ಲಂಡನ್: ದ್ವಿತೀಯ ಟೆಸ್ಟ್(The Ashes) ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಆಟಗಾರರ ಜಾನಿ ಬೇರ್ಸ್ಟೋ(Jonny Bairstow) ಅವರನ್ನು ರನೌಟ್ ಮಾಡಿದ ವಿಚಾರದಲ್ಲಿ ಬ್ರಿಟನ್ ಪ್ರಧಾನಿ ರಿಷಿ ಸುನಕ್(Rishi Sunak) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಕ್ರೀಡಾಸ್ಫೂರ್ತಿಗೆ ವಿರುದ್ಧವಾದ ನಡೆ ಎಂದು ಹೇಳಿದ್ದಾರೆ. ಆದರೆ ಆಸೀಸ್ ಆಟಗಾರರನ್ನು ನಿಂದಿಸಿದ ಮೆರಿಲ್ಬೋನ್ ಕ್ರಿಕೆಟ್ ಕ್ಲಬ್ ಸದಸ್ಯರನ್ನು ಅಮಾನತು ಕ್ರಮವನ್ನು ಅವರು ಒಪ್ಪಿಕೊಂಡಿದ್ದಾರೆ. ಈ ಶಿಕ್ಷೆ ನ್ಯಾಯಯುವಾಗಿದೆ ಎಂದು ಹೇಳಿದ್ದಾರೆ. ಬೇರ್ಸ್ಟೋ ಅವರ ವಿವಾದಾತ್ಮಕ ಔಟ್ ತೀರ್ಪಿನ ಹಿನ್ನೆಲೆಯಲ್ಲಿ ಕೋಪಗೊಂಡ ಸದಸ್ಯರು, ಆಸೀಸ್ ಆಟಗಾರರು ಡ್ರೆಸಿಂಗ್ ರೂಮ್ಗೆ ತೆರಳುತ್ತಿದ್ದ ವೇಳೆ ನಿಂದಿಸಿದ್ದರು.
ಇಲ್ಲಿನ ಐತಿಹಾಸಿಕ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಭಾನುವಾರ ಅಂತ್ಯ ಕಂಡ ಪಂದ್ಯದಲ್ಲಿ ಅಂತಿಮ ದಿನ ಬ್ಯಾಟಿಂಗ್ಗೆ ಇಳಿದ ಬೆನ್ ಸ್ಟೋಕ್ಸ್ ಮತ್ತು ಬೆನ್ ಡೆಕೆಟ್ ಉತ್ತಮ ಇನಿಂಗ್ಸ್ ಕಟ್ಟಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯತ್ತಿದ್ದರು. ಆದರೆ ಬೆನ್ ಡೆಕೆಟ್ (83) ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಅನುಭವಿ ಜಾನಿ ಬೇರ್ಸ್ಟೋ(Jonny Bairstow) ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದರು. 2 ಬೌಂಡರಿ ಬಾರಿಸಿ ಆಸೀಸ್ಗೆ ತಲೆನೋವು ತಂದರು. ಇದೇ ವೇಳೆ ಅವರು ಕ್ಯಾಮರೂನ್ ಗ್ರೀನ್ ಅವರ ಬೌನ್ಸರ್ ದಾಳಿಯಿಂದ ತಪ್ಪಿಸಿ ಕ್ರೀಸ್ ಬಿಟ್ಟು ಮುಂದೆ ಸಾಗಿದರು.
