಚಿಕಿತ್ಸೆಗಾಗಿ ಅವರನ್ನು ಮುಂಬೈ ಆಸ್ಪತ್ರೆಗೆ ಸ್ಥಳಾಂತರಿಸಲು ಯೋಜನೆ ರೂಪಿಸಲಾಗಿದೆ” ಎಂದು ಶ್ಯಾಮ್ ಶರ್ಮಾ ಹೇಳಿದ್ದಾರೆ. ಜತೆಗೆ ಬಿಸಿಸಿಐ ಕೂಡ ಪಂತ್​ ಅವರನ್ನು ಮುಂಬೈಗೆ ಕರೆತರಲು ಸಿದ್ಧತೆ ನಡೆಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಶುಕ್ರವಾರ (ಡಿಸೆಂಬರ್​ 30) ಪಂತ್ ಕಾರಿನಲ್ಲಿ​ ದೆಹಲಿಯಿಂದ ಉತ್ತರಾಖಂಡದ ಕಡೆಗೆ ಏಕಾಂಗಿಯಾಗಿ ಹೊರಟಿದ್ದರು. ಇದೇ ವೇಳೆ ಡೆಲ್ಲಿ- ಡೆಹ್ರಾಡೂನ್​ ಎಕ್ಸ್​ಪ್ರೆಸ್​ವೇನ ರೂರ್ಕಿ ನರ್ಸನ್​ ಗಡಿಯ ಬಳಿ ಬೆಳಗ್ಗೆ 5.30ಕ್ಕೆ ಅಪಘಾತ ಸಂಭವಿಸಿ ಗಂಭೀರ ಗಾಯಗೊಂಡಿದ್ದರು. ಸದ್ಯ ಅವರು ಚೇತರಿಕೆ ಕಾಣುತ್ತಿದ್ದಾರೆ.

ಇದನ್ನೂ ಓದಿ | Rishabh Pant | ನೀವೊಬ್ಬ ಫೈಟರ್​; ರಿಷಭ್​ ಪಂತ್ ಚೇತರಿಕೆಗೆ ಟೀಮ್​ ಇಂಡಿಯಾ ಆಟಗಾರರ ಹಾರೈಕೆ

Exit mobile version