Site icon Vistara News

Team India : ಏಷ್ಯನ್​ ಗೇಮ್ಸ್​ ತಂಡದಲ್ಲಿ ರೋಹಿತ್, ಕೊಹ್ಲಿಇಲ್ಲ; 5 ಪ್ರಮುಖ ಘೋಷಣೆ ಮಾಡಿದ ಬಿಸಿಸಿಐ

Team India

ನವದೆಹಲಿ: ಸೆಪ್ಟೆಂಬರ್-ಅಕ್ಟೋಬರ್​ನಲ್ಲಿ ಚೀನಾದ ಹ್ಯಾಂಗ್​ಜೌನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ 2023ರಲ್ಲಿ ಭಾರತದ ಪುರುಷ ಮತ್ತು ಮಹಿಳಾ ಕ್ರಿಕೆಟ್ (Team India) ತಂಡಗಳು ಭಾಗವಹಿಸಲಿವೆ ಎಂಬ ಐತಿಹಾಸಿಕ ನಿರ್ಣಯವನ್ನು ಬಿಸಿಸಿಐ ತೆಗೆದುಕೊಂಡಿದೆ. ಆದರೆ, ವಿಶ್ವ ಕಪ್​ನಲ್ಲಿ ಆಡುವ ಭಾರತ ತಂಡದ ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡುವುದಿಲ್ಲ ಎಂಬುದಾಗಿಯೂ ದೃಢಪಡಿಸಿದೆ. ಇದರರ್ಥ ಭಾರತ ತಂಡದಲ್ಲಿ ಕಾಯಂ ನಾಯಕ ರೋಹಿತ್ ಶರ್ಮಾ, ಉಪನಾಯಕ ಹಾರ್ದಿಕ್ ಪಾಂಡ್ಯ, ಸ್ಟಾರ್ ಬ್ಯಾಟರ್​ ವಿರಾಟ್ ಕೊಹ್ಲಿ, ಆಲ್​ರೌಂಡರ್​​ ರವೀಂದ್ರ ಜಡೇಜಾ, ಕೀಪರ್ ಬ್ಯಾಟರ್​ ಕೆಎಲ್ ರಾಹುಲ್, ವೇಗಿಗಳಾದ ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಇರುವುದಿಲ್ಲ.

ಚೀನಾದ ಹ್ಯಾಂಗ್​ಜೌನಲ್ಲಿ 2023 ರ ಸೆಪ್ಟೆಂಬರ್​ನಲ್ಲಿ ನಡೆಯಲಿರುವ ಏಷ್ಯನ್ ಕ್ರೀಡಾಕೂಟಕ್ಕೆ ಬಿಸಿಸಿಐ ಪುರುಷರ ಮತ್ತು ಮಹಿಳಾ ತಂಡಗಳನ್ನು ಕಳುಹಿಸಲಿದೆ. ಆದಾಗ್ಯೂ, ಏಷ್ಯನ್ ಕ್ರೀಡಾಕೂಟದ ವೇಳಾಪಟ್ಟಿಗೆ ಏಷ್ಯನ್ ಗೇಮ್ಸ್​ ಸಮಸ್ಯೆ ಉಂಟು ಮಾಡುವ ಕಾರಣ ವಿಶ್ವ ಕಪ್​ನಲ್ಲಿ ಭಾಗವಹಿಸದ ಆಟಗಾರರಿಂದ ತುಂಬಿದ ತಂಡವನ್ನು ಕಳುಹಿಸುತ್ತೇವೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಶುಕ್ರವಾರ ಮುಂಬೈನಲ್ಲಿ ನಡೆದ 19ನೇ ಅಪೆಕ್ಸ್ ಕೌನ್ಸಿಲ್ ಸಭೆಯ ನಂತರ ಹೇಳಿದ್ದಾರೆ.

ಏಶ್ಯನ್ ಗೇಮ್ಸ್ ಸೆಪ್ಟೆಂಬರ್ 23ರಿಂದ ಅಕ್ಟೋಬರ್ 8ರವರೆಗೆ ನಡೆಯಲಿದೆ. ಕ್ರಿಕೆಟ್ ಕ್ರೀಡಾಕೂಟದ ಭಾಗವಾಗಿರುವ ಕಾರಣ ಈವೆಂಟ್​ನ ಕೊನೆಯಲ್ಲಿ ಅದನ್ನು ನಡೆಸುವ ಸಾಧ್ಯತೆಗಳಿವೆ. ಐಸಿಸಿ ವಿಶ್ವಕಪ್ 2023ರ ಸಿದ್ಧತೆಯಲ್ಲಿ ನಿರತರಾಗಿರುವ ಭಾರತದ ಸ್ಟಾರ್ ಕ್ರಿಕೆಟಿಗರಿಗೆ ಇದರಲ್ಲಿ ಭಾಗವಹಿಸುವುದು ಅಸಾಧ್ಯ ಎನಿಸಿದೆ.. ಅಕ್ಟೋಬರ್ 5 ರಿಂದ ಭಾರತದಲ್ಲಿ 50 ಓವರ್​ಗಳ ಪಂದ್ಯಾವಳಿ ನಡೆಯಲಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 8 ರಂದು ಆಸ್ಟ್ರೇಲಿಯಾ ವಿರುದ್ಧ ಆಡಲಿದೆ.

