ಬೆಂಗಳೂರು: ಏಕ ದಿನ ವಿಶ್ವ ಕಪ್ಗೆ (World Cup 2023) ಭಾರತ ತಂಡ ಪ್ರಕಟಗೊಂಡಿದೆ. ಆದರೆ, ಈ ತಂಡದಲ್ಲಿ (Team India) ಅವಕಾಶ ಪಡೆಯಬಹುದು ಎಂದು ನಿರೀಕ್ಷೆ ಮಾಡಲಾಗಿದ್ದ ಸಂಜು ಸ್ಯಾಮ್ಸನ್, ಪ್ರಸಿದ್ಧ್ ಕೃಷ್ಣ ಮತ್ತು ರವಿಚಂದ್ರನ್ ಅಶ್ವಿನ್ ಅವರಿಗೆ ನಿರಾಸೆ ಎದುರಾಗಿದೆ. ಅಚ್ಚರಿಯೆಂದರೆ ಈ ಮೂವರು ಆಟಗಾರರು ಐಪಿಎಲ್ನಲ್ಲಿ (IPL )ರಾಜಸ್ಥಾನ್ ರಾಯಲ್ಸ್ (Rajastan Royals) ತಂಡದ ಪರವಾಗಿ ಆಡುವವರು. ಹೀಗಾಗಿ ಪ್ರಮುಖ ಆಟಗಾರರನ್ನು ಕೈಬಿಟ್ಟಿರುವ ಕುರಿತು ಜೋರು ಚರ್ಚೆಗಳು ನಡೆಯುತ್ತಿವೆ. ಏತನ್ಮಧ್ಯೆ, ನಾಯಕ ರೋಹಿತ್ ಶರ್ಮಾ (Rohit Sharma) ಈ ಮೂವರನ್ನು ಕೈ ಬಿಟ್ಟಿದ್ದಕ್ಕೆ ಸಮರ್ಥನೆ ನೀಡಿದ್ದಾರೆ. 2023ರ ವಿಶ್ವಕಪ್ ತಂಡದಲ್ಲಿ ಕೇವಲ 15 ಸದಸ್ಯರನ್ನು ಮಾತ್ರ ಆಯ್ಕೆ ಮಾಡಲು ಸಾಧ್ಯವಾಗುತ್ತಿದೆ. ಹೀಗಾಗಿ ಅವರನ್ನು ಕೈಬಿಡಲಾಗಿದೆ ಎಂದು ಹೇಳಿದ್ದಾರೆ.
“2011ರಲ್ಲಿ ನಾನು ಇದೇ ಸ್ಥಿತಿಯನ್ನು ಅನುಭವಿಸಿದ್ದೇನೆ. ಅವಕಾಶ ತಪ್ಪಿದಾಗ ಅದು ಗೊತ್ತಾಗುತ್ತದೆ. ನೀವು ನಿಮ್ಮ ಗಲ್ಲವನ್ನು ಮೇಲಕ್ಕೆತ್ತಿ ಅವಕಾಶಗಳನ್ನು ಎದುರು ನೋಡಬೇಕು. ನಾವು ಕೇವಲ 15 ಆಟಗಾರರನ್ನು ಮಾತ್ರ ಆಯ್ಕೆ ಮಾಡಬಹುದು. ಇದು 2023 ರ ವಿಶ್ವಕಪ್ಗೆ ಲಭ್ಯವಿರುವ ಅತ್ಯುತ್ತಮ ಆಟಗಾರರು” ಎಂದು ರೋಹಿತ್ ಶರ್ಮಾ ಭಾರತ ವಿಶ್ವಕಪ್ ತಂಡದ ಆಯ್ಕೆ ಬಳಿಕದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: Virender Sehwag: ‘ಇದು ಟೀಮ್ ಇಂಡಿಯಾ ಅಲ್ಲ’; ವಿಶ್ವಕಪ್ ತಂಡ ಪ್ರಕಟದ ಬೆನ್ನಲ್ಲೇ ಅಚ್ಚರಿಯ ಟ್ವೀಟ್ ಮಾಡಿದ ಸೆಹವಾಗ್
ರೋಹಿತ್ ಶರ್ಮಾ 2011 ರ ವಿಶ್ವಕಪ್ ತಂಡದ ಆಯ್ಕೆಯಲ್ಲಿ ಸ್ಥಾನವನ್ನು ಕಳೆದುಕೊಂಡಿದ್ದರು. ಆಗ ಅವರಿಗೂ ನಿರಾಶೆಯಾಯಿತು. ಆದಾಗ್ಯೂ, ಅವರು ಪುಟಿದೆದ್ದಿದ್ದರು. 12 ವರ್ಷಗಳ ನಂತರ, ಅವರು ತವರಿನಲ್ಲಿ ನಡೆಯಲಿರುವ ವಿಶ್ವಕಪ್ನಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.
ತಂಡದ ಪ್ರಮುಖ ಅಂಶಗಳು
- ಸಂಜು ಸ್ಯಾಮ್ಸನ್ ಬದಲಿಗೆ ಸೂರ್ಯಕುಮಾರ್ ಯಾದವ್ಗೆ ಅವಕಾಶ ನೀಡಲಾಗಿದೆ. ಏಕದಿನ ಪಂದ್ಯಗಳಲ್ಲಿ ಸೂರ್ಯ ಉತ್ತಮ ಪ್ರದರ್ಶನ ನೀಡಿಲ್ಲವಾದರೂ ಅವರಿಗೆ ಮಧ್ಯಮ ಕ್ರಮಾಂಕದಲ್ಲಿ ಸಿಡಿಯಬಲ್ಲರು ಎಂಬ ಪೂರಕ ಅಂಶವಿದೆ. .
