Site icon Vistara News

WTC Final 2023 : ಲೆಜೆಂಡ್​ ಸಚಿನ್​ ತೆಂಡೂಲ್ಕರ್​ ದಾಖಲೆ ಮುರಿದ ರೋಹಿತ್​ ಶರ್ಮಾ

Rohit Sharma

#image_title

ಲಂಡನ್​: ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ನ ಫೈನಲ್​ ಪಂದ್ಯದಲ್ಲಿ (WTC Final 2023) ಆಸ್ಟ್ರೇಲಿಯಾ ತಂಡ ಮುನ್ನಡೆ ಪಡೆದುಕೊಂಡಿದೆ. ಎರಡನೇ ಇನಿಂಗ್ಸ್​​ನಲ್ಲಿ 270 ರನ್ ಬಾರಿಸಿ ಡಿಕ್ಲೇರ್​ ಮಾಡಿಕೊಂಡಿರುವ ಪ್ಯಾಟ್​ ಕಮಿನ್ಸ್​ ಬಳಗ 443 ರನ್​ಗಳ ಮುನ್ನಡೆ ಪಡೆದುಕೊಂಡಿದೆ. 444 ರನ್​ಗಳ ಗೆಲುವಿನ ಗುರಿಯೊಂದಿಗೆ ಬ್ಯಾಟ್​ ಮಾಡಲು ಆರಂಭಿಸಿರುವ ಭಾರತ ತಂಡ 41 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್​ ಕಳೆದುಕೊಂಡು ನಿರಾಸೆಗೆ ಒಳಗಾಗಿದೆ. ಏತನ್ಮಧ್ಯೆ, ಭಾರತ ತಂಡದ ನಾಯಕ ರೋಹಿತ್​ ಶರ್ಮಾ ಟೆಸ್ಟ್​ ಕ್ರಿಕೆಟ್​ನಲ್ಲಿ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಅವರು ಭಾರತದ ಲೆಜೆಂಡ್ ಕ್ರಿಕೆಟರ್​ ಸಚಿನ್​ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿ ಸಾಧನೆ ಮಾಡಿದ್ದಾರೆ.

ರೋಹಿತ್​ ಶರ್ಮಾ ಟೆಸ್ಟ್ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಭಾರತದ ಮೂರನೇ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 69 ಬಾರಿಸಿದ್ದ ಸಚಿನ್​ ತೆಂಡೂಲ್ಕರ್ ಅವರನ್ನು ರೋಹಿತ್​ ಹಿಂದಿಕ್ಕಿದ್ದಾರೆ. ಎಂಎಸ್ ಧೋನಿ (78) ಮತ್ತು ವೀರೇಂದ್ರ ಸೆಹ್ವಾಗ್ (90) ರೋಹಿತ್ ಅವರಿಗಿಂತ ಮುಂದಿನೆರಡು ಸ್ಥಾನಗಳನ್ನು ಪಡೆದುಕೊಂಡಿದ್ದರೆ.

ಡಬ್ಲ್ಯುಟಿಸಿ 2023 ರ ಫೈನಲ್​​ನಲ ನಾಲ್ಕನೇ ಇನಿಂಗ್ಸ್​​ನಲ್ಲಿ ಮಿಚೆಲ್ ಸ್ಟಾರ್ಕ್ ವಿರುದ್ಧ ರೋಹಿತ್ ತಮ್ಮ 70ನೇ ಟೆಸ್ಟ್ ಸಿಕ್ಸರ್​ ಬಾರಿಸಿದರು. ಟೆಸ್ಟ್ ಕ್ರಿಕೆಟ್​ನಲ್ಲಿ ರೋಹಿತ್ ಶರ್ಮಾ ಅವರ ದಾಖಲೆಯ ಬಗ್ಗೆ ಹೇಳುವುದಾದರೆ ಬಲಗೈ ಬ್ಯಾಟರ್​ 50 ಪಂದ್ಯಗಳಲ್ಲಿ 3416 ರನ್ ಗಳಿಸಿದ್ದಾರೆ. 45.55ರ ಉತ್ತಮ ಸರಾಸರಿಯನ್ನು ಹೊಂದಿದ್ದಾರೆ. 70 ಸಿಕ್ಸರ್​​ಗಳನ್ನು ಬಾರಿಸಿರುವುದರ ಹೊರತಾಗಿ, ಅವರು ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಇದುವರೆಗೆ 366 ಬೌಂಡರಿಗಳನ್ನು ಬಾರಿಸಿದ್ದಾರೆ.

ಇದನ್ನೂ ಓದಿ : IPL 2023 : ಡಕ್​ಔಟ್​ ಆಗುವ ಮೂಲಕ ಅನಗತ್ಯ ದಾಖಲೆ ಸೃಷ್ಟಿಸಿಕೊಂಡ ರೋಹಿತ್ ಶರ್ಮಾ

444 ರನ್​ಗಳ ಗುರಿ ಬೆನ್ನತ್ತಿದ ಭಾರತ ತಂಡ ಈಗಾಗಲೇ ತನ್ನ ಆರಂಭಿಕ ಆಟಗಾರ ಶುಬ್ಮನ್ ಗಿಲ್ ಅವರನ್ನು ಕಳೆದುಕೊಂಡಿದೆ. ಸ್ಕಾಟ್ ಬೋಲ್ಯಾಂಡ್ ಅವರ ವಿಕೆಟ್ ಪಡೆದಿದ್ದಾರೆ. ಭಾರತ ತಂಡದ ಮುಂದೆ ಇನ್ನೂ ದೊಡ್ಡ ಸವಾಲಿದೆ. ಈ ಪಂದ್ಯವನ್ನು ಉಳಿಸಲು ಅಥವಾ ಗೆಲ್ಲಲು ಭಾರತೀಯ ಬ್ಯಾಟರ್​ಗಳು ತಮ್ಮ ಶಕ್ತಿ ಮತ್ತು ಯುಕ್ತಿ ಎರಡನ್ನೂ ಬಳಸಿಕೊಳ್ಳಬೇಕಾಗಿದೆ.

Exit mobile version