ಧವನ್​ಗೆ ನಾಯಕತ್ವ

ಏಷ್ಯನ್​ ಗೇಮ್ಸ್​ಗೆ ಭಾರತ ತಂಡವನ್ನು ಶಿಖರ್ ಧವನ್ ಮುನ್ನಡೆಸುವ ಸಾಧ್ಯತೆಯಿದೆ ಎಂದು ಈ ಹಿಂದೆ ವರದಿಯಾಗಿತ್ತು. ರಿಂಕು ಸಿಂಗ್, ಜಿತೇಶ್ ಶರ್ಮಾ ಮತ್ತು ಮುಖೇಶ್ ಕುಮಾರ್ ಅವರಂತಹ ಉದಯೋನ್ಮುಖ ಯುವ ಆಟಗಾರರು ಟಿ20 ಸ್ವರೂಪದಲ್ಲಿ ನಡೆಯಲಿರುವ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಪಾದಾರ್ಪಣೆ ಮಾಡುವ ಸಾಧ್ಯತೆಯಿದೆ. ವಿಶ್ವಕಪ್ ತಂಡದಲ್ಲಿ ಸ್ಥಾನ ಕಳೆದುಕೊಂಡವರನ್ನು ಏಷ್ಯನ್ ಕ್ರೀಡಾಕೂಟಕ್ಕೆ ಪರಿಗಣಿಸಬಹುದು. ಉದಾಹರಣೆಗೆ, ಋತುರಾಜ್ ಗಾಯಕ್ವಾಡ್ ಮತ್ತು ಯಶಸ್ವಿ ಜೈಸ್ವಾಲ್ ಇಬ್ಬರೂ ವಿಶ್ವಕಪ್ ನಲ್ಲಿ ಬ್ಯಾಕ್​ಅಪ್ ಆಟಗಾರರನ್ನಾಗಿ ಇಟ್ಟುಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಏಷ್ಯನ್ ಗೇಮ್ಸ್ ತಂಡದಲ್ಲಿ ಅವರು ಸೇರಿಸಬಹುದು.

ಮಹಿಳಾ ತಂಡಕ್ಕೆ ಅಂತಹ ಯಾವುದೇ ಸಮಸ್ಯೆಗಳು ಇರುವುದಿಲ್ಲ. ನಿಯಮಿತ ನಾಯಕಿ ಹರ್ಮನ್​ಪ್ರೀತ್​ ಕೌರ್ ನೇತೃತ್ವದ ಪೂರ್ಣ ತಂಡವು ತಮ್ಮ ಚೊಚ್ಚಲ ಏಷ್ಯನ್ ಕ್ರೀಡಾಕೂಟಕ್ಕಾಗಿ ಚೀನಾಕ್ಕೆ ಪ್ರಯಾಣಿಸಲು ಸಜ್ಜಾಗಿದೆ. ವಿಶೇಷವೆಂದರೆ, ಕಳೆದ ವರ್ಷ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಭಾರತೀಯ ಮಹಿಳಾ ತಂಡವು ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತ ನಂತರ ಬೆಳ್ಳಿ ಪದಕ ಗೆದ್ದುಕೊಂಡಿತ್ತು.

ಏಷ್ಯನ್ ಗೇಮ್ಸ್ನಲ್ಲಿ ಕ್ರಿಕೆಟ್ ನಿಗದಿ ಮಾಡಿರುವುದು ಇದು ಮೂರನೇ ಬಾರಿ. ಈ ಹಿಂದೆ 2010 ಮತ್ತು 2014ರಲ್ಲಿ ಏಷ್ಯನ್ ಗೇಮ್ಸ್​​​ ಭಾರತ ಪುರುಷರ ಅಥವಾ ಮಹಿಳಾ ತಂಡಗಳನ್ನು ಕಳುಹಿಸಿರಲಿಲ್ಲ. ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಅಫ್ಘಾನಿಸ್ತಾನದ ಪುರುಷರ ತಂಡಗಳು ಏಷ್ಯನ್ ಕ್ರೀಡಾಕೂಟಕ್ಕೆ ತಮ್ಮ ತಂಡಗಳನ್ನು ಆಯ್ಕೆ ಮಾಡುವಾಗ ಇದೇ ರೀತಿಯ ಸಮಸ್ಯೆಯನ್ನು ಎದುರಿಸುವ ಸಾಧ್ಯತೆಯಿದೆ.

