ಬೆಂಗಳೂರು : ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ (ICC World Cup 2023) ಬಾಂಗ್ಲಾದೇಶದ ವಿರುದ್ಧ ಅಧಿಕಾರಯುತ ಗೆಲುವಿನ ನಂತರ ಮತ್ತು ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ ನಾಲ್ಕು ಪಂದ್ಯಗಳ ಗೆಲುವಿನ ಸರಣಿಯನ್ನು ಮುಂದುವರಿಸಿದ ರೋಹಿತ್ ಶರ್ಮಾ ನೇತೃತ್ವದ ಭಾರತೀಯ ಕ್ರಿಕೆಟ್ ತಂಡವು ಪುಣೆಯಿಂದ ಧರ್ಮಶಾಲಾಗೆ ಹೊರಟಿದೆ. ಅಕ್ಟೋಬರ್ 22 ರಂದು ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಮುಂಬರುವ ಪಂದ್ಯದಲ್ಲಿ ಭಾಗವಹಿಸಲು ಧರ್ಮಶಾಲಾಕ್ಕೆ ಹಾರಿದೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯಕ್ಕೆ 24 ಗಂಟೆಗಳ ಮೊದಲು ತಂಡವು ಶನಿವಾರ ಮಧ್ಯಾಹ್ನ ನೆಟ್ಸ್ನಲ್ಲಿ ಅಭ್ಯಾಸ ನಡೆಸಲಿದೆ.
ಪುಣೆಯಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ತಂಡ 8 ವಿಕೆಟ್ಗೆ 256 ರನ್ ಬಾರಿಸಿತ್ತು. ಪ್ರತಿಯಾಗಿ ಬ್ಯಾಟ್ ಮಾಡಿದ್ದ ಭಾರತ ತಂಡ 41.3 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 262 ರನ್ ಬಾರಿಸಿ ಸುಲಭ ಜಯ ದಾಖಲಿಸಿತ್ತು. ವಿರಾಟ್ ಕೊಹ್ಲಿ 97 ಎಸೆತಗಳಲ್ಲಿ 103 ರನ್ ಬಾರಿಸಿ ಗೆಲುವಿನ ರೂವಾರಿ ಎನಿಸಿಕೊಂಡಿದ್ದರು. ಅದಕ್ಕಿಂತ ಮೊದಲು ಬೌಲರ್ಗಳು ಬಾಂಗ್ಲಾ ತಂಡದ ಬ್ಯಾಟರ್ಗಳನ್ನು ಕಟ್ಟಿ ಹಾಕಿದ್ದರು.
ಈ ಸುದ್ದಿಗಳನ್ನೂ ಓದಿ : ಪೇಶಾವರದಲ್ಲಿ ಪಾಕ್ ಅಭಿಮಾನಿಗಳ ಪುಂಡಾಟವನ್ನು ನೆನಪಿಸಿಕೊಂಡ ಇರ್ಫಾನ್ ಪಠಾಣ್
NED vs SL: ಡಚ್ಚರ ಸವಾಲು ಮೆಟ್ಟಿನಿಂತು ಗೆಲುವಿನ ಖಾತೆ ತೆರೆದೀತೇ ಶ್ರೀಲಂಕಾ?
Shakib Al Hasan | ವೈಡ್ ನೀಡದಕ್ಕೆ ಅಂಪೈರ್ ಜತೆ ವಾಗ್ವಾದ ನಡೆಸಿದ ಶಕಿಬ್ ಅಲ್ ಹಸನ್; ವಿಡಿಯೊ ವೈರಲ್
ಭಾನುವಾರ ಭಾರತ ಹಾಗೂ ನ್ಯೂಜಿಲ್ಯಾಂಡ್ ತಂಡ ಪರಸ್ಪರ ಎದುರಾಗಲಿದೆ. ಈ ಎರಡು ತಂಡಗಳು ಸದ್ಯ ತಲಾ ನಾಲ್ಕು ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆದುಕೊಂಡಿದೆ. ಎರಡೂ ತಂಡಗಳು ಅತೀವ ವಿಶ್ವಾಸದಲ್ಲಿರುವ ಕಾರಣ ಜಿದ್ದಾಜಿದ್ದಿನ ಹೋರಾಟ ನಿರೀಕ್ಷೆ ಮಾಡಬಹುದು.
ಜಡಜೇ ಕ್ಷಮೆ ಕೋರಿದ ವಿರಾಟ್
ಬಾಂಗ್ಲಾದೇಶ(IND vs BAN) ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ವಿರಾಟ್ ಕೊಹ್ಲಿ(Virat Kohli) ಅವರು ಪಂದ್ಯದ ಬಳಿಕ ಸಹ ಆಟಗಾರ ರವೀಂದ್ರ ಜಡೇಜಾ(Ravindra Jadeja) ಬಳಿ ಕ್ಷಮೆಯಾಚಿಸಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ಗೆ 256 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಭಾರತ 41.3 ಓವರ್ಗಳಲ್ಲಿ ಮೂರು ವಿಕೆಟ್ಗೆ 261 ರನ್ ಬಾರಿಸಿ ಗೆಲುವಿನ ನಗೆ ಬೀರಿತು.
ಚೇಸಿಂಗ್ ವೇಳೆ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ನಡೆಸಿದ ವಿರಾಟ್ ಅವರು 97 ಎಸೆತಗಳಿಂದ 6 ಬೌಂಡರಿ ಮತ್ತು 4 ಸಿಕ್ಸರ್ ನೆರವಿನಿಂದ ಅಜೇಯ 103 ರನ್ ಬಾರಿಸಿದರು. ಗೆಲುವಿಗೆ ಮೂರು ರನ್ ಬೇಕಿದ್ದಾಗ ಕೊಹ್ಲಿ ಸಿಕ್ಸರ್ ಬಾರಿಸಿ ತಂಡಕ್ಕೆ ಗೆಲುವಿನ ಜತೆಗೆ ತಮ್ಮ ಶತಕವನ್ನೂ ಪೂರ್ತಿಗೊಳಿಸಿದರು. ಈ ಮೂಲಕ ಏಕದಿನ ಕ್ರಿಕೆಟ್ ಬಾಳ್ವೆಯಲ್ಲಿ 48ನೇ ಶತಕ ಬಾರಿಸಿದ ಸಾಧನೆ ಮಾಡಿದರು. ಅವರ ಈ ಸಾಧನೆಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವಿಕರಿಸಿ ಮಾತನಾಡುವ ವೇಳೆ ವಿರಾಟ್ ಅವರು ಈ ಪ್ರಶಸ್ತಿ ನಿಜವಾಗಿಯೂ ರವೀಂದ್ರ ಜಡೇಜಾಗೆ ಸಲ್ಲಬೇಕಿತ್ತು. ಆದರೆ ನಾನು ಶತಕ ಬಾರಿಸಿದ ಕಾರಣ ಅಂತಿಮ ಕ್ಷಣದಲ್ಲಿ ನನಗೆ ಒಲಿಯಿತು. ನಿಮ್ಮ ಈ ಪ್ರಶಸ್ತಿಯನ್ನು ಕಸಿದುಕೊಂಡದಕ್ಕೆ ಕ್ಷಮೆ ಇರಲಿ ಎಂದು ನಗುತ್ತಲೇ ಹೇಳಿದರು.