ಅಹಮದಾಬಾದ್: 12 ವರ್ಷಗಳ ಬಳಿಕ ವಿಶ್ವಕಪ್ ಟ್ರೋಫಿಯ ಕೊರಗನ್ನು ನೀಗಿಸಲು ಪಣ ತೊಟ್ಟಿರುವ ಟೀಮ್ ಇಂಡಿಯಾ ಆಟಗಾರರು(team india practice) ಫೈನಲ್ ಪಂದ್ಯಕ್ಕೆ ಕಠಿಣ ಅಭ್ಯಾಸ ನಡೆಸಿದ್ದಾರೆ. ಭಾರತ ತಂಡ ಭಾನುವಾರ ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ(IND vs AUS final) ವಿರುದ್ಧ ಫೈನಲ್ ಪಂದ್ಯದಲ್ಲಿ ಕಣಕ್ಕಿಳಿಯಲಿದೆ.
ಪಿಚ್ ಪರೀಕ್ಷಿಸುತ್ತಿರುವ ನಾಯಕ ರೋಹಿತ್
ಗುರುವಾರ ರಾತ್ರಿ ಅಹಮದಾಬಾದ್ಗೆ ತಲುಪಿದ ಟೀಮ್ ಇಂಡಿಯಾ ಇದೀಗ ಶುಕ್ರವಾರ ಅಭ್ಯಾಸ ಆರಂಭಿಸಿದೆ. ತಂಡ ಕೋಚ್ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಎಲ್ಲ ಆಟಗಾರು ಬ್ಯಾಟಿಂಗ್ ಅಭ್ಯಾಸ ನಡೆಸಿದರು. ಬಳಿಕ ಫೀಲ್ಡಿಂಗ್ ಕೋಚ್ ಅವರು ಸ್ಲಿಪ್ನಲ್ಲಿ ಕ್ಯಾಚಿಂಗ್ ಅಭ್ಯಾಸ ನಡೆಸಿದರು. ಆಟಗಾರರು ಅಭ್ಯಾಸ ನಡೆಸುಇದ ಫೋಟೊಗಳನ್ನು ಬಿಸಿಸಿಐ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಮತ್ತು ಟ್ವಿಟರ್ ಎಕ್ಸ್ನಲ್ಲಿ ಹಂಚಿಕೊಂಡಿದೆ.
ಶುಭಮನ್ ಗಿಲ್ಗೆ ಸಲಹೆ ನೀಡುತ್ತಿರುವ ಕೋಚ್ ದ್ರಾವಿಡ್
ಅಹಮದಾಬಾದ್ ತಲುಪಿದ ಟೀಮ್ ಇಂಡಿಯಾ…
ಬ್ಯಾಟಿಂಗ್ ಅಭ್ಯಾಸ ನಡೆಸಿದ ರೋಹಿತ್,ವಿರಾಟ್
ತಂಡದ ನಾಯಕ ರೋಹಿತ್ ಶರ್ಮ ಅವರು ಬ್ಯಾಟಿಂಗ್ ಅಭ್ಯಾಸದ ವೇಳೆ ದೊಡ್ಡ ಹೊಡೆತಗಳ ಅಭ್ಯಾಸವನ್ನೇ ಹೆಚ್ಚಾಗಿ ನಡೆಸಿದರು. ಈ ಬಾರಿ ವಿಶ್ವಕಪ್ ಟೂರ್ನಿಯಲ್ಲಿ ಪಾತ್ರವೂ ಕೂಡ ಇದೇ ಆಗಿದೆ. ಆರಮಭದಿಂದಲೇ ಬಿರುಸಿನ ಬ್ಯಾಟಿಂಗ್ ನಡೆಸಿ ಎಎದುರಾಳಿ ತಂಡದ ಬೌಲಿಂಗ್ ಯೋಜನೆಯನ್ನು ವಿಚಲಿತಗೊಳಿಸುವುದು. ಮತ್ತು ಪವರ್ ಪ್ಲೇ ಮುಗಿಯುವ ಮುನ್ನವೇ ದೊಡ್ಡ ಮೊತ್ತವನ್ನು ಹೊಂದಿಸುವುದುದರಿಂದ ಬಳಿಕ ಬರುವ ಆಟಗಾರರು ಯಾವುದೇ ನಿಶ್ಚಿಂತೆಯಿಂದ ಬ್ಯಾಟಿಂಗ್ ನಡೆಸಬಹುದು.
