Site icon Vistara News

Rohit Sharma : ಕ್ರಿಸ್​ ಗೇಲ್​ ದಾಖಲೆ ಮುರಿಯುವೆ ಎಂದು ಸವಾಲೊಡ್ಡಿದ ರೋಹಿತ್ ಶರ್ಮಾ

Rohit Sharma

ಬೆಂಗಳೂರು: ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಕ್ರಿಸ್ ಗೇಲ್ ದಾಖಲೆಯನ್ನು ಮುರಿಯಲು ಬಯಸುತ್ತೇನೆ ಎಂದು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೇಳಿಕೊಂಡಿದ್ದಾರೆ. ಪ್ರಸ್ತುತ ಕ್ರಿಸ್ ಗೇಲ್ (553 ಸಿಕ್ಸರ್) ರೋಹಿತ್ (539) ಅವರಿಗಿಂತ 14 ಸಿಕ್ಸರ್​ಗಳ ಅಂತರದಿಂದ ಹೊಂದಿದ್ದಾರೆ. ಮುಂಬರುವ ವಾರಗಳಲ್ಲಿ, ಭಾರತ ತಂಡದ ನಾಯಕ ರೋಹಿತ್​​, ಗೇಲ್ ಅವರ ದಾಖಲೆಯನ್ನು ಮುರಿಯಬಹುದು ಎಂದು ಹೇಳಲಾಗಿದೆ.

ಪತ್ರಕರ್ತ ವಿಮಲ್ ಕುಮಾರ್ ಅವರೊಂದಿಗಿನ ಸಂದರ್ಶನದಲ್ಲಿ ರೋಹಿತ್, ಕ್ರಿಸ್ ಗೇಲ್ ಅವರ ಆರು ಸ್ಟ್ರೈಕ್ ದಾಖಲೆಯನ್ನು ಮುರಿಯಲು ನಾನು ಬಯಸುತ್ತೇನೆ. ಕೆಲವು ದಿನಗಳ ಹಿಂದೆ ನಾನು ಕ್ರಿಸ್ ಗೇಲ್ ಅವರ ದಾಖಲೆಯನ್ನು ಮುರಿಯುತ್ತೇನೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ. ಈಗ ಮುರಿಯುವ ವಿಶ್ವಾಸ ಹೊಂದಿದ್ದೇನೆ ಎಂದು ಹೇಳಿದರು.

ಹಿಟ್​ಮ್ಯಾನ್​ ಖ್ಯಾತಿಯ ರೋಹಿತ್ ಶರ್ಮಾ ಅವರು ಕ್ರಿಕೆಟ್​ ಕಲಿಕೆಯ ಹಂತದಲ್ಲಿದ್ದಾಗ ಹೆಚ್ಚು ಸಿಕ್ಸರ್​ಗಳನ್ನು ಬಾರಿಸದಂತೆ ಅವರ ಕೋಚ್​ ಹೇಳಿದ್ದರಂತೆ. ಆದಾಗ್ಯೂ ರೋಹಿತ್​ ಸಿಕ್ಸರ್ ವಿಚರಕ್ಕೆ ಬಂದಾಗ ಹೆಚ್ಚು ನಿಖರತೆ ಹೊಂದಿದ್ದಾರೆ. ಅಭಿಮಾನಿಗಳನ್ನು ಖುಷಿಪಡಿಸುವಂಥ ಸಿಕ್ಸರ್​ಗಳನ್ನು ಬಾರಿಸುತ್ತಾರೆ.

ನಾನು ಬಲಶಾಲಿ ವ್ಯಕ್ತಿ ಅಲ್ಲ ಆದರೆ ನಾನು ಚೆಂಡನ್ನು ಜೋರಾಗಿ ಹೊಡೆಯಲು ಇಷ್ಟಪಡುತ್ತೇನೆ. ನಾನು ಕ್ರಿಕೆಟ್ ಆಡಲು ಪ್ರಾರಂಭಿಸಿದಾಗ, ಟೈಮಿಂಗ್​​ ಮುಖ್ಯ ಎಂದು ನನಗೆ ಕೋಚ್​ ಹೇಳಿದ್ದರು. ಕೇವಲ ಸಿಕ್ಸರ್​ ಬಾರಿಸುವುದೇ ಗುರಿಯಾಗಬಾರದು ಎಂದು ಹೇಳಿದ್ದಾರೆ.

ರಾಹುಲ್ ದ್ರಾವಿಡ್ ಬಗ್ಗೆ ರೋಹಿತ್ ಶರ್ಮಾ ಏನಂದರು?

ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರೊಂದಿಗಿನ ಸ್ನೇಹದ ಬಗ್ಗೆಯೂ ರೋಹಿತ್ ಮಾತನಾಡಿದ್ದಾರೆ. ರಾಹುಲ್ ದ್ರಾವಿಡ್ ಅವರನ್ನು ನಾನು ತುಂಬಾ ಗೌರವಿಸುತ್ತೇನೆ. ಅವರು ಕ್ರಿಕೆಟರ್ ಅಥವಾ ಕೋಚ್​ ಎಂಬುದಕ್ಕಿಂತ ಒಳ್ಳೆಯ ವ್ಯಕ್ತಿ. ಒಬ್ಬ ವ್ಯಕ್ತಿಯನ್ನು ವೈದ್ಯ, ಕ್ರಿಕೆಟ್ ಆಟಗಾರ ಅಥವಾ ಫುಟ್ಬಾಲ್ ಆಟಗಾರ ಎಂದು ನೋಡುವ ಮೊದಲು ಪ್ರಾಮಾಣಿಕ ವ್ಯಕ್ತಿ ಎಂದು ನೋಡುವುದೇ ಮುಖ್ಯ ಎಂದು ಹೇಳಿದ್ದಾರೆ.

ಇದನ್ನೂ ಓದಿ : Rohit Sharma : ರೋಹಿತ್ ಶರ್ಮಾ ಮುಂಬಯಿನಲ್ಲಿ ಭರ್ಜರಿ ಓಟ

ದ್ರಾವಿಡ್​ ಆಡಲು ನನಗೆ ಸಾಕಷ್ಟು ಅವಕಾಶಗಳು ಸಿಗಲಿಲ್ಲ. ಆದರೆ ಕಳೆದ ಎರಡು ವರ್ಷಗಳಲ್ಲಿ ಅವರೊಂದಿಗೆ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿದೆ. ಯಾವುದೇ ಆಟಗಾರ ಅಥವಾ ಬೆಂಬಲ ಸಿಬ್ಬಂದಿಯ ಸದಸ್ಯರೊಂದಿಗೆ ಸಂವಹನ ಮಾಡಬೇಕು ಎಂದು ಅವರು ಬಯಸುತ್ತಾರೆ. ಒಂದು ಸರಳ ಮಾರ್ಗದರ್ಶಿ ಸೂತ್ರವೆಂದರೆ ಎಲ್ಲರೊಂದಿಗೂ ಮಾತನಾಡುವುದು ಎಂದು ಹೇಳಿದ್ದಾರೆ.

Exit mobile version