ಚೆನ್ನೈ: ಐಸಿಸಿ ವಿಶ್ವಕಪ್ 2023ರಲ್ಲಿ ಆಸ್ಟ್ರೇಲಿಯಾ ವಿರುದ್ಧ ರೋಹಿತ್ ಶರ್ಮಾ ಮೈದಾನಕ್ಕಿಳಿದಿದ್ದಾರೆ. 36 ವರ್ಷ 161 ದಿನಗಳ ವರ್ಷದ ರೋಹಿತ್ ಶರ್ಮಾ ಐಸಿಸಿ ವಿಶ್ವಕಪ್ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ ಭಾರತದ ಅತ್ಯಂತ ಹಿರಿಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
1999ರ ಆವೃತ್ತಿಯಲ್ಲಿ ಭಾರತ ತಂಡದ ನಾಯಕತ್ವ ವಹಿಸಿದ್ದ ಮೊಹಮ್ಮದ್ ಅಜರುದ್ದೀನ್ ವಿಶ್ವಕಪ್ ಟೂರ್ನಿಯಲ್ಲಿ ನಾಯಕತ್ವ ವಹಿಸಿದ ಭಾರತದ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದರು. ವಿಶ್ವಕಪ್ನಲ್ಲಿ ನಾಯಕನಾಗಿ ತಮ್ಮ ಕೊನೆಯ ಪಂದ್ಯದ ಸಮಯದಲ್ಲಿ ಅಜರುದ್ದೀನ್ ಅವರಿಗೆ 36 ವರ್ಷ 124 ದಿನ . ಈ ಮೂಲಕ ಅವರು 24 ವರ್ಷಗಳ ಕಾಲ ಭಾರತದ ಅತ್ಯಂತ ಹಿರಿಯ ನಾಯಕ ಎಂಬ ದಾಖಲೆಯನ್ನು ಹೊಂದಿದ್ದರು.
2007ರ ವಿಶ್ವಕಪ್ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ರಾಹುಲ್ ದ್ರಾವಿಡ್ ಅವರಿಗೆ ಆ 34 ವರ್ಷ 71 ದಿನಗಳಾಗಿದ್ದವು. ಮೊದಲ ಎರಡು ವಿಶ್ವಕಪ್ಗಳಲ್ಲಿ (1975 ಮತ್ತು 1979) ಭಾರತವನ್ನು ಮುನ್ನಡೆಸಿದ ಶ್ರೀನಿವಾಸ್ ವೆಂಕಟರಾಘವನ್, 2011 ರಲ್ಲಿ ಭಾರತವನ್ನು ಪ್ರಶಸ್ತಿಗೆ ಮುನ್ನಡೆಸಿದ ಎಂಎಸ್ ಧೋನಿ ನಂತರದ ಸ್ಥಾನದಲ್ಲಿದ್ದಾರೆ.
ರಾಹುಲ್- ಕೊಹ್ಲಿಯ ದಾಖಲೆ
ಆಸ್ಟ್ರೇಲಿಯಾ (Ind vs Aus) ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಏಕದಿನ ವಿಶ್ವಕಪ್ನಲ್ಲಿ ಭಾರತದ ಪರ 4 ನೇ ವಿಕೆಟ್ ಗರಿಷ್ಠಢ ಜೊತೆಯಾಟವನ್ನು ದಾಖಲಿಸಿದರು. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ಗೆಲುವಿನ ಬಳಿಕ ಭಾರತ ತಂಡಕ್ಕೆ ಈ ಜಯ ಸ್ಮರಣೀಯ ಎನಿಸಿತು.
ಕೊಹ್ಲಿ ಹಾಗೂ ರಾಹುಲ್ ನಾಲ್ಕನೇ ವಿಕೆಟ್ 165 ರನ್ಗಳ ಜತೆಯಾಟ ನೀಡಿದ್ದರು. ಈ ಮೂಲಕ ಈ ಸ್ಟಾರ್ ಬ್ಯಾಟರ್ಗಳು 1996ರ ವಿಶ್ವಕಪ್ನಲ್ಲಿ ನವಜೋತ್ ಸಿಧು ಹಾಗೂ ವಿನೋದ್ ಕಾಂಬ್ಳಿ ಜೋಡಿ ಪೇರಿಸಿದ್ದ 142 ರನ್ಗಳ ದಾಖಲೆಯನ್ನು ಮೀರಿದರು.
ಇದನ್ನೂ ಓದಿ : ICC World Cup 2023 : ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ಡೇವಿಡ್ ವಾರ್ನರ್, ಏನಿದು ರೆಕಾರ್ಡ್?
ಭಾನುವಾರ ನಡೆದ ಪಂದ್ಯದಲ್ಲಿ ಭಾರತ 3 ವಿಕೆಟ್ ನಷ್ಟಕ್ಕೆ 2 ರನ್ ಸಂಕಷ್ಟಕ್ಕೆ ಬಿತ್ತು. 200 ರನ್ಗಳ ಗುರಿಯನ್ನು ಬೆನ್ನಟ್ಟು ಹೊರಟ ಭಾರತ ಹೀನಾಯ ಪರಿಸ್ಥಿತಿ ಎದುರಿಸುವುದನ್ನು ನೋಡಿದ ಭಾರತ ತಂಡದ ಅಭಿಮಾನಿಗಳು ಬೇಸರಕ್ಕೆ ಒಳಗಾದರು. ಬಳಿಕ ಕೊಹ್ಲಿ ಮತ್ತು ರಾಹುಲ್ ಕ್ರಮವಾಗಿ 72 ಮತ್ತು 75 ಎಸೆತಗಳಲ್ಲಿ ಅರ್ಧಶತಕಗಳನ್ನು ಗಳಿಸಿ ಗೆಲುವಿನ ಭರವಸೆ ಮೂಡಿಸಿದರು. ರಾಹುಲ್ ಕೊನೇ ತನಕ ಹೋರಾಟ ನಡೆಸಿ 91 ರನ್ ಗಳಿಸಿ ಗೆಲುವು ತಂದುಕೊಟ್ಟರೆ, ವಿರಾಟ್ 85 ರನ್ ಬಾರಿಸಿ ತಮ್ಮ ಜವಾಬ್ದಾರಿಯನ್ನು ಮೆರೆದರು.
ಭಾರತ ತಂಡದ ಪರ ಏಕ ದಿನ ಮಾದರಿಯಲ್ಲಿ 4 ವಿಕೆಟ್ ದೊಡ್ಡ ಜತೆಯಾಟ ದಾಖಲಾಗಿದ್ದು 1998ರಲ್ಲಿ. ಜಿಂಬಾಬ್ವೆ ವಿರುದ್ಧ ಅಜಯ್ ಜಡೇಜಾ ಹಾಗೂ ಮೊಹಮ್ಮದ್ ಅಜರುದ್ದೀನ್ 275 ರನ್ಗಳ ಜೊತೆಯಾಟವಾಡಿದ್ದರು.