ಜಾನಿ ಬೇರ್ಸ್ಟೋ ಅವರು ಕ್ರೀಸ್ ಬಿಟ್ಟದನ್ನು ಕಂಡ ವಿಕೆಟ್ ಕೀಪರ್ ಅಲೆಕ್ಸ್ ಕೇರಿ ಕ್ಷಣ ಮಾತ್ರದಲ್ಲಿ ಚೆಂಡನ್ನು ವಿಕೆಟ್ಗೆ ಎಸೆದರು. ಆಸೀಸ್ ಆಟಗಾರರು ಔಟ್ ಎಂದು ಅಂಪೈರ್ ಬಳಿ ಬಲವಾದ ಮನವಿ ಮಾಡಿದರು. ಆದರೆ ಇಲ್ಲಿ ಏನಾಗುತ್ತಿದೆ?ಯಾಕಾಗಿ ಆಸೀಸ್ ಆಟಗಾರರು ಔಟ್ ಮನವಿ ಮಾಡುತ್ತಿದ್ದಾರೆ ಎಂದು ಬೇರ್ಸ್ಟೋ ಮತ್ತು ಸ್ಟೋಕ್ಸ್ಗೆ ಅರ್ಥವಾಗದೆ ಆಶ್ಚರ್ಯಚಕಿತರಾಗಿ ನಿಂತರು. ಆಸೀಸ್ ಮನವಿಯನ್ನು ಮೂರನೇ ಅಂಪೈರ್ ಪರಿಶೀಲಿಸಿ ಔಟ್ ಎಂದು ತೀರ್ಪು ಪ್ರಕಟಗೊಂಡಿತು. ಐಸಿಸಿ ನಿಯಮದ ಪ್ರಕಾರ ಬೇರ್ಸ್ಟೋ ಔಟ್ ಆಗಿರುವುದರಲ್ಲಿ ಯಾವುದೇ ಲೋಪವಿಲ್ಲ ಅವರು ನಿಯಮದನ್ವಯ ಬಾಲ್ ಡೆಡ್ ಆಗುವ ಮುನ್ನವೇ ಕ್ರೀಸ್ ಬಿಟ್ಟು ಮುಂದೆ ಸಾಗಿದ್ದರು. ಆದರೆ ಇಲ್ಲಿ ಆಸೀಸ್ ಆಟಗಾರರು ಕ್ರೀಡಾಸ್ಫೂರ್ತಿ ಮರೆದಿಲ್ಲ ಎನ್ನುವುದೇ ಇಲ್ಲಿನ ತರ್ಕವಾಗಿತ್ತು.
🤐🤐🤐#EnglandCricket | #Ashes pic.twitter.com/dDGCnj4qNm
— England Cricket (@englandcricket) July 2, 2023
ಇದನ್ನೂ ಓದಿ IND vs PAK | ಅಂಪೈರ್ ಔಟ್ ಕೊಡುವ ಮೊದಲೇ ಕ್ರಿಸ್ ತೊರೆದ ಫಖರ್ ಜಮಾನ್ , ಕ್ರೀಡಾಸ್ಫೂರ್ತಿಗೆ ಮೆಚ್ಚುಗೆ
ಇದೇ ವಿಚಾರವಾಗಿ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಪಂದ್ಯದ ಬಳಿಕ ಅಂಪೈರ್ ತೀರ್ಪಿನಲ್ಲಿ ಯಾವುದೇ ಬೇಸರವಿಲ್ಲ ಆದರೆ ಆಸೀಸ್ ಆಟಗಾರರು ಗೆಲುವಿಗಾಗಿ ಕ್ರೀಡಾಸ್ಫೂರ್ತಿ ಮರೆತಿರುವುದು ನಿಜಕ್ಕೂ ಬೇಸರ ತಂದಿದೆ. ನಾವು ಈ ರೀತಿಯಲ್ಲಿ ಪಂದ್ಯವನ್ನು ಯಾವುದೇ ಕಾರಣಕ್ಕೂ ಗೆಲ್ಲಲು ಬಯಸುವುದಿಲ್ಲ ಎಂದು ಹೇಳಿದ್ದರು. ಸ್ಟೋಕ್ಸ್ ಅವರ ಮಾತನ್ನು ಒಪ್ಪಿಕೊಂಡಿರುವ ಪ್ರಧಾನಿ ರಿಷಿ ಸುನಕ್, ಆಸೀಸ್ ಆಟಗಾರರು ನಿಜಕ್ಕೂ ಕ್ರೀಡಾಸ್ಫೂರ್ತಿಗೆ ವಿರುದ್ಧದವಾದ ಆಟವನ್ನು ತೋರ್ಪಡಿಸಿದ್ದಾರೆ ಎಂದು ಹೇಳಿರುವುದಾಗಿ ಲಂಡನ್ನ ಕ್ರೀಡಾ ಪ್ರತಿಕೆಯೊಂದು ವರದಿ ಮಾಡಿದೆ.