Site icon Vistara News

IND vs SA | ಕ್ಯಾಪ್ಟನ್‌ ಕೂಲ್‌ ಮಹೇಂದ್ರ ಸಿಂಗ್‌ ಧೋನಿಯ ದಾಖಲೆಯನ್ನು ಮುರಿದ ಹಿಟ್ಟರ್‌ ರೋಹಿತ್‌!

rohit sharma

ತಿರುವನಂತಪುರ : ಪ್ರವಾಸಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧದ ಟಿ೨೦ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ೮ ವಿಕೆಟ್‌ ವಿಕೆಟ್‌ಗಳಿಂದ ಜಯ ಸಾಧಿಸಿದ ತಕ್ಷಣ ನಾಯಕ ರೋಹಿತ್‌ ಶರ್ಮ ಹೊಸ ದಾಖಲೆಯೊಂದನ್ನು ಸೃಷ್ಟಿಸಿದರು. ಈ ಮೂಲಕ ಅವರು ಟಿ೨೦ ಮಾದರಿಯಲ್ಲಿ ಯಶಸ್ವಿ ನಾಯಕ ಎಂಬುದನ್ನು ಮತ್ತೊಂದು ಬಾರಿ ಸಾಬೀತು ಮಾಡಿದರು.

ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯ ಗೆಲ್ಲುವ ಮೂಲಕ ಭಾರತ ತಂಡ ರೋಹಿತ್‌ ಶರ್ಮ ನೇತೃತ್ವದಲ್ಲಿ ೧೬ ಪಂದ್ಯ ಜಯಿಸಿದೆ. ಈ ಮೂಲಕ ಕ್ಯಾಲೆಂಡರ್‌ ವರ್ಷದಲ್ಲಿ ಭಾರತ ಪರ ಅತ್ಯಧಿಕ ಟಿ೨೦ ಪಂದ್ಯಗಳನ್ನು ಜಯಸಿದ ನಾಯಕ ಎನಿಸಿಕೊಂಡರು. ಇದೇ ವೇಳೆ ಅವರು ೨೦೧೬ರಲ್ಲಿ ೧೫ ಪಂದ್ಯಗಳನ್ನು ಗೆದ್ದ ಮಾಜಿ ನಾಯಕ ಕ್ಯಾಪ್ಟನ್‌ ಕೂಲ್‌ ಮಹೇಂದ್ರ ಸಿಂಗ್‌ ಧೋನಿ ಅವರ ದಾಖಲೆ ಮುರಿದರು.

ತಿರುವನಂತಪುರದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ದಕ್ಷಿಣ ಆಫ್ರಿಕಾ ತಂಡ ೨೦ ಓವರ್‌ಗಳಲ್ಲಿ ೮ ವಿಕೆಟ್‌ಗೆ ೧೦೬ ರನ್‌ ಬಾರಿಸಿದ್ದರೆ, ಭಾರತ ತಂಡ ೧೬.೪ ಓವರ್‌ಗಳಲ್ಲಿ ೨ ವಿಕೆಟ್‌ಗೆ ೧೧೦ ರನ್ ಬಾರಿಸಿ ಜಯಶಾಲಿಯಾಯಿತು.

ಇದನ್ನೂ ಓದಿ | Team India | ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮ ಗೆಲುವಿನ ಸಂಭ್ರಮಕ್ಕೆ ಅಭಿಮಾನಿಗಳ ಮೆಚ್ಚುಗೆ

Exit mobile version