ಇದನ್ನೂ ಓದಿ ಫೈನಲ್ ಪಂದ್ಯಕ್ಕೆ ಅಂಪೈರ್ ಪಟ್ಟಿ ಬಿಡುಗಡೆ; ಟೀಮ್ ಇಂಡಿಯಾ ಅಭಿಮಾನಿಗಳಲ್ಲಿ ನಡುಕ!
ಅಭ್ಯಾಸದ ತಯಾರಿ ಬಗ್ಗೆ ಮಾತುಕತೆ
ವಿರಾಟ್ ಕೊಹ್ಲಿಗೆ ಈ ಬಾರಿಯ ವಿಶ್ವಕಪ್ನಲ್ಲಿ ನಿಧಾನಗತಿಯ ಬ್ಯಾಟಿಂಗ್ ನಡಸಿ ತಂಡಕ್ಕೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳುವುದಾಗಿದೆ. ಹೀಗಾಗಿ ಅವರು ಈ ಬಾರಿ ಆಡಿದ ಎಲ್ಲ ಪಂದ್ಯಗಳಲ್ಲಿಯೂ ತಮ್ಮ ಅಗ್ರೆಸಿವ್ ಬ್ಯಾಟಿಂಗ್ ತೋರ್ಪಡಿಸಿಲ್ಲ. ಒಟ್ಟಾರೆ ಈ ಬಾರಿ ಟೀಮ್ ಮ್ಯಾನೆಜ್ಮೆಂಟ್ ಪಕ್ಕಾ ಯೋಜನೆಯೊಂದನ್ನು ರೂಪಿಸಿ ಎಲ್ಲ ಆಟಗಾರರಿಗೂ ತಮ್ಮದೇ ಆದ ಪಾತ್ರವನ್ನು ನೀಡಿದೆ. ಇದೇ ರೀತಿಯಲ್ಲಿ ಆಟಗಾರರು ಕೂಡ ತಮ್ಮ ಪ್ರದರ್ಶನವನ್ನು ಹೊರಹಾಕುತ್ತಿದ್ದಾರೆ. ಇದು ತಂಡದ ಯಶಸ್ಸಿಗೆ ಪ್ರಧಾನ ಕಾರಣ.
ಇದನ್ನೂ ಓದಿ World Cup Final: ಭಾರತ-ಆಸೀಸ್ ಫೈನಲ್ ಪಂದ್ಯಕ್ಕೆ ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ಹಾಜರ್!
ಫೀಲ್ಡಿಂಗ್ ಕೋಚ್ ತ ದಿಲೀಪ್ ಜತೆ ಸಲಹೆ ಪಡೆಯುತ್ತಿರುವ ರೋಹಿತ್
ಫೈನಲ್ ಪಂದ್ಯಕ್ಕೆ ಭಾರತ ತನ್ನ ಆಡುವ ಬಳಗದಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಇಲ್ಲ. ಈಗಾಗಲೇ ಈ ವಿಚಾರವನ್ನು ನಾಯಕ ರೋಹಿತ್ ಮತ್ತು ಕೋಚ್ ದ್ರಾವಿಡ್ ಅವರು ಹೇಳಿದ್ದಾರೆ. ಹೀಗಾಗಿ ಸೆಮಿಫೈನಲ್ ಆಡಿದ ತಂಡವನ್ನೇ ಈ ಪಂದ್ಯದಲ್ಲಿ ಆಡಿಸಲಾಗುವುದು.
ಇದನ್ನೂ ಓದಿ Mohammed Shami : ವಿಶ್ವ ಕಪ್ನಲ್ಲಿ ವಿಕೆಟ್ಗಳ ಅರ್ಧ ಶತಕ ಬಾರಿಸಿ ನೂತನ ದಾಖಲೆ ಬರೆದ ಶಮಿ
ಪಿಚ್ ಸಿದ್ಧತೆಯಲ್ಲಿ ತೊಡಗಿರುವ ಸಿಬ್ಬಂದಿ
ಫೈನಲ್ ಪಂದ್ಯಕ್ಕೆ ಭಾರತ ಆಡುವ ಬಳಗ
ರೋಹಿತ್ ಶರ್ಮ(ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್, ರವೀಂದ್ರ ಜಡೇಜ, ಸೂರ್ಯಕುಮಾರ್ ಯಾದವ್,ಮೊಹಮ್ಮದ್ ಶಮಿ. ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಕುಲ್ದೀಪ್ ಯಾದವ್.