Site icon Vistara News

Mohammed Shami : ರೋಹಿತ್​ ಶರ್ಮಾಗೆ ನನ್ನ ಬೌಲಿಂಗ್​ ಎಂದರೆ ಭಯ; ಮೊಹಮ್ಮದ್ ಶಮಿ

Mohammed Shami

ನವದೆಹಲಿ: ಭಾರತದ ನಾಯಕ ರೋಹಿತ್ ಶರ್ಮಾ ಅವರನ್ನು ನೆಟ್ಸ್​ನಲ್ಲಿ ನನ್ನ ಬೌಲಿಂಗ್​ ಎದುರಿಸಲು ಇಷ್ಟಪಡುವುದಿಲ್ಲ ಎಂದು ಭಾರತದ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಶಮಿ (Mohammed Shami) ಬಹಿರಂಗಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ ಅವರು ಭಾರತ ತಂಡದ ಆಂತರಿಕ ವಿಚಾರಗಳನ್ನು ಹೇಳಿಕೊಂಡಿದ್ದಾರೆ. ಈ ವೇಳೆ ಅವರು ರೋಹಿತ್​ ತಮ್ಮ ಬೌಲಿಂಗ್​ ನಿರಾಕರಿಸುತ್ತಿದ್ದ ಬಗ್ಗೆ ತಿಳಿಸಿದ್ದಾರೆ. ಪಾದದ ಗಾಯದಿಂದಾಗಿ ಶಮಿ 2023 ರ ಏಕದಿನ ವಿಶ್ವಕಪ್​ ಬಳಿಕ ಕ್ರಿಕೆಟ್ ಚಟುವಟಿಕೆಯಿಂದ ಹೊರಗುಳಿದಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಫಿಟ್ನೆಸ್ ಮರಳಿ ಪಡೆಯಲು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA) ಪುನಶ್ಚೇತನಕ್ಕೆ ಒಳಗಾಗುತ್ತಿದ್ದಾರೆ.

ಶುಭಂಕರ್ ಮಿಶ್ರಾ 33 ವರ್ಷದ ಬೌಲರ್​​ ಜತೆ ಸಂದರ್ಶನದಲ್ಲಿ ಮಾತನಾಡಿ, ಭಾರತದ ಸ್ಟಾರ್ ಬ್ಯಾಟರ್​​ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರೊಂದಿಗಿನ ಸ್ನೇಹದ ಬಗ್ಗೆ ಮಾತನಾಡಿದರು. ಈ ವೇಳೆ ಅವರು, ಭಾರತದ ನಾಯಕ ನೆಟ್ಸ್​​ನಲ್ಲಿ ಎದುರಿಸಲು ಇಷ್ಟಪಡುತ್ತಿರಲಿಲ್ಲ ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಶಮಿ, ವಿರಾಟ್ ಕೊಹ್ಲಿ ಅವರೊಂದಿಗಿನ ತಮ್ಮ ಮೋಜಿನ ಸಮರವನ್ನು ಬಹಿರಂಗಪಡಿಸಿದ್ದಾರೆ. ಅಲ್ಲಿ ಅವರಿಬ್ಬರೂ ಪರಸ್ಪರ ಸವಾಲು ಹಾಕಲು ಇಷ್ಟಪಟ್ಟಿದ್ದಾರೆ.

ಇದನ್ನೂ ಓದಿ: SL vs IND : ಲಂಕಾ ಪ್ರವಾಸಕ್ಕೆಅಭಿಷೇಕ್​ ನಾಯರ್​​ ಬ್ಯಾಟಿಂಗ್ ಕೋಚ್​​

ನೆಟ್ಸ್​ನಲ್ಲಿ ವಿರಾಟ್ ಜತೆ ಮೋಜಿನ ಜಗಳವಾಡಲು ಇಷ್ಟ. ನಾವು ಪರಸ್ಪರ ಸವಾಲು ಹಾಕುತ್ತಿರುತ್ತೇವೆ. ಅವರು ಉತ್ತಮ ಶಾಟ್ ಗಳನ್ನು ಹೊಡೆಯಲು ಇಷ್ಟಪಡುತ್ತಾರೆ. ನಾನು ಅವರನ್ನು ಔಟ್ ಮಾಡಲು ಇಷ್ಟಪಡುತ್ತೇನೆ. ನಮ್ಮ ಸ್ನೇಹ ಅದರಲ್ಲಿ ಪ್ರತಿಬಿಂಬಿಸುತ್ತದೆ ಎಂದು ಶಮಿ ಹೇಳಿದ್ದಾರೆ.

ಪಾಕ್​ ಮಾಜಿ ನಾಯಕ ಇಂಜಮಾಮ್ ಬೆಂಡೆತ್ತಿದ ಮೊಹಮ್ಮದ್​ ಶಮಿ


ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ ಆತಿಥ್ಯದಲ್ಲಿ ನಡೆದಿದ್ದ ಟಿ20 ವಿಶ್ವಕಪ್​ ಟೂರ್ನಿಯ ವೇಳೆ ಭಾರತ ತಂಡದ ವೇಗಿ ಅರ್ಶ್‌ದೀಪ್ ಸಿಂಗ್(Arshdeep Singh) ಅವರ ರಿವರ್ಸ್ ಸ್ವಿಂಗ್ ಎಸೆತವನ್ನು ಪ್ರಶ್ನೆ ಮಾಡಿ ಬಾಲ್ ಟ್ಯಾಂಪರಿಂಗ್ ಆರೋಪ ಮಾಡಿದ್ದ ಪಾಕಿಸ್ತಾನ ತಂಡದ ಮಾಜಿ ಆಟಗಾರ ಹಾಗೂ ನಾಯಕ ಇಂಜಮಾಮ್ ಉಲ್ ಹಕ್(Inzamam Ul Haq)ಗೆ ಟೀಮ್​ ಇಂಡಿಯಾ ವೇಗಿ ಮೊಹಮ್ಮದ್​ ಶಮಿ(Mohammed Shami) ಸರಿಯಾಗಿಯೇ ತಿರುಗೇಟು ಕೊಟ್ಟಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ವಿಶ್ಲೇಷಣಾ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಇಂಜಮಾಮ್, ಅರ್ಶ್​ದೀಪ್ ರಿವರ್ಸ್ ಸ್ವಿಂಗ್ ಬಗ್ಗೆ ಅನುಮಾನವಿದೆ. 15ನೇ ಓವರ್​ನಲ್ಲಿ ಅವರು ಬೌಲಿಂಗ್​ ನಡೆಸುವ ವೇಳೆ ಚೆಂಡು ಹೆಚ್ಚು ಸ್ವಿಂಗ್​ ಆಗುತ್ತಿತ್ತು. ನಾನು ಗಮನಿಸಿದ ಹಾಗೆ ಈ ರೀತಿ ಚೆಂಡು ಏಕಾಏಕಿ ಸ್ವಿಂಗ್​ ಆಗಲು ಸಾಧ್ಯವಿಲ್ಲ. ನನ್ನ ಪ್ರಕಾರ ಭಾರತೀಯ ಆಟಗಾರರು 12 ಅಥವಾ 13ನೇ ಓವರ್​ನಲ್ಲಿ ಚೆಂಡಿಗೆ ಶೈನಿಂಗ್​ ಹಚ್ಚಿದಂತೆ ಕಾಣುತ್ತಿದೆ. ಅಂಪೈರ್​ಗಳು ಇದನ್ನು ಸೂಕ್ಷವಾಗಿ ಪರಿಗಣಿಸಬೇಕು. ಇಲ್ಲಿ ಯಾವುದೋ ಮೋಸದಾಟ ನಡೆದಂತಿದೆ” ಎಂದು ಆರೋಪಿಸಿದ್ದರು.

Exit mobile version