Site icon Vistara News

Road Safety World Series: ಮೂರನೇ ಆವೃತ್ತಿಯಲ್ಲಿ ಕಣಕ್ಕಿಳಿಯಲಿದೆ ಪಾಕ್​ ತಂಡ

road safety world series

ಲಂಡನ್​: ಮಾಜಿ ಕ್ರಿಕೆಟಿಗರ ಪ್ರತಿಷ್ಠಿತ ಕ್ರಿಕೆಟ್​ ಟೂರ್ನಿಯಾದ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್​(Road Safety World Series) ಮೂರನೇ ಆವೃತ್ತಿಗೆ(Road Safety World Series) ವೇದಿಕೆ ಸಜ್ಜಾಗಿದೆ. ಇದೇ ಮೊದಲ ಬಾರಿಗೆ ಪಾಕಿಸ್ತಾನ ತಂಡವೂ(Pakistan Team) ಈ ಟೂರ್ನಿಯಲ್ಲಿ ಆಡಲಿದೆ ಎಂದು ವರದಿಯಾಗಿದೆ. ಪಾಕ್​ ಆಗಮನದಿಂದ ಮತ್ತೊಮ್ಮೆ ಭಾರತ-ಪಾಕ್​ ನಡುವಣ ಪಂದ್ಯವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ.

ಎರಡು ಆವೃತ್ತಿಯಲ್ಲಿಯೂ ಭಾರತ ತಂಡ ಚಾಂಪಿಯನ್​ ಆಗಿದೆ. ಈ ಬಾರಿ ಈ ಟೂರ್ನಿ ಲಂಡನ್​ನಲ್ಲಿ ನಡೆಯಲಿದೆ. ಇಂದಿನ ಎರಡೂ ಆವೃತ್ತಿಯು ಭಾರತದ ಆತಿಥ್ಯದಲ್ಲಿ ನಡೆದಿತ್ತು. ಆದರೆ ಸಲ ಇಂಗ್ಲೆಂಡ್​ ಮತ್ತು ವೇಲ್ಸ್​ ಕ್ರಿಕೆಟ್​ ಮಂಡಳಿಯ ನೇತೃತ್ವದಲ್ಲಿ ಇಂಗ್ಲೆಂಡ್​ನಲ್ಲಿ ಪಂದ್ಯಗಳು ನಡೆಯಲಿದೆ ಎಂದು ವರದಿಯಾಗಿದೆ.

ಮೂರನೇ ಆವೃತ್ತಿಯ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್​ನಲ್ಲಿ ಒಟ್ಟು ಒಂಬತ್ತು ತಂಡಗಳು ಪಾಲ್ಗೊಳ್ಳಲಿದೆ ಎಂದು ಕ್ರಿಕ್​ಇನ್ಫೊ ವರದಿ ಮಾಡಿದೆ. ಕೋವಿಡ್​ ಕಾರಣದಿಂದ ಆಸ್ಟ್ರೇಲಿಯಾ ತಂಡ ಮೊದಲ ಆವೃತ್ತಿಯಲ್ಲಿ ಕಣಕ್ಕಿಳಿದಿರಲಿಲ್ಲ. ಹೀಗಾಗಿ 7 ತಂಡಗಳು ಸೆಣಸಾಡಿದ್ದವು. ದ್ವಿತೀಯ ಆವೃತ್ತಿಯಲ್ಲಿ 8 ತಂಡಗಳು ಭಾಗವಹಿಸಿದ್ದವು. ಫೈನಲ್​ನಲ್ಲಿ ಲಂಕಾವನ್ನು ಮಣಿಸಿ ಭಾರತ ಎರಡನೇ ಸಲ ಕಪ್​ ಗೆದ್ದಿತ್ತು. ಇದೀಗ ಪಾಕ್​ ತಂಡದ ಸೇರ್ಪಡೆಯಿಂದ ಈ ಬಾರಿ ತಂಡಗಳ ಸಂಖ್ಯೆ 9ಕ್ಕೇ ಏರಲಿದೆ. ಆದರೆ ಇದು ಅಧಿಕೃತಗೊಂಡಿಲ್ಲ. ಇದುವರೆಗೆ ಭಾರತ, ಶ್ರೀಲಂಕಾ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ವೆಸ್ಟ್​ ಇಂಡೀಸ್​, ನ್ಯೂಜಿಲ್ಯಾಂಡ್​, ಇಂಗ್ಲೆಂಡ್​ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಆಡಿದ್ದವು.

ಇದನ್ನೂ ಓದಿ Road Safety World Series | ಸಚಿನ್‌ ನೇತೃತ್ವದ ಭಾರತ ತಂಡಕ್ಕೆ ದ. ಆಫ್ರಿಕಾ ವಿರುದ್ಧ 61 ರನ್‌ ಜಯ

ಟಿ20 ಮಾದರಿಯಲ್ಲಿ ನಡೆಯುವ ಈ ಟೂರ್ನಿಯಲ್ಲಿ ವಿಶ್ವದ ಅನೇಕ ಮಾಜಿ ದಿಗ್ಗಜ ಕ್ರಿಕೆಟಿಗರು ಕಾಣಿಸಿಕೊಳ್ಳಲಿದ್ದಾರೆ. ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್, ಕೆವಿನ್ ಪೀಟರ್ಸನ್, ಸನತ್ ಜಯಸೂರ್ಯ, ಬ್ರೆಟ್ ಲೀ, ತಿಲಕರತ್ನೆ ದಿಲ್ಶನ್, ಬ್ರಿಯಾನ್ ಲಾರಾ, ಜಾಂಟಿ ರೋಡ್ಸ್ ಹೀಗೆ ಅನೇಕ ಮಾಜಿ ಆಟಗಾರರ ಸಮಾಗಮ ನಡೆಯಲಿದೆ. ಇದೀಗ ಪಾಕಿಸ್ತಾನದ ಸೇರ್ಪಡೆಯೊಂದಿಗೆ ಅಖ್ತರ್​, ಅಫ್ರೀದಿ, ಯೂನಿಸ್​ ಖಾನ್​, ಉಮ್ಮರ್​ ಗುಲ್​ ಸೇರಿದಂತೆ ಅನೇಕ ಪಾಕ್​​ ಆಟಗಾರರು ಕೂಡ ಕಾಣಿಸಿಕೊಳ್ಳಲಿದ್ದಾರೆ.

Exit mobile version