ಪಲ್ಲೆಕೆಲೆ: ಪಾಕಿಸ್ತಾನ(IND vs PAK) ವಿರುದ್ಧದ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾದ(Team India) ನಾಯಕ ರೋಹಿತ್ ಶರ್ಮ(Rohit Sharma), ತಮ್ಮ ತಂಡದ ಬೌಲಿಂಗ್ ವಿಭಾಗವನ್ನು ಹೊಗಳಿದ್ದಾರೆ. ಜತೆಗೆ ಪಾಕ್ ತಂಡಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ. ನಾವು ನಮ್ಮ ಅನುಭವದಡಿಯಲ್ಲಿ ಪಾಕಿಸ್ತಾನದ ಬೌಲರ್‌ಗಳಾದ ಶಾಹೀನ್ ಅಫ್ರಿದಿ(Shaheen Afridi) ಮತ್ತ ನಸೀಮ್ ಶಾ(Naseem Shah) ಅವರನ್ನು ದಿಟ್ಟವಾಗಿ ಎದುರಿಸುತ್ತೇವೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಂಡದಲ್ಲಿ 6 ಶ್ರೇಷ್ಠ ಬೌಲರ್ಗಳಿದ್ದಾರೆ
ಶುಕ್ರವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರೋಹಿತ್, ಏಷ್ಯಾಕಪ್(Asia Cup2023) ತಯಾರಿಯ ಬಗ್ಗೆ ಮತ್ತು ಪಾಕ್ ವಿರುದ್ಧದ ಪಂದ್ಯಕ್ಕೆ ಸಜ್ಜಾಗಿರುವ ಕುರಿತು ಮುಕ್ತವಾಗಿ ಮಾತನಾಡಿದರು. ಈ ವೇಳೆ ನಮ್ಮ ತಂಡದಲ್ಲಿರು ಆರು ಬೌಲರ್‌ಗಳು ನಿಸ್ಸಂದೇಹವಾಗಿ ಶ್ರೇಷ್ಠ ಬೌಲರ್‌ಗಳಾಗಿದ್ದಾರೆ. ಇದು ಈಗಾಗಲೇ ವಿಶ್ವದ ಎಲ್ಲ ಕ್ರಿಕೆಟ್ ತಂಡಕ್ಕೂ ತಿಳಿದಿದೆ. 11 ತಿಂಗಳ ಬಳಿಕ ಕ್ರಿಕೆಟ್ಗೆ ಕಮ್ ಬ್ಯಾಕ್ ಮಾಡಿರುವ ಜಸ್ಪ್ರೀತ್ ಬುಮ್ರಾ ಕಳೆದ ಐರ್ಲೆಂಡ್ ವಿರುದ್ಧದ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಕಳೆದ ವರ್ಷ ಅವರ ಅನುಪಸ್ಥಿತಿ ತಂಡಕ್ಕೆ ಕಾಡಿತ್ತು. ಆದರೆ ಅವರ ಆಗಮನದಿಂದ ತಂಡಕ್ಕೆ ಹೆಚ್ಚಿನ ಬಲ ಬಂದಿದೆ. ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಉತ್ತಮ ಲಯದಲ್ಲಿದ್ದಾರೆ. ಈ ಮೂವರ ಬೌಲಿಂಗ್ ಕಾಂಬಿನೇಶನ್ ಮುಂದೆ ಎಂತಹ ಬ್ಯಾಟರ್ಗಳನ್ನು ಕಟ್ಟಿಹಾಕುವ ವಿಶ್ವಾಸವಿದೆ ಎಂದು ರೋಹಿತ್ ಹೇಳಿದರು.
ಪಾಕ್ ಕೂಡ ಬಲಿಷ್ಠವಾಗಿದೆ
ಎದುರಾಳಿ ಪಾಕಿಸ್ತಾನ ಕೂಡ ಬಲಿಷ್ಠವಾಗಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗಗಳೆರಡರಲ್ಲೂ ಸಮರ್ಥವಾಗಿದೆ. ಅಲ್ಲದೆ ಇತ್ತೀಚೆ ಆಡಿದ ಸರಣಿಯಲ್ಲಿ ಪಾಕ್ ತಂಡ ಉತ್ತಮ ಪ್ರದರ್ಶನವನ್ನೇ ನೀಡುತ್ತಾ ಬಂದಿದೆ. ಆದರೆ ಶನಿವಾರದ ಪಂದ್ಯಕ್ಕೆ ನಾವು ವಿಶೇಷ ತಂತ್ರವನ್ನೇ ಮಾಡಿದ್ದೇವೆ. ಜತೆಗೆ ಶಾಹೀನ್ ಅಫ್ರಿದಿ ಮತ್ತು ನಸೀಮ್ ಶಾ ಅವರ ದಾಳಿಯನ್ನು ಎದುರಿಸಲು ಎಲ್ಲ ರೀತಿಯ ಪೂರ್ವ ತಯಾರಿಯನ್ನು ನಮ್ಮ ಬ್ಯಾಟರ್ಗಳು ಮಾಡಿದ್ದಾರೆ ಎಂದು ಹೇಳಿದರು.
