ಲಂಡನ್: ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅವರ ಅಳಿಯ, ಬ್ರಿಟನ್ ಪ್ರಧಾನಿ ರಿಷಿ ಸುನಕ್(Rishi Sunak) ಅವರು ತಮ್ಮ ನೆಚ್ಚಿನ ಕ್ರಿಕೆಟ್ ಆಟಗಾರ ಯಾರು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಆಶ್ಯಸ್ ಟೆಸ್ಟ್ ಸರಣಿಯ ವಿಚಾರವಾಗಿ ಮಾತನಾಡುವ ವೇಳೆ ಅವರು ಈ ವಿಷಯವನ್ನು ತಿಳಿಸಿದ್ದಾರೆ. ಕನ್ನಡಿಗ, ಟೀಮ್ ಇಂಡಿಯಾದ ಮಾಜಿ ನಾಯಕ, ಪ್ರಸ್ತುತ ಮುಖ್ಯ ಕೋಚ್ ಆಗಿರುವ ರಾಹುಲ್ ಡ್ರಾವಿಡ್ ಅವರು ನೆಚ್ಚಿನ ಆಟಗಾರನಂತೆ.
ಸಂದರ್ಶನದಲ್ಲಿ ಅವರು ಕ್ರಿಕೆಟ್ ಕುರಿತ ಕೆಲವು ಆಸಕ್ತಿದಾಯಕ ಅಂಶಗಳನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ ‘ರಾಹುಲ್ ದ್ರಾವಿಡ್ (Rahul Dravid) ನನ್ನ ನೆಚ್ಚಿನ ಕ್ರಿಕೆಟಿಗ. ನಾನು ಅವರ ಆಟವನ್ನು ಇಷ್ಟಪಡುತ್ತೇನೆ. ತಾಳ್ಮೆಯಿಂದಲೇ ಬ್ಯಾಟಿಂಗ್ ನಡೆಸುವ ಮೂಲಕ ಎದುರಾಳಿಗಳಿಗೆ ತಕ್ಕ ಉತ್ತರ ಕೊಡುವ ಅವರ ಕ್ರಿಕೆಟ್ ತಂತ್ರಗಾರಿಗೆ ನಿಜಕ್ಕೂ ಮೆಚ್ಚಲೇ ಬೇಕು. ಅವರ ವ್ಯಕ್ತಿತ್ವವೂ ಇಷ್ಟ” ಎಂದು ಹೇಳಿದ್ದಾರೆ. ಇಂಗ್ಲೆಂಡ್ ಪ್ರಧಾನಿಯಾಗಿದ್ದರೂ, ಭಾರತದ ಆಟಗಾರನನ್ನೇ ಫೇವರಿಟ್ ಎಂದು ಹೇಳುವ ಮೂಲಕ ಸುನಕ್ ಭಾರತೀಯರ ಮನ ಗೆದ್ದಿದ್ದಾರೆ.
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸಿದ್ದೆ
ಸೌತಾಂಪ್ಟನ್ನಲ್ಲಿ 2008ರಲ್ಲಿ ನಡೆದಿದ್ದ ಭಾರತ ಮತ್ತು ಇಂಗ್ಲೆಂಡ್ ವಿರುದ್ಧದ ಪಂದ್ಯವನ್ನು ವೀಕ್ಷಿಸಿದ ಕುರಿತು ಅನುಭವ ಹಂಚಿಕೊಂಡ ಸುನಕ್, ಅಂದಿನ ಪಂದ್ಯವನ್ನು ನೋಡು ನಾನು ಹೋಗಿದ್ದೆ, ಆ ಪಂದ್ಯದಲ್ಲಿ ಭಾರತ ಗೆಲುವು ಕಂಡಿತ್ತು. ಸಚಿನ್ ಬ್ಯಾಟಿಂಗ್ ನೋಡಿ ಖಷಿಪಟ್ಟಿದೆ. ಭಾರತ ಗೆದ್ದ ಬಳಿಕ ನಾನು ಕೂಡ ಸಂಭ್ರಮ ಆಚರಿಸಿದ್ದೆ ಎಂದು ಹಳೆಯ ಘಟನೆಯನ್ನು ನೆನಪುಮಾಡಿಕೊಂಡರು.
ಇದನ್ನೂ ಓದಿ ಬೇರ್ಸ್ಟೋ ರನೌಟ್ಗೆ ಅಸಮಾಧಾನ ವ್ಯಕ್ತಪಡಿಸಿದ ಬ್ರಿಟನ್ ಪ್ರಧಾನಿ ರಿಷಿ ಸುನಕ್
ಕ್ರಿಕೆಟ್ ಆಡಿದ ಸುನಕ್
ಟಿ20 ವಿಶ್ವಕಪ್ ವಿಜೇತ ಇಂಗ್ಲೆಂಡ್ ತಂಡ ಪ್ರಧಾನಿ ಸುನಕ್ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಸುನಕ್ ಅವರು ವಿಶ್ವ ವಿಜೇತ ಆಟಗಾರರೊಂದಿಗೆ ಕ್ರಿಕೆಟ್ ಆಡಿ ಬ್ಯಾಟಿಂಗ್ ಮತ್ತು ಬೌಲಿಂಗ್ ಮೂಲಕ ಗಮನ ಸೆಳೆದಿದ್ದರು. ಈ ವಿಡಿಯೊ ಎಲ್ಲಡೆ ವೈರಲ್ ಆಗಿತ್ತು. ಎಡಗೈ ಆಲ್ರೌಂಡರ್ ಸ್ಯಾಮ್ ಕರನ್(Sam Curran) ಬೌಲಿಂಗ್ ಎದುರಿಸಿದ ಸುನಕ್ ಉತ್ತಮ ಬ್ಯಾಟಿಂಗ್ ಕೌಶಲ್ಯ ತೋರಿದ್ದರು.
Prime Minister @RishiSunak playing cricket with the #T20 World Cup winning cricket team at 10 Downing Street. pic.twitter.com/Bqh57dVZce
— Luca Boffa (@luca_boffa) March 22, 2023
ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ನಲ್ಲಿ ಪಾಕಿಸ್ತಾನವನ್ನು ಮಣಿಸಿ ಇಂಗ್ಲೆಂಡ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಫೈನಲ್ ಪಂದ್ಯದಲ್ಲಿ ಬಟ್ಲರ್ ಪಡೆ 5 ವಿಕೆಟ್ಗಳಿಂದ ಗೆಲುವು ಸಾಧಿಸಿತ್ತು.