Site icon Vistara News

Rishabh Pant | ಸತತ ವೈಫಲ್ಯ ಕಾಣುತ್ತಿರುವ ರಿಷಭ್​ ಪಂತ್​ಗೆ ವಿಶ್ರಾಂತಿ ಅಗತ್ಯ; ಕೆ. ಶ್ರೀಕಾಂತ್ ಸಲಹೆ

rishabh pant

ನವದೆಹಲಿ: ಟೀಮ್ ಇಂಡಿಯಾದ ಯುವ ಆಟಗಾರ ರಿಷಭ್ ಪಂತ್(Rishabh Pant) ಅವರ ಸತತ ಬ್ಯಾಟಿಂಗ್​ ವೈಫಲ್ಯದ ಬಗ್ಗೆ ಮಾತನಾಡಿದ ಭಾರತ ತಂಡದ ಮಾಜಿ ಕ್ರಿಕೆಟಿಗ ಕೆ. ಶ್ರೀಕಾಂತ್​ ಅವರು ಪಂತ್​ಗೆ ವಿಶ್ರಾಂತಿ ನೀಡಲು ಇದು ಸರಿಯಾದ ಸಮಯ ಎಂದು ಹೇಳಿದ್ದಾರೆ.

ಮಂಗಳವಾರ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ ಶ್ರೀಕಾಂತ್, ಇಷ್ಟೆಲ್ಲಾ ಅವಕಾಶಗಳನ್ನು ನೀಡಿದ ಬಳಿಕವೂ ರಿಷಬ್ ಪಂತ್ ಫಾರ್ಮ್‌ಗೆ ಮರಳದಿದ್ದರೆ, ಆತನಿಗೆ ಕ್ರಿಕೆಟ್‌ನಿಂದ ವಿರಾಮ ನೀಡಬೇಕು. ಇದರಿಂದ ಅವರು ಸಂಪೂರ್ಣವಾಗಿ ಫ್ರೆಶ್ ಆಗಿ ಮೈದಾನದ ಹೊರಗಿನ ಒತ್ತಡವನ್ನು ಬಿಟ್ಟು ಕ್ರಿಕೆಟಿಗರಾಗಿ ತಮ್ಮ ಪಾತ್ರವನ್ನು ಸರಿಯಾಗಿ ನಿರ್ವಹಿಸುತ್ತಾರೆ ಎಂದು ಶ್ರೀಕಾಂತ್ ಅಭಿಪ್ರಾಯಪಟ್ಟಿದ್ದಾರೆ.

“ಒಬ್ಬ ಆಟಗಾರ ಸತತ ವೈಫಲ್ಯ ಅನುಭವಿಸುತ್ತಿದ್ದಾನೆ ಎಂದರೆ ಆತನಿಗೆ ಆಟದ ಮೇಲೆ ಗಮನಹರಿಸಲು ಸಾಧ್ಯವಾಗುತ್ತಿಲ್ಲ ಎಂದರ್ಥ. ಆತನಿಗೆ ಇನ್ಯಾವುದೋ ಸಮಸ್ಯೆ ಕಾಡುತ್ತಿದೆ ಎನ್ನಬಹುದು. ಇಂತಹ ಸಮಯದಲ್ಲಿ ಕ್ರಿಕೆಟ್​ನಿಂದ ವಿಶ್ರಾಂತಿ ನೀಡಿದರೆ ರಿಫ್ರೆಶ್ ​ಆಗಿ ಮತ್ತೆ ಆಟದ ಕಡೆ ಗಮನ ನೀಡಬಹುದು ಆದ್ದರಿಂದ ಪಂತ್​ಗೆ ಕೆಲ ದಿನಗಳ ಕಾಲ ವಿಶ್ರಾಂತಿ ನೀಡಿದರೆ ಒಳಿತು” ಎಂದು ಬಿಸಿಸಿಐಗೆ ಶ್ರೀಕಾಂತ್​ ಸಲಹೆ ನೀಡಿದ್ದಾರೆ.

ಇದನ್ನೂ ಓದಿ | IND VS NZ | ಭಾರತ ಮತ್ತು ಕಿವೀಸ್​ ವಿರುದ್ಧದ ಅಂತಿಮ ಪಂದ್ಯದ ಪಿಚ್​ ರಿಪೋರ್ಟ್​, ಹವಾಮಾನ ವರದಿ ಹೇಗಿದೆ?

Exit mobile version