ಮುಂಬಯಿ: ಟೀಮ್ ಇಂಡಿಯಾದ ನಾಯಕ, ಹಿಟ್ಮ್ಯಾನ್ ಖ್ಯಾತಿಯ ರೋಹಿತ್ ಶರ್ಮ(Rohit Sharma) ಅವರು ನ್ಯೂಜಿಲ್ಯಾಂಡ್ ವಿರುದ್ಧ ಸಾಗುತ್ತಿರುವ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ. ವಿಶ್ವಕಪ್ನಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ಆಟಗಾರನಾಗಿ ಹೊರಹೊಮ್ಮಿದ್ದಾರೆ.
ಮುಂಬಯಿಯ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತಕ್ಕೆ ರೋಹಿತ್ ಶರ್ಮ ಬಿರುಸಿನ ಬ್ಯಾಟಿಂಗ್ ಮೂಲಕ ಉತ್ತಮ ಆರಂಭ ಒದಗಿಸಿದ್ದಾರೆ. ಟ್ರೆಂಟ್ ಬೌಲ್ಟ್ ಅವರ ಓವರ್ನಲ್ಲಿ ಸಿಕ್ಸರ್ ಬಾರಿಸುವ ಮೂಲಕ ವಿಶ್ವಕಪ್ ಕ್ರಿಕೆಟ್ನಲ್ಲಿ 50 ಸಿಕ್ಸರ್ ದಾಖಲಿಸಿ ಅತ್ಯಧಿಕ ಸಿಕ್ಸರ್ ಬಾರಿಸಿದ ಆಟಗಾರ ಎಂಬ ದಾಖಲೆ ಬರೆದರು. ಈ ಹಿಂದೆ 49 ಸಿಕ್ಸರ್ ಬಾರಿಸಿದ್ದ ವೆಸ್ಟ್ ಇಂಡೀಸ್ ಕ್ರಿಸ್ ಗೇಲ್ ದಾಖಲೆ ಪತನಗೊಂಡಿತು.
ವಿಶ್ವಕಪ್ನಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿ
ರೋಹಿತ್ ಶರ್ಮ-50 ಸಿಕ್ಸರ್
ಕ್ರಿಸ್ ಗೇಲ್-49 ಸಿಕ್ಸರ್
ಗ್ಲೆನ್ ಮ್ಯಾಕ್ಸ್ವೆಲ್-43 ಸಿಕ್ಸರ್
ಎಬಿಡಿ ವಿಲಿಯರ್ಸ್-37 ಸಿಕ್ಸರ್
ಡೇವಿಡ್ ವಾರ್ನರ್-37 ಸಿಕ್ಸರ್
ಒಟ್ಟು 29 ಎಸೆತ ಎದುರಿಸಿದ ರೋಹಿತ್ ಶರ್ಮ ಅವರು ತಲಾ 4 ಸಿಕ್ಸರ್ ಮತ್ತು ಬೌಂಡರಿ ಬಾರಿಸಿ 47 ರನ್ಗೆ ವಿಕೆಟ್ ಕೈಚೆಲ್ಲಿದರು. ಸಿಕ್ಸರ್ ಬಾರಿಸುವ ಪ್ರಯತ್ನದಲ್ಲಿ ಲಾಂಗ್ ಆನ್ನಲ್ಲಿ ನಾಯಕ ಕೇನ್ ವಿಲಿಯಮ್ಸನ್ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ಕೇವಲ ಮೂರು ರನ್ ಅಂತರದಿಂದ ಅರ್ಧಶತಕ ವಂಚಿತರಾದರು.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಅವರು ಕ್ಯಾಲೆಂಡರ್ ವರ್ಷವೊಂದರಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ದಾಖಲೆ ಬರೆದಿದ್ದರು. ಈ ಮೂಲಕ ವಿಲಿಯರ್ಸ್ ದಾಖಲೆ ಮುರಿದ್ದರು. ಆಫ್ರಿಕಾದ ಮಾಜಿ ನಾಯಕ ಹಾಗೂ ಆಟಗಾರ ಎಬಿ ಡಿ ವಿಲಿಯರ್ಸ್ ಹೆಸರಿನಲ್ಲಿತ್ತು. ವಿಲಿಯರ್ಸ್ ಅವರು 2015ರಲ್ಲಿ 58 ಸಿಕ್ಸರ್ ಬಾರಿಸಿದ್ದರು. ರೋಹಿತ್ ಅವರು ಸದ್ಯ 2023 ಸಾಲಿನಲ್ಲಿ 59 ಸಿಕ್ಸರ್ ಬಾರಿಸಿ ಈ ದಾಖಲೆಯನ್ನು ಮುರಿದಿದ್ದರು.
ಇದನ್ನೂ ಓದಿ IND vs NZ Live: ಭಾರತದ ಮೊದಲ ವಿಕೆಟ್ ಪತನ, ಅಬ್ಬರದ ಬ್ಯಾಟಿಂಗ್ ಬಳಿಕ ರೋಹಿತ್ ಔಟ್
ಕ್ಯಾಲೆಂಡರ್ ವರ್ಷದಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ಆಟಗಾರರು
ರೋಹಿತ್ ಶರ್ಮ-59* ಸಿಕ್ಸರ್
ಎಬಿ ಡಿ ವಿಲಿಯರ್ಸ್-58 ಸಿಕ್ಸರ್
ಕ್ರಿಸ್ ಗೇಲ್-56 ಸಿಕ್ಸರ್
ಶಾಹೀದ್ ಅಫ್ರಿದಿ- 48 ಸಿಕ್ಸರ್
18 ಸಾವಿರ ರನ್ ಪೂರ್ತಿ
ರೋಹಿತ್ ಶರ್ಮಾ ಅವರು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 18,000 ಅಂತಾರಾಷ್ಟ್ರೀಯ ರನ್ ಪೂರೈಸಿದ ದಾಖಲೆ ಬರೆದಿದ್ದರು. ರೋಹಿತ್ ಅವರು 477ನೇ ಇನ್ನಿಂಗ್ಸ್‌ನಲ್ಲಿ ಈ ಸಾಧನೆಯನ್ನು ನಿರ್ಮಿಸಿದ್ದಾರೆ. ಈ ಸಾಧನೆ ಮಾಡಿದ ಐದನೇ ಭಾರತೀಯ ಆಟಗಾರ ಎನಿಸಿದ್ದಾರೆ. ರೋಹಿತ್‌ಗಿಂತ ಮೊದಲು ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ಮತ್ತು ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದರು.