ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ INDvsENG ODI ಸರಣಿಯ ಮೊದಲ ಪಂದ್ಯದ ನಡುವೆ ಏಕದಿನ ಮಾದರಿಯಲ್ಲಿ ೨೫೦ ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಪಾಕಿಸ್ತಾನ ತಂಡದ ಮಾಜಿ ಆಲ್‌ರೌಂಡರ್ ಶಾಹಿದ್ ಅಫ್ರಿದಿ ಅವರ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.
ರೋಹಿತ್ ಶರ್ಮ ಮಂಗಳವಾರ ನಡೆದ ಪಂದ್ಯದಲ್ಲಿ ೫ ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಈ ಮೂಲಕ ಅವರು ಏಕದಿನ ಕ್ರಿಕೆಟ್ ಮಾದರಿಯಲ್ಲಿ ಒಟ್ಟು ೨೫೦ ಸಿಕ್ಸರ್‌ಗಳ ಗಡಿ ದಾಟಿದರು. ಈ ಸಾಧನೆಗಾಗಿ ಅವರು ೨೩೦ ಪಂದ್ಯಗಳಲ್ಲಿ ಆಡಿದ್ದು, ೨೨೯ ಇನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದಾರೆ. ಪಾಕಿಸ್ತಾನ ತಂಡ ಮಾಜಿ ಆಲ್‌ರೌಂಡರ್ ಶಾಹಿದ್ ಅಫ್ರಿದಿ ಇಷ್ಟೊಂದು ಸಿಕ್ಸರ್‌ಗಳನ್ನು ಬಾರಿಸಲು ೨೫೯ ಇನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದರು. ಈ ಮೂಲಕ ಅತಿ ವೇಗದಲ್ಲಿ ೨೫೦ ಸಿಕ್ಸರ್‌ಗಳನ್ನು ಬಾರಿಸಿದ ಮೊದಲ ಆಟಗಾರ ಎಂಬ ಖ್ಯಾತಿಗೆ ಪಾತ್ರರಾದರು.
ವಿಶ್ವದ ನಾಲ್ಕನೇ ಆಟಗಾರ
ರೋಹಿತ್ ಶರ್ಮ ಇದೀಗ ಏಕದಿನ ಮಾದರಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದವರಲ್ಲಿ ವಿಶ್ವದ ನಾಲ್ಕನೇ ಆಟಗಾರ. ೩೫೧ ಸಿಕ್ಸರ್ ಬಾರಿಸಿರುವ ಶಾಹಿದ್ ಅಫ್ರಿದಿ ಈ ಪಟ್ಟಿಯಲ್ಲಿ ಮೊದಲಿಗರಾಗಿದ್ದರೆ, ವಿಂಡೀಸ್ ದೈತ್ಯ ಕ್ರಿಸ್ ಗೇಲ್ ೩೩೧ ಸಿಕ್ಸರ್‌ಗಳೊಂದಿಗೆ ಎರಡನೇ ಸಾಲಿನಲ್ಲಿದ್ದಾರೆ. ೨೭೦ ಸಿಕ್ಸರ್ ಬಾರಿಸಿರುವ ಸನತ್ ಜಯಸೂರ್ಯ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: INDvsENG ODI: ರೋಹಿತ್ ಶರ್ಮ ಪ್ರೇಕ್ಷಕರ ಗ್ಯಾಲರಿಗೆ ನುಗ್ಗಿ ಬಾಲಕಿಗೆ ಸಮಾಧಾನ ಹೇಳಿದ್ದು ಯಾಕೆ?