Site icon Vistara News

Riyan Parag: 3 ದಿನ ನೋವು ನಿವಾರಕ ಮಾತ್ರೆ ಸೇವಿಸಿ ಹಾಸಿಗೆಯಲ್ಲಿದ್ದೆ; ಪಂದ್ಯಶ್ರೇಷ್ಠ ಪ್ರಶಸ್ತಿ ವೇಳೆ ಭಾವುಕರಾದ ​ಪರಾಗ್

Riyan Parag

ಜೈಪುರ: ಡೆಲ್ಲಿ ಕ್ಯಾಪಿಟಲ್ಸ್(Delhi Capitals)​ ವಿರುದ್ಧದ ಪಂದ್ಯದಲ್ಲಿ ಅಸಾಮಾನ್ಯ ಬ್ಯಾಟಿಂಗ್​ ಪ್ರದರ್ಶನ ತೋರುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ರಾಜಸ್ಥಾನ್(Rajasthan Royals)​ ತಂಡದ ರಿಯಾನ್​ ಪರಾಗ್(Riyan Parag)​ ಅವರು ಈ ಬ್ಯಾಟಿಂಗ್​ ಪ್ರದರ್ಶನಕ್ಕೂ ಮುನ್ನ ತಾವು ಅನುಭವಿಸಿದ ನರಕಯಾತನೆಯನ್ನು ಬಹಿರಂಗಪಡಿಸಿದ್ದಾರೆ.

ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ಪರಾಗ್​, ಕಳೆದ 3 ದಿನಗಳಿಂದ ನಾನು ನಿರಂತರವಾಗಿ ನೋವು ನಿವಾರಕ ಮಾತ್ರೆ ಸೇವಿಸುತ್ತಾ ಹಾಸಿಗೆಯಲ್ಲಿದ್ದೆ. ಆದರೆ ಇಂದು ನಾನು ನನ್ನ ತಂಡಕ್ಕೆ ನೀಡಿದ ಕೊಡುಗೆ ಖುಷಿ ಹೆಚ್ಚಿಸಿದೆ ಎಂದರು. ಆದರೆ ಮಾತ್ರೆ ಸೇವಿದ ಕಾರಣ ಏನೆಂಬುದನ್ನು ಮಾತ್ರ ಬಹಿರಂಗಪಡಿಸಿಲ್ಲ. ಅಸ್ಸಾಂ ಮೂಲದ 22 ವರ್ಷದ ಕ್ರಿಕೆಟಿಗನಾಗಿರುವ ಪರಾಗ್​ ಸೈಯ್ಯದ್‌ ಮುಷ್ತಾಕ್‌ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಅಬ್ಬರದ ಪ್ರದರ್ಶನ ನೀಡಿದ್ದರು. ಆಡಿದ 10 ಇನ್ನಿಂಗ್ಸ್‌ಗಳಲ್ಲಿ 510 ರನ್‌ ಸಿಡಿಸಿದ್ದರು. 56 ಐಪಿಎಲ್​ ಪಂದ್ಯವಾಡಿ 727 ರನ್​ ಬಾರಿಸಿದ್ದಾರೆ. 4 ವಿಕೆಟ್​ ಕೂಡ ಪಡೆದಿದ್ದಾರೆ. 2018ರ ಅಂಡರ್​-19 ವಿಶ್ವಕಪ್ ವಿಜೇತ ತಂಡದಲ್ಲಿ ಸ್ಥಾನ ಪಡೆದಿದ್ದ ಪರಾಗ್ ಅವರು 2022-23ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಐದನೇ ಅತಿ ಹೆಚ್ಚು ರನ್​ಗಳಿಸಿದ್ದ ಆಟಗಾರರಾಗಿದ್ದರು. 69 ಸರಾಸರಿಯೊಂದಿಗೆ 552 ರನ್​ಗಳನ್ನು ಗಳಿಸಿದ್ದ ಪರಾಗ್​ ಮೂರು ಶತಕ ಮತ್ತು ಒಂದು ಅರ್ಧಶತಕ ಸಿಡಿಸಿದ್ದರು.

ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್​ ನಡೆಸಿದ ಪರಾಗ್​ ಕೇವಲ 45 ಎಸೆತಗಳಿಂದ 84 ರನ್​ ಬಾರಿಸಿದ್ದರು. ಅವರ ಈ ಸೊಗಸಾದ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ 6 ಆಕರ್ಷಕ ಸಿಕ್ಸರ್​ ಮತ್ತು 7 ಬೌಂಡರಿ ದಾಖಲಾಯಿತು. ಅದರಲ್ಲೂ ಅನ್ರಿಚ್​ ನೋರ್ಜೆ ಅವರಿಗೆ ಸರಿಯಾಗಿ ದಂಡಿಸಿದರು.

ಇದನ್ನೂ ಓದಿ IPL 2024: ಐಪಿಎಲ್‌ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಆರ್‌.ಅಶ್ವಿ‌ನ್‌!

ಕಿರಿಕ್​ ಮಾಡಿದ್ದ ಹರ್ಷಲ್​ ಪಟೇಲ್​


2022ರಲ್ಲಿ ಆರ್‌ಸಿಬಿ ಮತ್ತು ರಾಜಸ್ಥಾನ್‌ ನಡುವಿನ ಪಂದ್ಯದಲ್ಲಿ ಆರ್​ಸಿಬಿ ತಂಡದ ಆಟಗಾರನಾಗಿದ್ದ ಹರ್ಷಲ್​ ಪಡೇಲ್​ ಅವರು ಪರಾಗ್​ ಜತೆ ಕಿರಿಕ್​ ಮಾಡಿಕೊಂಡು ಸರಿಯಾಗಿಯೇ ದಂಡಿಸಿಕೊಂಡಿದ್ದರು. ರಾಜಸ್ಥಾನ್‌ ಇನ್ನಿಂಗ್ಸ್‌ ವೇಳೆ ಹರ್ಷಲ್‌ ಪಟೇಲ್‌ ಎಸೆದ ಕೊನೆಯ ಓವರ್‌ನಲ್ಲಿ ರಿಯಾನ್‌ ಪರಾಗ್‌ ಒಂದು ಬೌಂಡರಿ, 2 ಸಿಕ್ಸರ್‌ ಸೇರಿದಂತೆ 18 ರನ್‌ ಚಚ್ಚಿದ್ದರು. ಅಂತಿಮ ಎಸೆತ ಸಿಕ್ಸರ್‌ ಸಿಡಿದಾಗ ಹರ್ಷಲ್​ ಆಕ್ರೋಶಗೊಂಡು ಇನ್ನಿಂಗ್ಸ್‌ ಮುಗಿಸಿ ಡಗೌಟ್‌ನತ್ತ ಸಾಗುತ್ತಿದ್ದಾಗ ಪರಾಗ್‌ ಜತೆ ಜಗಳಕ್ಕಿಳಿದಿದ್ದರು. ಪರಾಗ್‌ ಕೂಡ ತಕ್ಕ ಜವಾಬು ನೀಡಿದ್ದರು. ಇನ್ನೇನು ಕೈ ಮಿಲಾಯಿಸುವ ಹಂತಕ್ಕೆ ಬಂದಾಗ ಸಹ ಆಟಗಾರರು ಇವರಿಬ್ಬರನ್ನು ಸಮಾಧಾನಗೊಳಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು.

ಇತ್ತಂಡಗಳ ಆಟಗಾರರು ಪಂದ್ಯದ ಬಳಿಕ ಪರಸ್ಪರ ಕೈ ಕುಲುಕುವ ವೇಳೆಯೂ ಸಿಟ್ಟಿನಲ್ಲಿದ್ದ ಹರ್ಷಲ್​ ಪಟೇಲ್‌, ಪರಾಗ್‌ ಅವರ ಕೈ ಕುಲುಕದೆ ತಮ್ಮ ಕೋಪವನ್ನು ಹೊರಹಾಕಿದ್ದರು. ಪರಾಗ್‌ ಶೇಕ್‌ಹ್ಯಾಂಡ್‌ ಮಾಡಲು ಬಂದರೂ ಪಟೇಲ್‌ ಇದಕ್ಕೆ ಸ್ಪಂದಿಸದೇ ಸಾಗಿದ್ದರು.

Exit mobile version