ಬೆಂಗಳೂರು: ರಾಜಸ್ಥಾನ್ ರಾಯಲ್ಸ್ ತಂಡ ಮಧ್ಯಮ ಕ್ರಮಾಂಕದ ಬ್ಯಾಟರ್ ರಿಯಾನ್ ಪರಾಗ್ (Riyan Parag) ದೇಶೀಯ ಕ್ರಿಕೆಟ್ನಲ್ಲಿ ಅದ್ಭುತ ಹೆಸರು. ಸ್ಫೋಟಕ ಬ್ಯಾಟಿಂಗ್ಗೆ ಪ್ರಖ್ಯಾತಿ ಪಡೆದವರು. ಅತ್ಯಂತ ಚಿಕ್ಕ ವಯಸ್ಸಿನಲ್ಲಿ, ಅವರು ಅಸ್ಸಾಂ ಕ್ರಿಕೆಟ್ ತಂಡದ ನಾಯಕರಾಗಿದ್ದಾರೆ. ದುರದೃಷ್ಟವಶಾತ್, ಇಂಡಿಯನ್ ಪ್ರೀಮಿಯರ್ ಲೀಗ್ (IPL) ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಪೂರಕ ಪ್ರದರ್ಶನ ನೀಡದ ಕಾರಣ ಅವರು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ಗೆ ಒಳಗಾಗುತ್ತಾರೆ. ಆದರೆ ಪ್ರಸ್ತುತ ನಡೆಯುತ್ತಿರುವ ದೇಶೀಯ 2023-24ರ (Ranji Trophy 2023-24) ಋತುವು ಯುವ ಆಟಗಾರನಿಗೆ ಸ್ಮರಣೀಯವ ಎನಿಸಲಿದೆ. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ (ಟಿ 20 ಪಂದ್ಯಾವಳಿ) ಯಲ್ಲಿ ತಂಡದ ಪರ ಮಿಂಚಿದ ನಂತರ ಪರಾಗ್ ರಣಜಿ ಟ್ರೋಫಿಯಲ್ಲೂ ಭರ್ಜರಿ ಆರಂಭ ಮಾಡಿದ್ದಾರೆ.
ರಾಯ್ಪುರದಲ್ಲಿ ನಡೆಯುತ್ತಿರುವ ರಣಜಿ ಮುಖಾಮುಖಿಯಲ್ಲಿ ಛತ್ತೀಸ್ಗಢ ತಂಡದ ವಿರುದ್ಧ 3ನೇ ದಿನ (ಜನವರಿ 8) ಅವರು 56 ಎಸೆತಗಳಲ್ಲಿ ಶತಕ ಬಾರಿಸಿದ್ದಾರೆ. ಅಸ್ಸಾಂ ತನ್ನ ಇನ್ನಿಂಗ್ಸ್ನಲ್ಲಿ 254 ರನ್ಗಳಿಗೆ ಆಲ್ಔಟ್ ಆಯಿತು. ಆದರೆ ನಾಯಕ ರಿಯಾನ್ ಏಕಾಂಗಿಯಾಗಿ 87 ಎಸೆತಗಳಲ್ಲಿ 178.16 ಸ್ಟ್ರೈಕ್ ರೇಟ್ನಲ್ಲಿ 155 ರನ್ ಗಳಿಸಿದ್ದಾರೆ. ಅವರ ಇನಿಂಗ್ಸ್ನಲ್ಲಿ 11 ಫೋರ್ ಹಾಗೂ 12 ಸಿಕ್ಸರ್ಗಳಿವೆ.
ಪರಾಗ್ ಅವರ 56 ಎಸೆತಗಳ ಶತಕವು ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಭಾರತೀಯ ಆಟಗಾರರೊಬ್ಬರ ನಾಲ್ಕನೇ ವೇಗದ ಶತಕವಾಗಿದೆ. ಈ ಮೂಲಕ ಅವರು ವೆಸ್ಟ್ ಇಂಡೀಸ್ನ ಮಾಜಿ ಕ್ರಿಕೆಟಿಗ ವಿವಿಯನ್ ರಿಚರ್ಡ್ಸ್ ಅವರ ಸಾಧನೆಯನ್ನೂ ಸರಿಗಟ್ಟಿದ್ದಾರೆ. ರಿಚರ್ಡ್ಸ್ 1985-86ರ ಋತುವಿನಲ್ಲಿ ಇಂಗ್ಲೆಂಡ್ ವಿರುದ್ಧ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 56 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಅಸ್ಸಾಂನವರೇ ಆದ ಆರ್.ಕೆ.ಬೋರಾ 1987-88ರ ಋತುವಿನಲ್ಲಿ ತ್ರಿಪುರಾ ವಿರುದ್ಧ 56 ಎಸೆತಗಳಲ್ಲಿ ಶತಕ ಗಳಿಸಿದ್ದರು.
ಇದನ್ನೂ ಓದಿ : KL Rahul : ಉತ್ತಮ ಫಾರ್ಮ್ನಲ್ಲಿರುವ ರಾಹುಲ್ಗೆ ಆಫ್ಘನ್ ಸರಣಿಯಲ್ಲಿ ಸ್ಥಾನವಿಲ್ಲ!
ತಂಡಕ್ಕೆ ಸೋಲು
ರಿಯಾನ್ ಪರಾಗ್ ಅವರ ವೀರೋಚಿತ ಹೋರಾಟದ ಹೊರತಾಗಿಯೂ ಅಸ್ಸಾಂ ತನ್ನ ಆರಂಭಿಕ ಸುತ್ತಿನ ಪಂದ್ಯದಲ್ಲಿ ಛತ್ತೀಸ್ಗಢದ ವಿರುದ್ಧ ಸೋತಿದೆ. ಎದುರಾಳಿ ತಂಡ ಮೊದಲ ಇನ್ನಿಂಗ್ಸ್ನಲ್ಲಿ 327 ರನ್ ಗಳಿಸಿತ್ತು. ಉತ್ತರವಾಗಿ, ಪರಾಗ್ ಮತ್ತು ಬಳg ಕೇವಲ 159 ರನ್ ಗಳಿಸಲು ಮಾತ್ರ ಶಕ್ತಗೊಂಡಿತು. ಈ ಇನಿಂಗ್ಸ್ನಲ್ಲಿ ಅವರು ಕೇವಲ ಎಂಟು ರನ್ ಗಳಿಸದ್ದರು. ಹೀಗಾಗಿ ಛತ್ತೀಸ್ ಗಢ ಫಾಲೋಆನ್ ಹೇರಿತು. ಎರಡನೇ ಇನ್ನಿಂಗ್ಸ್ ನಲ್ಲಿ ಪರಾಗ್ ದಾಖಲೆಯ ಶತಕ ಬಾರಿಸಿದ ನಂತರ ನಂತರವೂ ಅಸ್ಸಾಂ ಕೇವಲ 86 ರನ್ಗಳ ಮುನ್ನಡೆಯೊಂದಿಗೆ 254 ರನ್ಗಳಿಗೆ ಆಲೌಟ್ ಆಯಿತು ಛತ್ತೀಸ್ ಗಢ ಹೆಚ್ಚು ಶ್ರಮವಿಲ್ಲದೇ ಆ ಸ್ಕೋರ್ ಬೆನ್ನಟ್ಟಿತು.