Site icon Vistara News

ರಾಬಿನ್‌ ಉತ್ತಪ್ಪ (Robin Uthappa) ಮನೆಗೆ ಬಂದಳು ಮುದ್ದು ಅತಿಥಿ

ROBIN UTTAPPA

ಬೆಂಗಳೂರು: ಕ್ರಿಕೆಟಿಗ ರಾಬಿನ್‌ ಉತ್ತಪ್ಪ (Robin Uthappa) ಅವರ ಮನೆಗೆ ಪುಟಾಣಿ ಅತಿಥಿಯೊಬ್ಬಳು ಬಂದಿದ್ದಾಳೆ. ಹೀಗಾಗಿ ಅವರ ಕುಟುಂಬವೇ ಸಂತಸದಲ್ಲಿ ತೇಲಾಡುತ್ತಿದೆ.

ಅವರ ಮನೆಗೆ ಬಂದವಳು ಮತ್ಯಾರು ಅಲ್ಲ, ಉತ್ತಪ್ಪ ಅವರ ಎರಡನೇ ಮಗು. ರಾಬಿನ್‌ ಅವರ ಪತ್ನಿ ಶೀತಲ್‌ ಹೆಣ್ಣು ಕೂಸಿಗೆ ಜನುಮ ನೀಡಿದ್ದು ಸಂತಸದಲ್ಲಿರುವ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಮಗಳೊಂದಿಗಿನ ಚಿತ್ರವನ್ನು ಪೋಸ್ಟ್‌ ಮಾಡಿದ್ದಾರೆ.

ಮಗಳಿಗೆ ಟ್ರಿನಿಟಿ ಥಿಯಾ ಉತ್ತಪ್ಪ ಎಂದು ಹೆಸರಿಡಲಾಗಿದೆ. ಅಲ್ಲದೆ, ಮಗಳು ಬಂದ ಖುಷಿಯನ್ನು ರಾಬಿನ್‌, ಪದಗಳಲ್ಲಿ ಬಣ್ಣಿಸಿದ್ದಾರೆ.

“ನಮ್ಮ ಬದುಕಿಗೆ ಬಂದಿರುವ ದೇವತೆಯನ್ನು ನಿಮಗೆಲ್ಲರಿಗೂ ಪರಿಚಯಿಸಲು ಸಂತಸವಾಗುತ್ತಿದೆ. ಅವಳೇ ಟ್ರಿನಿಟಿ ಥಿಯಾ ಉತ್ತಪ್ಪ. ಈ ಜಗತ್ತಿಗೆ ಪ್ರವೇಶ ಪಡೆಯಲು ನಮ್ಮನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ಹೆಮ್ಮೆಯಿದೆ. ನಿನ್ನ ಹೆತ್ತವರಾದ ನಮಗೆ ಹಾಗೂ ಸಹೋದರನಿಗೆ ಸಿಕ್ಕ ಆಶೀರ್ವಾದವಿದು,ʼʼ ಎಂದು ರಾಬಿನ್‌ ಬರೆದುಕೊಂಡಿದ್ದಾರೆ.

ಐಪಿಎಲ್‌ ಸ್ಟಾರ್‌ ಉತ್ತಪ್ಪ

ರಾಬಿನ್‌ ಉತ್ತಪ್ಪ ೨೦೧೫ರಲ್ಲಿ ಕೊನೇ ಬಾರಿ ಭಾರತ ತಂಡದಲ್ಲಿ ಕಾಣಿಸಿಕೊಂಡಿದ್ದರು. ಜಿಂಬಾಬ್ವೆ ಪ್ರವಾಸ ಮಾಡಿದ್ದ ತಂಡದಲ್ಲಿ ಅವರಿದ್ದರು. ಆ ಬಳಿಕ ಟೀಮ್‌ ಇಂಡಿಯಾ ಸೇರಲು ಅವರಿಗೆ ಸಾಧ್ಯವಾಗಿಲ್ಲ. ಆದಾಗ್ಯೂ ಅವರು ಐಪಿಲ್‌ನಲ್ಲಿ ಉತ್ತಮ ಮೌಲ್ಯ ಹೊಂದಿದ್ದಾರೆ. ೧೫ನೇ ಆವೃತ್ತಿಯಲ್ಲಿ ಅವರು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಪರ ಆಡಿದ್ದರು.

ಇದನ್ನೂ ಓದಿ | ವಿರಾಟ್‌ ಕೊಹ್ಲಿ (Virat Kohli) ಬೆಂಬಲಕ್ಕೆ ನಿಂತ ಪಾಕ್‌ ಕ್ಯಾಪ್ಟನ್‌

Exit mobile version