Site icon Vistara News

Rishabh Pant | ಕಾರು ಅಪಘಾತದ ಬಳಿಕ ಮೊದಲ ಬಾರಿ ಎದ್ದು ನಿಂತ ರಿಷಭ್​ ಪಂತ್​; ಸರ್ಜರಿ ಬಳಿಕ ಚೇತರಿಕೆ

ind vs nz pant

ಮುಂಬಯಿ : ಡೆಲ್ಲಿ- ಡೆಹ್ರಾಡೂನ್​ ಎಕ್ಸ್​ಪ್ರೆಸ್ ವೇನಲ್ಲಿ ನಡೆದ ಭೀಕರ ಕಾರು ಅವಘಡದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ವಿಕೆಟ್​ಕೀಪರ್​ ಬ್ಯಾಟರ್​ ರಿಷಭ್​ ಪಂತ್​ (Rishabh Pant) ಅವರಿಗೆ ಮಂಡಿಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಇದೀಗ ಅವರು ಊರುಗೋಲಿನ ಸಹಾಯದಿಂದ ಎದ್ದು ನಿಲ್ಲುತ್ತಿದ್ದಾರೆ ಎಂಬುದಾಗಿ ಅಸ್ಪತ್ರೆಯ ವೈದ್ಯರ ತಂಡ ಮಾಹಿತಿ ನೀಡಿದೆ. ಈ ಮೂಲಕ ಭಾರತ ತಂಡದ ಆಟಗಾರ ಅತಿವೇಗದಲ್ಲಿ ಸುಧಾರಿಸುತ್ತಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ರಿಷಭ್ ಪಂತ್ ಅವರು ಡಿಸೆಂಬರ್​ 30ರಂದು ಡೆಲ್ಲಿಯಿಂದ ಉತ್ತರಾಖಂಡದ ತಮ್ಮೂರು ರೂರ್ಕಿಗೆ ಹೋಗುವಾಗ ಕಾರು ಡಿವೈಡರ್​ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿತ್ತು. ಘಟನೆಯಲ್ಲಿ ಪಂತ್ ಬೆನ್ನಿಗೆ ಸುಟ್ಟ ಗಾಯಗಳಾಗಿದ್ದರೆ ಹಣೆಯ ಚರ್ಮ ಸುಲಿದಿತ್ತು. ಜತೆಗೆ ಅವರ ಮಂಡಿಯ ಗಾಯಕ್ಕೆ ಒಳಗಾಗಿದ್ದರು. ಆರಂಭದಲ್ಲಿ ಅವರಿಗೆ ಡೆಹ್ರಾಡೂನ್​ನ ಮ್ಯಾಕ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಪ್ಲಾಸ್ಟಿಕ್​ ಸರ್ಜರಿ ಹಾಗೂ ಮಂಡಿಯ ಶಸ್ತ್ರಚಿಕಿತ್ಸೆಗಾಗಿ ಮುಂಬಯಿಯ ಕೋಕಿಲಾ ಬೆನ್​ ಆಸ್ಪತ್ರೆಗೆ ಏರ್​ಲಿಫ್ಟ್​ ಮಾಡಲಾಯಿತು.

ಮುಂಬಯಿಯ ನುರಿತ ವೈದ್ಯರು ಪಂತ್​ ಅವರ ಮೊಣಕಾಲಿನ ಶಸ್ತ್ರಚಿಕಿತ್ಸೆಯನ್ನು ಮುಗಿಸಿದ್ದಾರೆ. ಇದೀಗ ತಮ್ಮ ಕಾಲಿನ ಮೇಲೆ ನಿಂತಿದ್ದಾರೆ. ಈ ಮೂಲಕ ಅವರ ಆರೋಗ್ಯ ಸ್ಥಿತಿ ಸುಧಾರಣೆಯಾಗಿದೆ ಎಂಬುದಾಗಿ ವೈದ್ಯರು ಮಾಹಿತಿ ನೀಡಿದ್ದಾರೆ. ಅವರಿಗಿನ್ನು ಹಣೆಯ ಮೇಲಿನ ಗಾಯಕ್ಕೆ ಹಾಗೂ ಸುಟ್ಟು ಹೋಗಿರುವ ಬೆನ್ನಿಗೆ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ | Rishabh Pant | 16ನೇ ಆವೃತ್ತಿಯ ಐಪಿಎಲ್​ನಿಂದ ರಿಷಭ್​ ಪಂತ್​ ಔಟ್​; ಖಚಿತಪಡಿಸಿದ ಡೆಲ್ಲಿ ಕ್ಯಾಪಿಟಲ್ಸ್‌!

Exit mobile version