ನವದೆಹಲಿ: ಕಾರು ಅಪಘಾತದಲ್ಲಿ ಗಾಯಗೊಂಡು ಚೇತರಿಕೆ ಕಂಡಿರುವ ಟೀಮ್ ಇಂಡಿಯಾದ ಯುವ ವಿಕೆಟ್ ಕೀಪರ್ ರಿಷಭ್ ಪಂತ್(Rishabh Pant) ಕ್ರಿಕೆಟ್‌ಗೆ ಮರಳುವ ಸಿದ್ಧತೆಯಲ್ಲಿದ್ದಾರೆ. ಈ ಬಾರಿ ಐಪಿಎಲ್(IPL 2024) ಟೂರ್ನಿಯಲ್ಲಿ ಕಣಕ್ಕಿಳಿಯುವ ಮೂಲಕ ಅವರ ಕ್ರಿಕೆಟ್ ಜರ್ನಿ ಮತ್ತೆ ಪುನರಾರಂಭಗೊಳ್ಳುವ ಸಾಧ್ಯತೆ ಇದೆ. ಇದೀಗ ಅವರ ಫಿಟ್ನೆಸ್ ವರದಿ ಕೂಡ ಹೊರಬೀಳಲಿದೆ.
ಮಾರ್ಚ್ 5ರಂದು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯು(NCA) ಪಂತ್ ಅವರ ಫಿಟ್ನೆಸ್ ವರದಿಯನ್ನು ಘೋಷಿಸಲಿದೆ ಎಂದು ಡೆಲ್ಲಿ ಕ್ಯಾಪಿಟಲ್ಸ್‌ನ ಕ್ರಿಕೆಟ್ ನಿರ್ದೇಶಕ ಸೌರವ್ ಗಂಗೂಲಿ ಹೇಳಿದ್ದಾರೆ. ಪಂತ್ ಚೇತರಿಕೆ ಬಗ್ಗೆ ಮಾತನಾಡಿದ ಗಂಗೂಲಿ, “ಪಂತ್ ಅವರು ಈಗಾಗಲೇ ಹಲವು ಫಿಟ್ನೆಸ್ ತರಬೇತಿ ನಡೆಸಿ ಕ್ರಿಕೆಟ್ ಆಡಲು ಸಂಪೂರ್ಣ ಸಿದ್ಧರಾಗಿದ್ದಾರೆ. ಹೀಗಾಗಿ ರಿಷಭ್ ಅವರು ಫೂಲ್ ಫಿಟ್ ಆಗಿದ್ದಾರೆ ಎಂದು ಎನ್‌ಸಿಎ ಮಾರ್ಚ್ 5ರಂದು ಘೋಷಿಸಲಿದೆ’ ಎಂದು ಮಾಹಿತಿ ನೀಡಿದರು.
ಇದೇ ವೇಳೆ ಈ ಬಾರಿಯ ಆವೃತ್ತಿಯಲ್ಲಿ ಡೆಲ್ಲಿ ತಂಡವನ್ನು ಯಾರು ಮುನ್ನಡೆಸಲಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಗಂಗೂಲಿ, “ಪಂತ್ ಸಂಪೂರ್ಣ ಫಿಟ್ ಎಂದು ಎನ್‌ಸಿಎ ಘೋಷಿಸುವವರೆಗೂ ಕಾಯಿರಿ. ಬಳಿಕ ನಾವು, ನಾಯಕತ್ವದ ಬಗ್ಗೆ ಅಧಿಕೃತ ಮಾಹಿತಿ ನೀಡುತ್ತೇವೆ ಎಂದರು. ಕಳೆದ ಬಾರಿ ಪಂತ್ ಅನುಪಸ್ಥಿತಿಯಲ್ಲಿ ಡೇವಿಡ್ ವಾರ್ನರ್ ಅವರು ಡೆಲ್ಲಿ ತಂಡವನ್ನು ಮುನ್ನಡೆಸಿದ್ದರು. ಆದರೆ ತಂಡ ಅತ್ಯಂತ ಕಳಪೆ ಪ್ರದರ್ಶನ ತೋರಿ ಲೀಗ್ನಿಂದ ಮೊದಲ ತಂಡವಾಗಿ ಹೊರಬಿದ್ದಿತ್ತು.
