ವಿಶಾಖಪಟ್ಟಣ ಡೆಲ್ಲಿ ತಂಡದ ನಾಯಕ ರಿಷಭ್ ಪಂತ್ (Rishabh Pant) ಭಾನುವಾರ ರಾತ್ರಿ ಚೆನ್ನೈ ಸೂಪರ್ ಕಿಂಗ್ಸ್ ಬೌಲರ್ಗಳನ್ನು ಬಲಶಾಲಿ ಹೊಡೆತಗಳ ಮೂಲಕ ಬೆಚ್ಚಿ ಬೀಳಿಸಿದರು. ವಿಶಾಖಪಟ್ಟಣಂನಲ್ಲಿ ನಡೆದ ಐಪಿಎಲ್ (IPL 2024) ಪಂದ್ಯದಲ್ಲಿ ಪಂತ್ ಕೇವಲ 32 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ಗಳ ಸಹಾಯದಿಂದ 51 ರನ್ ಗಳಿಸಿದರು. 2022 ರ ಡಿಸೆಂಬರ್ನಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಿಂದ ಸುಧಾರಿಸಿಕೊಂಡ ಅವರಿಗೆ ಸ್ಪರ್ಧಾತ್ಮಕ ಕ್ರಿಕೆಟ್ನಲ್ಲಿ ದೊರಕಿದ ಮೊದಲ ಅರ್ಧಶತಕವಾಗಿದೆ. ಐಪಿಎಲ್ 2024ರಲ್ಲಿಯೇ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಿದ ಪಂತ್ ಮೊದಲ ಎರಡು ಪಂದ್ಯಗಳಲ್ಲಿ ಬ್ಯಾಟಿಂಗ್ನಲ್ಲಿ ಹೆಚ್ದು ಪ್ರಭಾವ ಬೀರಿರಲಿಲ್ಲ. ಆದಾಗ್ಯೂ, ಮೂರನೇ ಪಂದ್ಯವು ಪಂತ್ ಅವರ ಅದೃಷ್ಟ ಬದಲಾಯಿಸಿತು.
That iconic one-handed six is back 🥹#DCvCSK #JioCinemaSports #TATAIPL #IPLonJioCinema pic.twitter.com/N01gOlTLRM
— JioCinema (@JioCinema) March 31, 2024
ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 5 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿದೆ. ಆರಂಭಿಕ ಜೋಡಿ ಡೇವಿಡ್ ವಾರ್ನರ್ ಮತ್ತು ಪೃಥ್ವಿ ಶಾ ಅವರ ಅರ್ಧಶತಕದ ಜತೆಯಾಟದ ನಂತರ ಪಂತ್ ತಮ್ಮ ಇನಿಂಗ್ಸ್ ತೋರಿದರು. ಅವರು ಅದ್ಭುತ ಅರ್ಧಶತಕದೊಂದಿಗೆ ತಮ್ಮ ಆಗಮನವನ್ನು ಪ್ರಸ್ತುತಪಡಿಸಿದರು.
ಇದನ್ನೂ ಓದಿ: IPL 2024 : ಹೈದರಾಬಾದ್ ವಿರುದ್ಧ ಗುಜರಾತ್ ತಂಡಕ್ಕೆ7 ವಿಕೆಟ್ ಜಯ
ವಾರ್ನರ್ ಮತ್ತು ಶಾ 93 ರನ್ಗಳ ಆರಂಭಿಕ ಜೊತೆಯಾಟವನ್ನು ಹಂಚಿಕೊಂಡರು. ಆದಾಗ್ಯೂ ಪಂತ್ ಅವರ ಇನಿಂಗ್ಸ್ ಹೆಚ್ಚು ಗಮನ ಸೆಳೆಯಿತು. 2022 ರ ಡಿಸೆಂಬರ್ನಲ್ಲಿ ರಸ್ತೆ ಅಪಘಾತದಿಂದ ಚೇತರಿಸಿಕೊಂಡ ನಂತರ ಪಂದ್ಯಾವಳಿಗೆ ಬಂದ ಪಂತ್, ಘಟನೆಯ ಬಳಿಕ 15 ತಿಂಗಳಲ್ಲಿ ತಮ್ಮ ಮೊದಲ ಅರ್ಧಶತಕ ಗಳಿಸಿದರು.
ವಾರ್ನರ್ ಸಾಹಸ
ವಾರ್ನರ್ 35 ಎಸೆತಗಳಲ್ಲಿ 52 ರನ್ ಗಳಿಸಿದರು. ಅವರ ಇನಿಂಗ್ಸ್ನಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್ಗಳಿದ್ದವು. ಇದು ಅವರ 110 ನೇ ಟಿ 20 ಅರ್ಧಶತಕವೂ ಹೌದು. ಅವರು ಟಿ 20 ಯಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಗಳಿಸಿದ ಕ್ರಿಸ್ ಗೇಲ್ ಅವರ ದಾಖಲೆಯನ್ನು ಸರಿಗಟ್ಟಿದರು..
ಈ ಋತುವಿನಲ್ಲಿ ತಮ್ಮ ಮೊದಲ ಪಂದ್ಯವನ್ನು ಆಡುತ್ತಿರುವ ಪೃಥ್ವಿ ಶಾ , ತಮ್ಮ ಅಪಾರ ಪ್ರತಿಭೆಗೆ ತಕ್ಕಂತೆ ಆಡಲಿಲ್ಲ. 27 ಎಸೆತಗಳಲ್ಲಿ 43 ಗಳಿಸಿದರು. ಅವರು ಎರಡು ಸಿಕ್ಸರ್ ಮತ್ತು ನಾಲ್ಕು ಬೌಂಡರಿಗಳನ್ನು ಬಾರಿಸಿದರು. ಅವರು ವೇಗಿ ಮಥೀಶಾ ಪಥಿರಾನಾ ವಾರ್ನರ್ ಅವರನ್ನು ಔಟ್ ಮಾಡಿದರು. ಆದರೆ ತಮ್ಮ ಹಿಂದಿನ ಎರಡು ಇನ್ನಿಂಗ್ಸ್ಗಳಲ್ಲಿ ಉತ್ತಮವಾಗಿ ಕಾಣಿಸಿಕೊಂಡ ಪಂತ್, ಆರಂಭದಲ್ಲಿ ನಿಧಾನವಾಗಿ ಆಡಿದು. ಬಳಿಕ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಮಿಚೆಲ್ ಮಾರ್ಷ್ ಕೂಡ 12 ಎಸೆತಗಳಲ್ಲಿ 18 ರನ್ ಸಿಡಿಸಿ ಔಟಾದರು.