Site icon Vistara News

Rishabh pant | ಪಂತ್ ವಿಚಾರದಲ್ಲಿ ಊರ್ವಶಿ ತಾಯಿ ಪೋಸ್ಟ್! ಮೆಚ್ಚಿದ ನೆಟ್ಟಿಗರು

ಡೆಹ್ರಾಡೂನ್: ಭಾರತೀಯ ಕ್ರಿಕೆಟ್ ಆಟಗಾರ ರಿಷಭ್ ಪಂತ್ (Rishabh pant) ಅವರನ್ನು ನಟಿ, ಮಾಡೆಲ್ ಊರ್ವಶಿ ರೌಟೇಲಾ ಇಷ್ಟಪಡುತ್ತಿರುವ ವಿಚಾರ ನಿಮಗೆಲ್ಲರಿಗೂ ತಿಳಿದೇ ಇದೆ. ಈ ಒನ್ ಸೈಡೆಡ್ ಲವ್ ಬಗ್ಗೆ ಇದುವರೆಗೆ ಮಾತನಾಡಿರದ ಊರ್ವಶಿ ತಾಯಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಪಂತ್ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: Urvashi Rautela | ಏರ್‌ಪೋರ್ಟ್‌ನಲ್ಲಿ ಜಾರಿದ ಡ್ರೆಸ್‌, ಮುಜುಗರಕ್ಕೀಡಾದ ನಟಿ ಊರ್ವಶಿ ರೌಟೇಲಾ!

ಅಪಘಾತಕ್ಕೀಡಾಗಿರುವ ಕ್ರಿಕೆಟಿಗನ ಬಗ್ಗೆ ಕಾಳಜಿ ವ್ಯಕ್ತಪಡಿಸಿರುವ ಊರ್ವಶಿ ತಾಯಿ ಮೀರಾ ರೌಟೇಲಾ, “ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳು ಒಂದು ಕಡೆಯಾದರೆ ನೀವು ಆರೋಗ್ಯವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತರಾಖಂಡಕ್ಕೆ ಪ್ರಶಸ್ತಿಗಳನ್ನು ತರುವುದು ಇನ್ನೊಂದು ಕಡೆ. ಸಿದ್ದ ಬಲಿಬಾಬಾ ನಿಮಗೆ ವಿಶೇಷ ಅನುಗ್ರಹ ನೀಡಲಿ. ಪಂತ್ ಅವರಿಗಾಗಿ ಎಲ್ಲರೂ ದೇವರಲ್ಲಿ ಪ್ರಾರ್ಥಿಸಿ” ಎಂದು ಬರೆದುಕೊಂಡಿದ್ದಾರೆ.
ಮೀರಾ ಅವರ ಈ ಪೋಸ್ಟ್ ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. “ಬೇರೆಯವರ ಆರೋಗ್ಯಕ್ಕಾಗಿ ಪ್ರಾರ್ಥಿಸುವ ನಿಮ್ಮ ಮನಸ್ಸು ಶುದ್ಧವಾದದ್ದು” ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಇನ್ನೂ ಹಲವರು ಊರ್ವಶಿಯೇ ಈ ರೀತಿಯಲ್ಲಿ ತಾಯಿಯ ಖಾತೆಯಿಂದ ಪೋಸ್ಟ್ ಹಾಕಿದ್ದಾರೆ ಎಂದು ಮತ್ತೆ ಊರ್ವಶಿಯ ಕಾಲೆಳೆದಿದ್ದಾರೆ.

ಇದನ್ನೂ ಓದಿ: Rishabh Pant | ರಿಷಭ್​ ಪಂತ್​ಗೆ ಹಿತೈಷಿಗಳ ಕಾಟ!; ಕುಟುಂಬ ಸದಸ್ಯರ ಕಳವಳ


ರಿಷಭ್ ಪಂತ್ (Rishabh pant) ಅವರಿಗೆ ಡಿ.30ರಂದು ಮನೆಗೆ ತೆರಳುತ್ತಿದ್ದಾಗ ಅಪಘಾತಕ್ಕೀಡಾಗಿದ್ದರು. ಗಂಭೀರ ಗಾಯಾಳುಗಳಾಗಿದ್ದ ಅವರಿಗೆ ಡೆಹ್ರಾಡೂನ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿರುವುದಾಗಿ ವರದಿಯಾಗಿದೆ.

Exit mobile version