ಬರ್ಮಿಂಗ್‌ಹ್ಯಾಮ್: ಐಪಿಎಲ್ ಸೇರಿದಂತೆ ಕಳೆದ ಹಲವು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿ ಟೀಕಾಕಾರರ ಟೀಕಾಸ್ತ್ರಗಳಿಗೆ ಗುರಿಯಾಗಿದ್ದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಭಾರತ ತಂಡದ ಪರ ನೂತನ ದಾಖಲೆ ಸೃಷ್ಟಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮರು ನಿಗದಿಯಾಗಿರುವ ಐದನೇ ಟೆಸ್ಟ್ ಪಂದ್ಯದಲ್ಲಿ ೮೯ ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮಾಡಿದ್ದ ದಾಖಲೆಯನ್ನು ಮುರಿದರು. ಪಂತ್ ಅಂತಿಮವಾಗಿ ೧೧೧ ಎಸೆತಗಳಲ್ಲಿ ೧೪೬ ರನ್ ಸಿಡಿಸುವ ಮೂಲಕ ಆರಂಭಿಕ ಕುಸಿತ ಕಂಡಿದ್ದ ಭಾರತ ತಂಡದ ಮರ್ಯಾದೆ ಕಾಪಾಡಿದರು.
ಏನಿದು ದಾಖಲೆ?
ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಭಾರತ ತಂಡದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್. ಅಂತೆಯೇ ರಿಷಭ್ ಪಂತ್ ಕೂಡ ಭಾರತ ತಂಡದ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್‌ಮನ್. ಧೋನಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಆಗಿ ೨೦೦೬ರಲ್ಲಿ ಪಾಕಿಸ್ತಾನದ ವಿರುದ್ಧ ೯೩ ಎಸೆತಗಳಲ್ಲಿ ಶತಕ ಬಾರಿಸಿದ್ದರು. ಆದರೆ, ರಿಷಭ್ ಪಂತ್ ಇಂಗ್ಲೆಂಡ್ ವಿರುದ್ಧ ೮೯ ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ಧೋನಿ ದಾಖಲೆ ಮುರಿದಿದ್ದಾರೆ.
ಇದನ್ನೂ ಓದಿ : IPL 2022: ಸಿಎಸ್‌ಕೆ ಕ್ಯಾಪ್ಟನ್ ಸ್ಥಾನಕ್ಕೆ ಧೋನಿ ರಾಜೀನಾಮೆ, ಚೆನ್ನೈ ತಂಡದ ನೂತನ ನಾಯಕನಾಗಿ ಜಡೇಜಾ ನೇಮಕ