ಪ್ರಯೋಗ ಸಲ್ಲದು
ಇನ್ನೊಂದು ತಿಂಗಳಲ್ಲಿ ವಿಶ್ವಕಪ್ ಇರುವುದರಿಂದ ಏಷ್ಯಾ ಕಪ್ ಒಂದು ಉತ್ತಮ ವೇದಿಕೆಯಾಗಿದೆ. ಇಲ್ಲಿ ತೋರುವ ಪ್ರದರ್ಶನದಿಂದ ವಿಶ್ವಕಪ್ ಭವಿಷ್ಯವನ್ನು ನಿರ್ಧರಿಸಬಹುದು ಮತ್ತು ತಂಡದಲ್ಲಿನ ನ್ಯೂನತೆಗಳನ್ನು ತಿದ್ದಿಕೊಳ್ಳಲು ಇದೊಂದು ಉತ್ತಮ ಅವಕಾಶವಾಗಿದೆ. ಆದರೆ ಇಲ್ಲಿ ಪ್ರಯೋಗ ಮಾಡುವ ಅವಕಾಶವಿಲ್ಲ. ನಮ್ಮ ಆಟವನ್ನು ಶ್ರದ್ಧೆಯಿಂದ ಆಡಬೇಕು ಎಂದು ತಿಳಿಸಿದರು.
ರೋಹಿತ್ಗೆ ಅಗ್ನಿ ಪರೀಕ್ಷೆ
ಏಷ್ಯಾಕಪ್ನಲ್ಲಿ 7 ಬಾರಿಯ ಚಾಂಪಿಯನ್ ಆಗಿರುವ ಭಾರತ ತಂಡಕ್ಕೆ 2023ರ ನಿರ್ಣಾಯಕ ವಿಶ್ವಕಪ್ಗೆ ಮುಂಚಿತವಾಗಿ ನಡೆಯುವ ಅಗ್ನಿಪರೀಕ್ಷೆ ಇದಾಗಿದೆ. ಇಲ್ಲಿ ತಂಡ ಯಾವ ರೀತಿ ಪ್ರದರ್ಶನ ತೋರಲಿದೆ ಎನ್ನುವುದ ಮೇಲೆ ವಿಶ್ವಕಪ್ ಭವಿಷ್ಯ ನಿರ್ಧರವಾಗಲಿದೆ. ರೋಹಿತ್ ಶರ್ಮಾ(Rohit Sharma) ಈಗಾಗಲೇ ಭಾರತ ತಂಡಕ್ಕೆ ಏಷ್ಯಾಕಪ್ ಪ್ರಶಸ್ತಿ ತಂದುಕೊಟ್ಟಿದ್ದಾರೆ. ಈ ಬಾರಿ ಗೆದ್ದರೆ ಎರಡನೇ ಪ್ರಶಸ್ತಿಯಾಗಲಿದೆ. 2018ರಲ್ಲಿ ಯುಎಇಯಲ್ಲಿ ಬಾಂಗ್ಲಾದೇಶವನ್ನು 3 ವಿಕೆಟ್ಗಳಿಂದ ಸೋಲಿಸಿ ಪ್ರಶಸ್ತಿ ಎತ್ತಿ ಹಿಡಿದಿತ್ತು. ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್ ಪಟ್ಟ ಅಲಂಕರಿಸಿದ ಹಿರಿಮೆಯೂ ಭಾರತ ತಂಡದ್ದಾಗಿದೆ. ಈ ಬಾರಿಯೂ ಅವರ ನಾಯಕತ್ವದಲ್ಲಿ ಗೆದ್ದರೆ ವಿಶ್ವ ಕಪ್ನಲ್ಲಿ ಭಾರತ ತಂಡದ ಮೇಲೆ ನಿರಿಕ್ಷೆಯೊಂದನ್ನು ಮಾಡಬಹುದಾಗಿದೆ.