- ಬ್ಯಾಕಪ್ ಆಯ್ಕೆಯಾಗಿ ಆಡುವ ಸೂರ್ಯಕುಮಾರ್ ಸಾಮರ್ಥ್ಯದ ಬಗ್ಗೆ ಹೆಚ್ಚಿನ ನಂಬಿಕೆ ಟೀಮ್ ಮ್ಯಾನೇಜ್ಮೆಂಟ್ಗೆ ನಂಬಿಕೆಯಿದೆ.
- ಶ್ರೇಯಸ್ ಅಯ್ಯರ್ ಮಧ್ಯಮ ಕ್ರಮಾಂಕಕ್ಕೆ ನೆಚ್ಚಿನ ಆಟಗಾರನಾಗಿರುವುದರಿಂದ ಪ್ಲೇಯಿಂಗ್ ಇಲೆವೆನ್ನಲ್ಲಿ ಸೂರ್ಯ ಸ್ಥಾನ ಪಡೆಯುವುದು ಬಹುತೇಕ ಅಸಾಧ್ಯ.
- ಸಂಜು ಸ್ಯಾಮ್ಸನ್ಗೆ ಪೂರಕವಾಗದ ಪ್ರಮುಖ ಅಂಶವೆಂದರೆ ಅವರ ವಿಕೆಟ್ ಕೀಪಿಂಗ್ನ ದೋಷ .
- ವಿಕೆಟ್ ಕೀಪರ್ ಬ್ಯಾಕ್ಅಪ್ ಆಗಿ ಇಶಾನ್ ಕಿಶನ್ ಅವರಿಗೆ ಆದ್ಯತೆ ನೀಡಲಾಗುತ್ತದೆ. ಅವರು ಅಗ್ರ ಅಥವಾ ಮಧ್ಯಮ ಕ್ರಮಾಂಕದಲ್ಲಿ ಏಕೈಕ ಎಡಗೈ ಬ್ಯಾಟರ್.
- ಕೆಎಲ್ ರಾಹುಲ್ ಪ್ರಮುಖ ವಿಕೆಟ್ ಕೀಪರ್-ಬ್ಯಾಟರ್ ಆಗಿರಲಿದ್ದಾರೆ.
- ವಿಶ್ವದ ನಂ.1 ಟಿ 20 ಬ್ಯಾಟರ್ ಸೂರ್ಯಕುಮಾರ್ ಯಾದವ್ ಫಿನಿಶರ್ ಆಗಿ ತಮ್ಮ ಹೊಸ ಪಾತ್ರ ವಹಿಸಲು ಸಾಧ್ಯವಿದೆ.
- ತಂಡದ ಉಳಿದ ಆಟಗಾರರು ಏಷ್ಯಾಕಪ್ ತಂಡದಂತೆಯೇ ಇದ್ದಾರೆ.
- ಬ್ಯಾಟಿಂಗ್ ಡೆಪ್ತ್ ನೀಡಬಲ್ಲ ಶಾರ್ದೂಲ್ ಠಾಕೂರ್ಗೆ ಟೀಮ್ ಇಂಡಿಯಾ ಆದ್ಯತೆ ನೀಡಿರುವುದರಿಂದ ಪ್ರಸಿದ್ಧ್ ಕೃಷ್ಣ ತಂಡದಿಂದ ಹೊರಗುಳಿದಿದ್ದಾರೆ.
- ಮೊಹಮ್ಮದ್ ಶಮಿ ಅವರ ಅನುಭವದಿಂದಾಗಿ ನಿರ್ಣಾಯಕವಾಗಲಿದ್ದಾರೆ.
- ಇದೇ ಮೊದಲ ಬಾರಿಗೆ ಭಾರತವು ಆಫ್-ಸ್ಪಿನ್ನರ್ ಇಲ್ಲದೆ ತವರಿನಲ್ಲಿ ವಿಶ್ವಕಪ್ ಆಡಲಿದೆ.
- ತಿಲಕ್ ವರ್ಮಾ ತಂಡದಿಂದ ಹೊರಗುಳಿದಿದ್ದು, ರವಿಚಂದ್ರನ್ ಅಶ್ವಿನ್ ವೈಟ್ ಬಾಲ್ ಕ್ರಿಕೆಟ್ನಲ್ಲಿ ಇಲ್ಲದ ಕಾರಣ ಭಾರತಕ್ಕೆ ಬೇರೆ ಆಯ್ಕೆಗಳಿಲ್ಲ.
ತಂಡ ಈ ರೀತಿ ಇದೆ.
ಬ್ಯಾಟರ್ಗಳು: ರೋಹಿತ್ ಶರ್ಮಾ, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್
ವಿಕೆಟ್ ಕೀಪರ್ಗಳು: ಇಶಾನ್ ಕಿಶನ್, ಕೆಎಲ್ ರಾಹುಲ್
ವೇಗದ ಬೌಲಿಂಗ್ ಆಲ್ರೌಂಡರ್ಗಳು: ಹಾರ್ದಿಕ್ ಪಾಂಡ್ಯ (ಉಪನಾಯಕ), ಶಾರ್ದೂಲ್ ಠಾಕೂರ್
ಸ್ಪಿನ್ ಆಲ್ರೌಂಡರ್ಗಳು: ರವೀಂದ್ರ ಜಡೇಜಾ, ಅಕ್ಷರ್ ಪಟೇಲ್,
ವೇಗಿಗಳು: ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್
ಸ್ಪಿನ್ನರ್: ಕುಲದೀಪ್ ಯಾದವ್