Site icon Vistara News

Rishabh pant | ಇನ್ನೆರಡು ವಾರಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ರಿಷಭ್​ ಪಂತ್​

Rishabh Pant

ಮುಂಬಯಿ : ಕಾರು ಅವಘಡದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿರುವ ವಿಕೆಟ್​ಕೀಪರ್ ಬ್ಯಾಟರ್​ ರಿಷಭ್​ ಪಂತ್​ (Rishabh pant) ಅವರು ಶೀಘ್ರದಲ್ಲೇ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂಬುದಾಗಿ ಬಲ್ಲ ಮೂಲಗಳು ತಿಳಿಸಿವೆ. ಅವರಿಗೆ ಆಗಿರುವ ಗಾಯಗಳು ಹಾಗೂ ಶಸ್ತ್ರಚಿಕಿತ್ಸೆಯ ನೋವು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಎರಡು ವಾರದೊಳಗೆ ಬಿಡುಗಡೆ ಮಾಡಲು ಆಸ್ಪತ್ರೆಯ ವೈದ್ಯರು ಚಿಂತನೆ ನಡೆಸಿದ್ದಾರೆ.

ಜನರಿಗೆ 7ರಂದು ರಿಷಭ್​ ಪಂತ್ ಮಂಡಿಯ ಗಾಯಕ್ಕೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು. ಇದೀಗ ಮೂಳೆ ಜೋಡಣೆಯಾಗುತ್ತಿದ್ದು, ಉಳಿದ ಗಾಯಗಳೂ ನೈಸರ್ಗಿಕವಾಗಿ ವಾಸಿಯಾಗುತ್ತಿದೆ. ಮೂಳೆ ಶಸ್ತ್ರಚಿಕಿತ್ಸೆಗೆ ಆರು ವಾರಗಳ ವಿಶ್ರಾಂತಿ ಬೇಕಾಗುತ್ತದೆ. ಅಲ್ಲಿಯ ತನಕ ಅವರು ಮನೆಯಲ್ಲಿಯೇ ವಿಶ್ರಾಂತಿ ಪಡೆಯಲಿದ್ದಾರೆ. ಬಳಿಕ ಅವರು ಪುನಶ್ಚೇತನಕ್ಕೆ ಒಳಗಾಗಲಿದ್ದಾರೆ.

ಕಳೆದ ಡಿಸೆಂಬರ್​ 30ರಂದು ರಿಷಭ್​ ಪಂತ್ ಅವರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರು ಡಿವೈಡರ್​ಗೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಅವರ ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು. ಸುಟ್ಟ ಗಾಯಗಳು ಹಾಗೂ ಮಂಡಿಯ ಗಾಯಗೊಂಡಿಗೆ ರಿಷಭ್​ ಪಂತ್​ ಪಾರಾಗಿದ್ದರು. ಡೆಹ್ರಾಡೂನ್​ನಲ್ಲಿ ಆರಂಭದಲ್ಲಿ ಚಿಕಿತ್ಸೆ ಪಡೆದಿದ್ದ ಅವರನ್ನು ಬಳಿಕ ಮುಂಬಯಿಯ ಕೋಕಿಲಾ ಬೆನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇದನ್ನೂ ಓದಿ | Shubman Gill | ವಿರಾಟ್​ ಕೊಹ್ಲಿ, ಶಿಖರ್​ ಧವನ್​ ದಾಖಲೆ ಮುರಿದ ಶುಬ್ಮನ್​ ಗಿಲ್​; ಏನದು ಹೊಸ ದಾಖಲೆ?

Exit mobile version