ಕೊಲೊಂಬೊ: ರೋಹಿತ್ ಶರ್ಮಾ (Rohit Sharma) ಕೊನೆಗೂ ಪಾಕ್ ಬೌಲರ್ಗಳ (Pakistan Cricket team) ಸೊಕ್ಕು ಮುರಿದಿದ್ದಾರೆ. ಏಷ್ಯಾ ಕಪ್ನಲ್ಲಿ (Asia Cup 2023) ಪಾಕಿಸ್ತಾನ ವಿರುದ್ಧದ ಸೂಪರ್-4 ಪಂದ್ಯದಲ್ಲಿ ಅರ್ಧ ಶತಕಗಳನ್ನು ಬಾರಿಸಿದ್ದಾರೆ. 19ನೇ ಓವರ್ಗೆ ಶದಾಬ್ ಖಾನ್ ಬೌಲಿಂಗ್ನಲ್ಲಿ ಕ್ಯಾಚ್ ನೀಡಿ ಔಟಾಗುವ ಮೊದಲು ಅವರು 50ನ ರನ್ಗಳ ಗಡಿ ದಾಟಿದ್ದಾರೆ. ಇದು ಅವರು 50ನೇ ಅರ್ಧ ಶತಕವಾಗಿದ್ದು ಜಾಗತಿಕ ಕ್ರಿಕೆಟ್ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಈ ಮೂಲಕ ಅವರು ಭಾರತ ತಂಡದ ಪರವಾಗಿ ಅತಿ ಹೆಚ್ಚು ಅರ್ಧ ಶತಕಗಳನ್ನು ಬಾರಿಸಿದ 8 ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಶಾಹೀನ್ ಶಾ ಅಫ್ರಿದಿ ಅವರ ಎಡಗೈ ವೇಗದ ಬೌಲಿಂಗ್ಗೆ ಹೆಣಗಾಡುತ್ತಿದ್ದ ರೋಹಿತ್ ಶರ್ಮಾ ಈ ಬಾರಿ ಅದಕ್ಕೆ ಅವಕಾಶ ಕೊಡಲಿಲ್ಲ. ರೋಹಿತ್ ಶರ್ಮಾ ಆರಂಭದಿಂದಲೂ ಆಕ್ರಮಣಕಾರಿ ಆಟವನ್ನೇ ಆಡಿದರು. ಶುಬ್ಮನ್ ಗಿಲ್ ರನ್ ಗಳಿಕೆಗೆ ಚಾಲನೆ ಕೊಡುತ್ತಿದ್ದಾಗಲೇ, ರೋಹಿತ್ ಶರ್ಮಾ ಪಾಕ್ ಬೌಲರ್ಗಳನ್ನು ದಂಡಿಸಿದರು. ಫೋರ್ ಸಿಕ್ಸರ್ ಮೂಲಕ ಬೆದರಿಕೆ ಹುಟ್ಟಿಸಿದರು.
ಶದಾಬ್ ಅವರ ಸ್ಪೆಲ್ನ ಮೊದಲ ಓವರ್ನಲ್ಲಿ ಎರಡು ಸಿಕ್ಸರ್ಗಳು ಮತ್ತು ಒಂದು ಫೋರ್ ಗಳಿಸಿದ ಅವರು ಕೇವಲ 42 ಎಸೆತಗಳಲ್ಲಿ ತಮ್ಮ 50 ನೇ ಅರ್ಧಶತಕ ಪೂರ್ಣಗೊಳಿಸಿದರು. ಈ ಮೂಲಕ 50 ಅರ್ಧ ಶತಕಗಳ ಗಡಿ ದಾಟಿದರು. ಈ ಮೂಲಕ 50 ನೇ ಏಕದಿನ ಅರ್ಧಶತಕದ ಎಲೈಟ್ ಪಟ್ಟಿಗೆ ಸೇರಿಕೊಂಡರು. ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಎಂಎಸ್ ಧೋನಿ, ಸೌರವ್ ಗಂಗೂಲಿ, ವಿರಾಟ್ ಕೊಹ್ಲಿ, ಮೊಹಮ್ಮದ್ ಅಜರುದ್ದೀನ್ ಮತ್ತು ಯುವರಾಜ್ ಸಿಂಗ್ 50 ಅರ್ಧ ಶತಕಗಳನ್ನು ಬಾರಿಸಿದವರು ಪಟ್ಟಿಯಲ್ಲಿದ್ದಾರೆ.
ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ 96 ಅರ್ಧಶತಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ರಾಹುಲ್ ದ್ರಾವಿಡ್ 83 ಅರ್ಧಶತಕಗಳೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ 65 ಏಕದಿನ ಅರ್ಧಶತಕಗಳನ್ನು ಬಾರಿಸಿದ್ದಾರೆ. ರೋಹಿತ್ ಶರ್ಮಾ ಐತಿಹಾಸಿಕ ಕ್ಷಣವನ್ನು ತಲುಪುವಲ್ಲಿ ವಿಫಲರಾದರು. ಏಕದಿನ ಪಂದ್ಯಗಳಲ್ಲಿ 10,000 ರನ್ ಪೂರೈಸುವಲ್ಲಿ ಅವರು 78 ರನ್ ಹಿಂದೆ ಬಿದ್ದಿದ್ದರು. ಆದರೆ ಅವರು 22ರನ್ ಗಳ ಹಿನ್ನಡೆ ಅನುಭವಿಸಿದರು. ಅವರು 9,978 ರನ್ಗಳಿಗೆ ಅವರ ಆಟ ನಿಂತಿತು. ದೊಡ್ಡ ಮೈಲುಗಲ್ಲು ದಾಟಲು ಅವರು ಇನ್ನೊಂದು ಪಂದ್ಯಕ್ಕೆ ಕಾಯಬೇಕಾಗಿದೆ.
ಏಕದಿನ ಕ್ರಿಕೆಟ್ನಲ್ಲಿ 10,000 ರನ್ ಪೂರೈಸಿದ ಭಾರತದ 6ನೇ ಬ್ಯಾಟರ್ಗೆ ಎಂಬ ಹೆಗ್ಗಳಿಕೆಗೆ ರೋಹಿತ್ ಶರ್ಮಾ ಪಾತ್ರರಾಗಲಿದ್ದಾರೆ. ರೋಹಿತ್ ಶರ್ಮಾಗೆ ಮಂಗಳವಾರ ಶ್ರೀಲಂಕಾ ವಿರುದ್ಧ ಮತ್ತೊಂದು ಅವಕಾಶ ಸಿಗಲಿದೆ.
ಏಕದಿನ ಕ್ರಿಕೆಟ್ನಲ್ಲಿ 10,000 ಕ್ಕೂ ಅಧಿಕ ರನ್ ಗಳಿಸಿದ ಭಾರತೀಯರು
ಸಚಿನ್ ತೆಂಡೂಲ್ಕರ್: 18,426 ರನ್
ವಿರಾಟ್ ಕೊಹ್ಲಿ: 12,902 * (ಭಾರತ ವಿರುದ್ಧ ನೇಪಾಳದವರೆಗೆ)
ಸೌರವ್ ಗಂಗೂಲಿ: 11,363
ರಾಹುಲ್ ದ್ರಾವಿಡ್: 10,889
ಎಂಎಸ್ ಧೋನಿ: 10,773