Site icon Vistara News

Rishabh Pant | ಕಾರು ಅಪಘಾತದ ವೇಳೆ ಪ್ರಾಣ ಕಾಪಾಡಿದವರ ಚಿತ್ರ ಹಾಕಿ ಧನ್ಯವಾದ ಹೇಳಿದ ರಿಷಭ್​ ಪಂತ್​

rishabh1

ಮುಂಬಯಿ: ಕಳೆದ ತಿಂಗಳು ನಡೆದ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಭಾರತ ತಂಡದ ವಿಕೆಟ್​ಕೀಪರ್​ ಬ್ಯಾಟರ್​ ಇದೀಗ ಸುಧಾರಿಸಿಕೊಳ್ಳುತ್ತಿದ್ದಾರೆ. ಸೋಮವಾರ ಸಂಜೆ (ಜನವರಿ 16ರಂದು) ಟ್ವಿಟರ್​ ಹಾಗೂ ಇನ್​ಸ್ಟಾಗ್ರಾಮ್​ ಮೂಲಕ ಮೊದಲ ಬಾರಿಗೆ ತಮ್ಮ ಆರೋಗ್ಯದ ಕುರಿತು ಸ್ವತಃ ಅವರೇ ಮಾಹಿತಿ ಪ್ರಕಟಿಸಿದ್ದಾರೆ. ಇದೇ ವೇಳೆ ಅವರು ತಮ್ಮನ್ನು ಕಾಪಾಡಿದ ಇಬ್ಬರು ಯುವಕರಿಗೆ ಧನ್ಯವಾದ ಹೇಳಲೂ ಮರೆಯಲಿಲ್ಲ. ಅವರಿಬ್ಬರ ಚಿತ್ರವನ್ನು ಹಾಕಿ, ಇವರ ಋಣ ತೀರಿಸಲು ಸಾಧ್ಯವೇ ಇಲ್ಲ ಎಂದು ಬರೆದುಕೊಂಡಿದ್ದಾರೆ.

ರಿಷಭ್​ ಪಂತ್​ ಅವರು ಪಸ್ತುತ ಮುಂಬಯಿಯ ಕೋಕಿಲಾ ಬೆನ್​ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾರೆ. ಅಲ್ಲಿಂದಲೇ ಅವರು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ಇದೇ ವೇಳೆ ಅವರು ಈ ಇಬ್ಬರು ಯುವಕರಿಗೂ ಕೃತಜ್ಱತೆ ಸಲ್ಲಿಸಿದ್ದಾರೆ.

ಎಲ್ಲರಿಗೂ ವೈಯಕ್ತಿಕವಾಗಿ ಕೃತಜ್ಞತೆ ಹೇಳುವುದಕ್ಕೆ ನನ್ನಿಂದ ಸಾಧ್ಯವಾಗದು. ಆದರೆ ಈ ಇಬ್ಬರು ಹೀರೋಗಳನ್ನು ನಾನು ನಿಮ್ಮನ್ನು ಪರಿಚಯಿಸಬೇಕಾಗಿದೆ. ರಜತ್​ ಕುಮಾರ್​, ನಿಶು ಕುಮಾರ್​ ಅವಘಡ ಸಂಭವಿಸಿದ ಬಳಿಕ ನನ್ನನ್ನು ಆಸ್ಪತ್ರೆಗೆ ಸೇರಿಸಿದವರು. ನಿಮ್ಮ ಇಬ್ಬರ ಸಹಾಯವನ್ನು ಮರೆಯಲು ಸಾಧ್ಯವೇ ಇಲ್ಲ. ನಿಮಗೆ ಚಿರಋಣಿ ಎಂದು ಪಂತ್​ ಟ್ವೀಟ್​ ಮಾಡಿದ್ದಾರೆ.

ಪಂತ್​ ಹಾಕಿರುವ ಚಿತ್ರದಲ್ಲಿ ಅವರಿಬ್ಬರ ಜತೆ ರಿಷಭ್​ ಪಂತ್​ ಅವರ ತಾಯಿಯೂ ಜತೆಗೆ ನಿಂತಿದ್ದಾರೆ. ಟ್ವೀಟ್​ನಲ್ಲಿ ಅವರು ತಮಗೆ ನೆರವು ನೀಡಿದ ಉಳಿದವರಿಗೂ ಧನ್ಯವಾದ ತಿಳಿಸಿದ್ದಾರೆ.

ರಿಷಭ್​ ಪಂತ್ ಅವರ ಕಾರು ಅವಘಡದ ಬಳಿಕ ಬೆಂಕಿಗೆ ಆಹುತಿಯಾಗಿತ್ತು. ಕಷ್ಟಪಟ್ಟು ಸುಟ್ಟ ಗಾಯಗಳ ಸಮೇತ ಕಾರಿನಿಂದ ಹೊರಗೆ ಬಂದಿದ್ದ ಪಂತ್ ಆಸ್ಪತ್ರೆ ತಲುಪುವಂತೆ ಈ ಯುವಕರು ವ್ಯವಸ್ಥೆ ಮಾಡಿದ್ದರು.

ಇದನ್ನೂ ಓದಿ | Rishabh Pant | ರಿಷಭ್​ ಪಂತ್​ ಏಕದಿನ ವಿಶ್ವ ಕಪ್​ನಿಂದ ಬಹುತೇಕ ಔಟ್​; ವರದಿ

Exit mobile version