ಡೆಹ್ರಾಡೂನ್ : ಕಾರು ಅಪಘಾತದಲ್ಲಿ ಗಾಯಗೊಂಡಿರುವ ಕ್ರಿಕೆಟರ್ ರಿಷಭ್ ಪಂತ್ (Rishabh Pant) ಅವರು ಮುಂಜಾನೆ ಏಕಾಂಗಿಯಾಗಿ ಕಾರು ಚಾಲನೆ ಮಾಡಲು ಹೊರಟ್ಟಿದ್ದೆಲ್ಲಿಗೆ ಎಂಬ ಪ್ರಶ್ನೆಗಳು ಹರಿದಾಡಿದ್ದವು. ಅದಕ್ಕೆ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಉತ್ತರ ಕೊಟ್ಟಿದ್ದು, ಬೆಳಗಾಗುವ ಮೊದಲು ಮನೆ ತಲುಪಿ ತಾಯಿಗೆ ಸರ್ಪ್ರೈಸ್ ಕೊಡಲು ಮುಂದಾಗಿದ್ದರು ಎಂದು ಹೇಳಿದ್ದಾರೆ.
ರಿಷಭ್ ಪಂತ್ ನವ ದೆಹಲಿಯಿಂದ ತವರೂರು ಉತ್ತರಾಖಂಡ ರೂರ್ಕಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಡೆಲ್ಲಿ- ಡೆಹ್ರಾಡೂನ್ ಎಕ್ಸ್ಪ್ರೆಸ್ ಹೈವೆಯ ನರ್ಸನ್ ಗಡಿಯ ಬಳಿ ಅವರ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಅವರು ಕಾರು ಬೆಂಕಿಗೆ ಆಹುತಿಯಾಗಿದೆ. ಅಚ್ಚರಿ ಎಂಬಂತೆ ಪಂತ್ ಸಾಮಾನ್ಯ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೀಗಾಗಿ ಬೆಳಗ್ಗೆ ಏಕಾಂಗಿಯಾಗಿ ರಿಷಭ್ ಹೊರಟ್ಟಿದ್ದು ಎಲ್ಲಿಗೆ ಎಂಬ ಪ್ರಶ್ನೆ ಮೂಡಿತ್ತು.
ರಿಷಭ್ ಪಂತ್ ಬಾಂಗ್ಲಾದೇಶ ಪ್ರವಾಸ ಮುಗಿಸಿ ನೇರವಾಗಿ ದುಬೈಗೆ ತೆರಳಿದ್ದರು. ಅಲ್ಲಿಂದ ಅವರು ವಾಪಸ್ ಡೆಲ್ಲಿಗೆ ಬಂದಿದ್ದರು. ಡೆಲ್ಲಿಯಿಂದ ಮುಂಜಾನೆ ಹೊರಟಿದ್ದ ಅವರು ರೂರ್ಕಿಗೆ ತೆರಳಿ ತಾಯಿಗೆ ಸರ್ಪ್ರೈಸ್ ಕೊಡಲು ಹೊರಟಿದ್ದರು.
ಪಂತ್ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ವೈದ್ಯರು ಅವರ ಆರೋಗ್ಯ ಸ್ಥಿತಿ ಬಗ್ಗೆ ನಿಗಾ ವಹಿಸಿದ್ದಾರೆ ಎಂಬುದಾಗಿ ಆಸ್ಪತ್ರೆ ಮೂಲಗಳು ತಿಳಿಸಿವೆ.
ಇದನ್ನೂ ಓದಿ | Rishabh Pant | ರಿಷಭ್ ಪಂತ್ ಆರೋಗ್ಯ ಸ್ಥಿತಿ ಕುರಿತು ಮ್ಯಾಕ್ಸ್ ಆಸ್ಪತ್ರೆಯ ವೈದ್ಯರು ಕೊಟ್ಟ ಹೇಳಿಕೆಗಳೇನು?