ಇದನ್ನೂ ಓದಿ : IND vs WI T20 Squad: ವಿಂಡೀಸ್​ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಪ್ರಕಟ; ರೋಹಿತ್​,ಕೊಹ್ಲಿಗೆ ಕೊಕ್​

ಸಭೆಯ ನಂತರ 5 ಪ್ರಮುಖ ಘೋಷಣೆಗಳನ್ನು ಮಾಡಿದ ಬಿಸಿಸಿಐ

ಏಷ್ಯನ್​ ಗೇಮ್ಸ್ನಲ್ಲಿ ಭಾರತದ ಭಾಗವಹಿಸುವಿಕೆಗೆ ಅನುಮೋದನೆ ನೀಡುವ ಐತಿಹಾಸಿಕ ಕ್ರಮದ ಜತೆಗೆ , ಬಿಸಿಸಿಐ ಇತರ ಕೆಲವು ಪ್ರಮುಖ ನಿರ್ಧಾರಗಳನ್ನು ಸಹ ತೆಗೆದುಕೊಂಡಿದೆ.

ವಿದೇಶಿ ಟಿ 20 ಲೀಗ್​ಗಳಲ್ಲಿ ಭಾಗವಹಿಸುವುದಕ್ಕೆ ಸಂಬಂಧಿಸಿದಂತೆ ಬಿಸಿಸಿಐ ತನ್ನ ಆಟಗಾರರಿಗೆ (ನಿವೃತ್ತ ಆಟಗಾರರು ಸೇರಿದಂತೆ) ಹೊಸ ನೀತಿಯನ್ನು ರೂಪಿಸುತ್ತದೆ.

ಮುಂದಿನ ಋತುವಿನಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಪರಿಕಲ್ಪನೆಯನ್ನು ಹಿಂದಿನ ಸೀಸನ್ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್​ನಿಂದ ಬಿಸಿಸಿಐ ಮುಂದುವರಿಸಲಿದೆ – ಎ) ತಂಡಗಳು ತಮ್ಮ ಪ್ಲೇಯಿಂಗ್ ಇಲೆವೆನ್ ಜೊತೆಗೆ 4 ಬದಲಿ ಆಟಗಾರರನ್ನು ಟಾಸ್​್ಗೆ ಮೊದಲು ಆಯ್ಕೆ ಮಾಡಬೇಕಾಗುತ್ತದೆ. (ಬಿ) ತಂಡಗಳು ಪಂದ್ಯದ ಸಮಯದಲ್ಲಿ ಯಾವುದೇ ಸಮಯದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಅನ್ನು ಬಳಸಬಹುದು. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಹಿಂದಿನ ಋತುವಿನಲ್ಲಿ ಒಂದು ತಂಡವು ಇನಿಂಗ್ಸ್​ನ 14 ನೇ ಓವರ್​ಗೆ ಮೊದಲು ಮಾತ್ರ ಇಂಪ್ಯಾಕ್ಟ್ ಪ್ಲೇಯರ್ ಅನ್ನು ಬಳಸಬಹುದಾಗಿತ್ತು.

ಮುಂಬರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆಟದಲ್ಲಿ ಸಮತೋಲನ ಕಾಪಾಡಿಕೊಳ್ಳುವ ಉದ್ದೇಶದಿಂದ ಪ್ರತಿ ಓವರ್​ ಎರಡು ಬೌನ್ಸರ್ ಎಸೆತಕ್ಕೆ ಅವಕಾಶ ನೀಡಲು ಬಿಸಿಸಿಐ ನಿರ್ಧರಿಸಿದೆ.

ಬಿಸಿಸಿಐ ಎರಡು ಹಂತಗಳಲ್ಲಿ ದೇಶದ ಕ್ರೀಡಾಂಗಣಗಳನ್ನು ಮೇಲ್ದರ್ಜೆಗೇರಿಸಲು ಕೆಲಸ ಮಾಡಲಿದೆ. ಮೊದಲ ಹಂದಲ್ಲಿ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ರ ಸ್ಥಳಗಳನ್ನು ಮೇಲ್ದರ್ಜೆಗೇರಿಸಲಿದೆ. ಈ ಕೆಲಸವು ವಿಶ್ವಕಪ್ ಪ್ರಾರಂಭವಾಗುವ ಮೊದಲು ಪೂರ್ಣಗೊಳ್ಳುತ್ತದೆ. ಎರಡನೇ ಹಂತವು ಉಳಿದ ಸ್ಥಳಗಳನ್ನು ಮೇಲ್ದರ್ಜೆಗೇರಿಸುತ್ತದೆ.

Exit mobile version