Site icon Vistara News

Ganesha Chathurthi : ಕೊಹ್ಲಿ ಮತ್ತು ರೋಹಿತ್​ ಶರ್ಮಾ ಗಣೇಶ ಚತುರ್ಥಿ ಹೇಗೆ ಆಚರಿಸಿದ್ರು ಗೊತ್ತಾ?

Viratr and anushak

ಮುಂಬಯಿ: ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಮಂಗಳವಾರ ಗಣೇಶ ಚತುರ್ಥಿ (Ganesha Chathurthi) ಹಿನ್ನೆಲೆಯಲ್ಲಿ ವಿಘ್ನ ನಿವಾರಕ ಗಣೇಶನನ್ನು ತಮ್ಮ ತಮ್ಮ ನಿವಾಸಗಳಲ್ಲಿ ವಿಶೇಷವಾಗಿ ಪೂಜಿಸಿದರು. ಗಣೇಶ ಮೂರ್ತಿಯನ್ನು ಮನೆಗೆ ಕರೆತರುವ ಮೂಲಕ ಸಂಭ್ರಮದಿಂದ ಪೂಜೆ ಮಾಡಿದರು ಪ್ರಸ್ತುತ, ಕೊಹ್ಲಿ ಮತ್ತು ರೋಹಿತ್ ಇಬ್ಬರೂ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯಕ್ಕಾಗಿ ಭಾರತೀಯ ತಂಡವನ್ನು ಸೇರುವ ಮೊದಲು ಸ್ವಲ್ಪ ಬಿಡುವು ಪಡೆದುಕೊಂಡಿದ್ದಾರೆ. ರೋಹಿತ್ ನಾಯಕತ್ವದಲ್ಲಿ ಭಾರತ ತಂಡ ಏಷ್ಯಾಕಪ್ನ ಅಂತಿಮ ಪಂದ್ಯದಲ್ಲಿ ಶ್ರೀಲಂಕಾವನ್ನು ಮಣಿಸಿ ಮೇಲುಗೈ ಸಾಧಿಸಿದೆ. ಕೊಹ್ಲಿ ಕೂಡ ಅದ್ಧೂರಿ ಫಾರ್ಮ್ ನಲ್ಲಿದ್ದರಲ್ಲದೆ, ಪಾಕ್ ವಿರುದ್ದ ವಿರುದ್ಧ ಅಜೇಯ ಶತಕವನ್ನು ಗಳಿಸಿದ್ದಾರೆ.

ವಿರಾಟ್ ಪತ್ನಿ ಅನುಷ್ಕಾ ಸೀರೆಯಲ್ಲಿ ಸುಂದರವಾಗಿ ಕಾಣುತ್ತಿದ್ದರೆ, ವಿರಾಟ್​ ಕೊಹ್ಲಿ ಶೆರ್ವಾನಿ ಧರಿಸಿದ್ದರು. ಅವರಿಬ್ಬರು ಗಣಪತಿಗೆ ಮಂಗಳಾರತಿ ಮಾಡುವ ಫೋಟೊಗಳು ವೈರಲ್ ಆಗಿವೆ. ಈ ಚಿತ್ರಗಳಿಗೆ ಸಿಕ್ಕಾಪಟ್ಟೆ ಲೈಕ್​ಗಳು ಬಂದಿವೆ. ಅದೇ ರೀತಿ ರೋಹಿತ್ ಶರ್ಮ ಸಾಂಪ್ರದಾಯಿಕ ದಿರಿಸಿನೊಂದಿಗೆ ಕಾಣಿಸಿಕೊಂಡಿದ್ದು, ಅವರು ಕೂಡ ಗಣೇಶನಿಗೆ ಪೂಜೆ ಮಾಡುತ್ತಿದ್ದಾರೆ.

