ಮುಂಬಯಿ: ಐಸಿಸಿ ಏಕದಿನ ವಿಶ್ವಕಪ್ಗೆ(ICC World Cup) ಎಲ್ಲ ತಂಡಗಳು ಸಿದ್ಧತೆ ನಡೆಸುತ್ತಿದ್ದು ಈಗಾಗಲೇ ಕೆಲವು ದೇಶಗಳು ತಮ್ಮ ತಂಡವನ್ನು ಪ್ರಕಟಿಸಿದೆ. ಆದರೆ, ಟೂರ್ನಿಯ ಆತಿಥ್ಯ ವಹಿಸಿಕೊಂಡಿರುವ ಭಾರತ ಗಾಯದ ಸಮಸ್ಯೆಯಿಂದ ಸಂಕಟಕ್ಕೆ ಸಿಲುಕಿದೆ. ಇದೇ ವಿಚಾರವಾಗಿ ನಾಯಕ ರೋಹಿತ್ ಶರ್ಮ(Rohit Sharma) ಕೂಡ ಮಹತ್ವದ ಹೇಳಿಕೆ ನೀಡಿದ್ದಾರೆ.
ನಾಲ್ಕನೇ ಕ್ರಮಾಂಕದ ಸಮಸ್ಯೆ ಬಗೆಹರಿದಿಲ್ಲ
2007ರ ಟಿ20 ಮತ್ತು 2011ರ ಏಕದಿನ ವಿಶ್ವಕಪ್ ಗೆಲ್ಲುವು ವೇಳೆ ಭಾರತ ತಂಡದ ನಾಲ್ಕನೇ ಕ್ರಮಾಂಕ ಅತ್ಯಂತ ಬಲಿಷ್ಠವಾಗಿತ್ತು. ಈ ಸ್ಥಾನದಲ್ಲಿ ಯುವರಾಜ್ ಸಿಂಗ್(Yuvraj Singh) ಅವರು ಆಡುತ್ತಿದ್ದರೂ ಆದರೆ ಅವರ ನಿವೃತ್ತಿ ಬಳಿಕ ಈ ಸ್ಥಾನಕ್ಕೆ ಇದುವರೆಗೂ ಸೂಕ್ತ ಆಟಗಾರ ಲಭಿಸಲೇ ಇಲ್ಲ. ಅವರ ಸ್ಥಾನದಲ್ಲಿ ಆಡಲಿಳಿದ ಶ್ರೇಯಸ್ ಅಯ್ಯರ್ ಆರಂಭದಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಭರವಸೆ ಮೂಡಿಸಿದ್ದರು. ಆದರೆ ಗಾಯದ ಸಮಸ್ಯೆಯಿಂದಾಗಿ ದೀರ್ಘಕಾಲದಿಂದ ಹೊರಗುಳಿದಿರುವು ಹಿನ್ನಡೆ ತಂದಿದೆ ಎಂದು ರೋಹಿತ್ ಹೇಳಿದರು.
ಸೂಕ್ತ ಆಟಗಾರನ ಹುಡುಕಾಟ
2019 ಏಕದಿನ ವಿಶ್ವಕಪ್(2019 World Cup) ಸೋಲಿಗೂ ನಾಲ್ಕನೇ ಕ್ರಮಾಂಕದಲ್ಲಿ ಸೂಕ್ತ ಆಟಗಾರ ಕೊರತೆ ಕಾಡಿದ್ದೇ ಪ್ರಮುಖ ಕಾರಣ. ಈ ವಿಶ್ವಕಪ್ ಮುಗಿದು ಮತ್ತೊಂದು ವಿಶ್ವಕಪ್ ಬಂದರೂ ನಾವು ಇನ್ನೂ ಕೂಡ ಈ ಸ್ಥಾನಕ್ಕೆ ಆಟಗಾರನ ಹುಡುಕಾಟ ನಡೆಸುತ್ತಲೇ ಇದ್ದೇವೆ. ಸದ್ಯ ಈ ಸ್ಥಾನಕ್ಕೆ ಓರ್ವ ಸೂಕ್ತ ಆಟಗಾರ ಆಯ್ಕೆ ನಿಟ್ಟಿನಲ್ಲಿ ವಿಂಡೀಸ್ ವಿರುದ್ಧದ ಸರಣಿಯಲ್ಲಿ ಪ್ರಯೋಗ ನಡೆಸಿದ್ದೇವೆ. ಟಿ20ಯಲ್ಲಿ ಈ ಸ್ಥಾನದಲ್ಲಿ ತಿಲಕ್ ವರ್ಮ ಅವರು ಉತ್ತಮ ಪ್ರದರ್ಶನ ತೋರುತ್ತಿರುವುದು ಸಂತಸ ತಂದಿದೆ. ಅಯ್ಯರ್ ಅವರ ಲಭ್ಯತೆ ನೋಡಿಕೊಂಡು ಯಾರನ್ನು ಆಡಿಸಬೇಕು ಎಂದು ನಿರ್ಧರಿಸಲಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ Rohit Sharma: 2024ರ ಟಿ20 ವಿಶ್ವಕಪ್ ಬಗ್ಗೆ ಮಹತ್ವದ ಮಾಹಿತಿ ನೀಡಿದ ರೋಹಿತ್
ತಿಲಕ್ ವರ್ಮಾ ಆಯ್ಕೆ ಸಾಧ್ಯತೆ
ವಿಂಡೀಸ್ ವಿರುದ್ಧ ಆಡಿದ ಮೂರು ಟಿ20 ಪಂದ್ಯಗಳಲ್ಲಿಯೂ ಪಂದ್ಯಕ್ಕೆ ನೆರವಾಗಿ ಉತ್ತಮ ಪ್ರದರ್ಶನ ತೋರಿದ ತಿಲಕ್ ವರ್ಮಾ ಮೇಲೆ ಆಯ್ಕೆ ಸಮಿತಿಯೊಂದು ಕಣ್ಣಿಟ್ಟಿದೆ. ಕೋಚ್ ರಾಹುಲ್ ದ್ರಾವಿಡ್ ಕೂಡ ತಿಲಕ್ ವರ್ಮ(tilak varma) ಅವರನ್ನು ನಾಲ್ಕನೇ ಕ್ರಮಾಖದಲ್ಲಿ ಆಡಿಸುವ ಮೂಲಕ ಪ್ರಯೋಗವೊಂದನ್ನು ನಡೆಸುತ್ತಿದ್ದಾರೆ. ಉಳಿದಿರುವ ಎರಡು ಟಿ20 ಪಂದ್ಯದಲ್ಲಿಯೂ ನಿರೀಕ್ಷಿತ ಪ್ರದರ್ಶನ ತೋರಿದರೆ ಅವರಿಗೆ ಏಷ್ಯಾಕಪ್ನಲ್ಲಿ ಅಯ್ಯರ್ ಬದಲು ಸ್ಥಾನ ನೀಡುವುದು ಬಹುತೇಕ ಖಚಿತವಾಗಿದೆ. ಇದೇ ಕಾರಣಕ್ಕೆ ಭಾರತ ಏಷ್ಯಾಕಪ್ ತಂಡದ ಪ್ರಕಟವನ್ನು ವಿಳಂಬ ಮಾಡುತ್ತಿರುವಂತೆ ಮೇಲ್ನೋಟಕ್ಕೆ ಕಂಡು ಬಂದಿದೆ.
ಗಾಯಗೊಂಡಿರುವ ಕೆ.ಎಲ್ ರಾಹುಲ್ ಕೂಡ ಸಂಪೂರ್ಣ ಫಿಟ್ ಆಗಿಲ್ಲ ಎಂದು ಕ್ರಿಕ್ಇನ್ಫೊ ಗುರುವಾರ ವರದಿ ಮಾಡಿತ್ತು. ಅಭ್ಯಾಸ ಆರಂಭಿಸಿದರೂ ರಾಹುಲ್ ಆಡಲು ಸಂಪೂರ್ಣ ಫಿಟ್ ಆಗಿಲ್ಲ ಹೀಗಾಗಿ ಏಷ್ಯಾಕಪ್ ಆಡುವುದು ಅನುಮಾನ ಎಂದು ತನ್ನ ವರದಿಯಲ್ಲಿ ತಿಳಿಸಿತ್ತು. ಒಟ್ಟಾರೆ ಭಾರತಕ್ಕೆ ಗಾಯದ್ದೇ ಚಿಂತೆಯಾಗಿದೆ.