Site icon Vistara News

Rishabh Pant: ಎನ್​ಸಿಎ ಸೇರಿದ ರಾಹುಲ್​ಗೆ ಸ್ವಾಗತಿಸಿದ ರಿಷಭ್​ ಪಂತ್​; ವೈರಲ್​ ಆಯ್ತು ಟ್ವೀಟ್​

rahul and pant in NCA bangalore

ಬೆಂಗಳೂರು: ಐಪಿಎಲ್​ ವೇಳೆ ಸ್ನಾಯು ಸೆಳೆತದ ನೋವಿಗೆ ಸಿಲುಕಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಟೀಮ್​ ಇಂಡಿಯಾದ ಆಟಗಾರ ಕೆ.ಎಲ್​ ರಾಹುಲ್(KL Rahul)​ ಅವರು ಬುಧವಾರ ಬೆಂಗಳೂರಿನ ಎನ್​ಸಿಎ(NCA) ಶಿಬಿರಕ್ಕೆ ಸೇರಿಕೊಂಡಿದ್ದಾರೆ. ಇದೇ ಶಿಬಿರದಲ್ಲಿ ಕಾರು ಅಪಘಾತದಲ್ಲಿ ಗಾಯಗೊಂಡು ಚೇತರಿಕೆ ಕಾಣುತ್ತಿರುವ ರಿಷಭ್​ ಪಂತ್​(Rishabh Pant) ಅವರು ರಾಹುಲ್​ಗೆ ವಿಶೇಷ ಟ್ವೀಟ್​ ಮಾಡುವ ಮೂಲಕ ಸ್ವಾಗತಿಸಿದ್ದಾರೆ.

ಸದ್ಯ ಉಭಯ ಆಟಗಾರರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಯಲ್ಲಿ ಪುನರ್ವಸತಿಯಲ್ಲಿದ್ದಾರೆ​. ಪಂತ್​ ಅವರು ತಿಂಗಳುಗಳ ಹಿಂದೇಯೇ ಇಲ್ಲಿ ಕಠಿಣ ತರಬೇತಿ ಪಡೆಯುತ್ತಿದ್ದಾರೆ. ಏಷ್ಯಾ ಕಪ್​ ಟೂರ್ನಿಯನ್ನು ಎದುರು ನೋಡುತ್ತಿರುವ ರಾಹುಲ್​ ಕೂಡ ಬುಧವಾರ ಇಲ್ಲಿಗೆ ಆಗಮಿಸಿದ್ದಾರೆ. ವರ್ಕ್​ಔಟ್​ ಆರಂಭಿಸಿದ ರಾಹುಲ್​ ಅವರ ಫೋಟೊವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿರುವ ಪಂತ್​ “ವೆಲ್​ಕಮ್​ ಬ್ರದರ್”​(ಸಹೋದರನಿಗೆ ಸ್ವಾಗತ) ಎಂದು ಬರೆದುಕೊಂಡು ನಗುತ್ತಿರುವ ಎರಡು ಎಮೊಜಿಯನ್ನು ಹಾಕಿದ್ದಾರೆ.

ಊರುಗೋಲಿನ ಸಹಾಯದಿಂದ ನಡೆಯುತ್ತಿದ್ದ ಪಂತ್​ ಇದೀಗ ಯಾವುದೇ ಸಹಾಯವಿಲ್ಲದೆ ನಡೆದಾಡುತ್ತಿದ್ದಾರೆ. ಅದರಲ್ಲೂ ಅವರು ಮೆಟ್ಟಿಲುಗಳನ್ನು ಏರಿ ಇಳಿಯುತ್ತಿರುವ ವಿಡಿಯೊ ವೈರಲ್​ ಆಗಿದ್ದು ಶೀಘ್ರದಲ್ಲೇ ಪಂತ್​ ಕ್ರಿಕೆಟ್​ಗೆ ಮರಳುವ ಸಾಧ್ಯತೆ ಹೆಚ್ಚಿದೆ ಎಂದು ಅವರ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ Team India Cricket Schedule 2023: ಟೀಮ್​ ಇಂಡಿಯಾ​ ಕ್ರಿಕೆಟ್​ ಸರಣಿಯ ಸಂಪೂರ್ಣ ವೇಳಾಪಟ್ಟಿ

ರಾಹುಲ್​ ಅವರು ಐಪಿಎಲ್​ನ ಆರ್​ಸಿಬಿ ವಿರುದ್ಧ ಪಂದ್ಯದ ವೇಳೆ​ ಬೌಂಡರಿ ಲೈನ್​ನಲ್ಲಿ ಫೀಲ್ಡಿಂಗ್​ ಮಾಡುವಾಗ ಗಂಭೀರ ಗಾಯಗೊಂಡಿದ್ದರು. ತೀವ್ರ ಸ್ವರೂಪದ ಗಾಯಕ್ಕೆ ತುತ್ತಾದ ಅವರಿಗೆ ವೈದ್ಯರು ಶಸ್ತ್ರಚಿಕಿತ್ಸೆಗೆ ಒಳಗಾಗುವಂತೆ ಸೂಚಿಸಿದ್ದರು. ಇದೇ ಕಾರಣಕ್ಕೆ ಅವರು ಐಪಿಎಲ್​ ಮತ್ತು ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಿಂದ ಹೊರಗುಳಿದಿದ್ದರು. ರಾಹುಲ್​ ಅನುಪಸ್ಥಿತಿಯಲ್ಲಿ ಕೃಣಾಲ್​ ಪಾಂಡ್ಯ ಅವರು ಲಕ್ನೋ ಸೂಪರ್​ ಜೈಂಟ್ಸ್​ ತಂಡದ ನಾಯಕತ್ವವನ್ನು ನಿರ್ವಹಿಸಿದ್ದರು.

Exit mobile version