ಮೊದಲ ಎರಡು ಪಂದ್ಯಗಳಿಗೆ ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ವಿರಾಟ್ ಕೊಹ್ಲಿ ಮತ್ತು ಕುಲದೀಪ್ ಯಾದವ್ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಕೆಎಲ್ ರಾಹುಲ್ ನಾಯಕರಾಗಿದ್ದಾರೆ. ಮೊದಲ ಎರಡು ಪಂದ್ಯಗಳಿಗೆ ರವೀಂದ್ರ ಜಡೇಜಾ ಅವರನ್ನು ಉಪನಾಯಕನನ್ನಾಗಿ ಹೆಸರಿಸಲಾಗಿದ್ದು, ಶ್ರೇಯಸ್ ಅಯ್ಯರ್ ಕೂಡ ಸರಣಿಗೆ ಫಿಟ್ ಆಗಿದ್ದಾರೆ. ಏಷ್ಯಾಕಪ್ ಫೈನಲ್ ಹೀರೋ ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಶಾರ್ದೂಲ್ ಠಾಕೂರ್ ಮತ್ತು ಪ್ರಸಿದ್ಧ್ ಕೃಷ್ಣ ಅವರನ್ನೊಳಗೊಂಡ ಆಸ್ಟ್ರೇಲಿಯಾ ಸರಣಿಗೆ ಭಾರತವು ಬಲವಾದ ವೇಗದ ದಾಳಿಯನ್ನು ಹೊಂದಿದೆ.

ರೋಹಿತ್ ಮತ್ತು ವಿರಾಟ್ ಎಂದೆಂದಿಗೂ ಇದ್ದಾರೆ. ಅವರಿಗೆ ಹಾರ್ದಿಕ್ ನಾವು ಕೆಲಸದ ಹೊರೆಯನ್ನು ನಿರ್ವಹಿಸಲು ಬಯಸುತ್ತೇವೆ. ಕುಲದೀಪ್ ಅದ್ಭುತ ಆಟಗಾರ. ಕೆಲವು ಹಂತದಲ್ಲಿ, ದೈಹಿಕಕ್ಕಿಂತ ಹೆಚ್ಚಾಗಿ ಮಾನಸಿಕ ವಿರಾಮ ಬೇಕು. ಮೂರನೇ ಪಂದ್ಯದಿಂದ, ಎಲ್ಲರೂ ಆಡಲು ಲಭ್ಯವಿರುತ್ತಾರೆ. ಈ ಬದಲಾವಣೆ ಬೇರೆ ಆಟಗಾರರಿಗೆ ಅವಕಾಶವನ್ನು ನೀಡುತ್ತದೆ. ಏಷ್ಯಾಕಪ್ ಕೂಡ ಅವರಿಗೆ ಸಾಕಷ್ಟು ಆಟದ ಸಮಯವನ್ನು ನೀಡಿತು ಎಂದು ಆಯ್ಕೆ ಸಮಿತಿ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಹೇಳಿದ್ದಾರೆ.

ಇದನ್ನೂ ಓದಿ : Mohammed Shami : ಕ್ರಿಕೆಟರ್​ ಮೊಹಮ್ಮದ್ ಶಮಿಗೆ ಬಂಧನ ಭೀತಿ ದೂರ

ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ಕೆಎಲ್ ರಾಹುಲ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.

ಮೊದಲ ಎರಡು ಏಕದಿನ ಪಂದ್ಯಗಳಿಗೆ ಭಾರತ ತಂಡ: ಕೆಎಲ್ ರಾಹುಲ್ (ನಾಯಕ), ರವೀಂದ್ರ ಜಡೇಜಾ (ಉಪನಾಯಕ), ಋತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ವಾಷಿಂಗ್ಟನ್ ಸುಂದರ್, ಆರ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ. ಶಮಿ, ಮೊಹಮ್ಮದ್. ಸಿರಾಜ್, ಪ್ರಸಿದ್ಧ್ ಕೃಷ್ಣ

ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್*, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಆರ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ. ಶಮಿ, ಮೊಹಮ್ಮದ್. ಸಿರಾಜ್

Exit mobile version