ಇದನ್ನೂ ಓದಿ Rishabh Pant: ವರ್ಕೌಟ್ ವಿಡಿಯೊ ಹಂಚಿಕೊಂಡು ಅಭಿಮಾನಿಗಳಿಗೆ ಸ್ಪಷ್ಟ ಸಂದೇಶ ನೀಡಿದ ಪಂತ್; ಏನದು?
Pushing the limits 💪#RP17 pic.twitter.com/XyDmSWic3H
— Rishabh Pant (@RishabhPant17) February 27, 2024
“ರಿಷಭ್ ಪಂತ್ ಅವರು ಈ ಬಾರಿಯ ಐಪಿಎಲ್ ಆಡಲು ತುಂಬಾ ಉತ್ಸುಕರಾಗಿದ್ದಾರೆ. ಜತೆಗೆ ಆತ್ಮವಿಶ್ವಾಸ ಕೂಡ ಹೆಚ್ಚಿಸಿಕೊಂಡಿದ್ದಾರೆ. ಕ್ರಿಕೆಟ್ ಆಡುವ ಎಲ್ಲ ಸಾಮರ್ಥ್ಯ ಅವರಲ್ಲಿದೆ. ಅವರು ಈ ಬಾರಿ ಸಂಪೂರ್ಣವಾಗಿ ಟೂರ್ನಿಯಲ್ಲಿ ಆಡುವುದು ಖಚಿತ. ಆದರೆ, ವಿಕೆಟ್ ಕೀಪಿಂಗ್ ಬಗ್ಗೆ ಯೋಚಿಸಲಿದ್ದೇವೆ” ಎಂದು ಪಾಂಟಿಂಗ್ ಕೂಡ ಕೆಲವು ದಿನಗಳ ಹಿಂದೆ ಹೇಳಿದ್ದರು. ಒಟ್ಟಾರೆ ಪಂತ್ ಕ್ರಿಕಟ್ ಕಮ್ಬ್ಯಾಕ್ಗೆ ಐಪಿಎಲ್ ವೇದಿಯಾಗಿರುವುದಂತು ನಿಜ.
ಸದ್ಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಪುನಶ್ಚೇತನ ಶಿಬಿರದಲ್ಲಿರುವ ಪಂತ್ ಫಿಟ್ನೆಸ್ ಅಭ್ಯಾಸ ನಡೆಸುತ್ತಿದ್ದಾರೆ. ಬ್ಯಾಟಿಂಗ್ ಮತ್ತು ಕೀಪಿಂಗ್ ಅಭ್ಯಾಸ ನಡೆಸಿದ ವಿಡಿಯೊಗಳು 2 ತಿಂಗಳ ಹಿಂದೆ ವೈರಲ್ ಆಗಿತ್ತು. ಅಲ್ಲದೆ ಕರ್ನಾಟಕದ JSW ವಿಜಯನಗರದಲ್ಲಿ ನಡೆದ ಕ್ರಿಕೆಟ್ ಅಭ್ಯಾಸ ಪಂದ್ಯವೊಂದರಲ್ಲಿ ಪಂತ್ ಬ್ಯಾಟಿಂಗ್ ನಡೆಸಿದ್ದರು. ತಮ್ಮ ಎಂದಿನ ಶೈಲಿಯಲ್ಲೇ ಸಿಕ್ಸರ್ ಮತ್ತು ಬೌಂಡರಿ ಕೂಡ ಬಾರಿಸಿ ಮಿಂಚಿದ್ದರು.
2022ರ ಡಿಸೆಂಬರ್ 30ರಂದು(rishabh pant accident date) ರಿಷಭ್ ಪಂತ್ ಅವರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರು ಡಿವೈಡರ್ಗೆ ಡಿಕ್ಕಿ(rishabh pant accident) ಹೊಡೆದಿತ್ತು. ಈ ಭೀಕರ ಅಪಘಾತದಲ್ಲಿ ಅವರ ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು. ಆದರೆ, ಪಂತ್ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದರು.