Site icon Vistara News

Rohit Sharma : ಟೀಕೆಗಳ ನಡುವೆಯೂ ಪತ್ನಿ ಜತೆ ಜಾಲಿ ಟ್ರಿಪ್ ಮಾಡುತ್ತಿರುವ ರೋಹಿತ್​ ಶರ್ಮಾ!

Rohit Sharma with wife Ritika Sajdeh

#image_title

ನವ ದೆಹಲಿ: ಟೀಂ ಇಂಡಿಯಾದ ಆಟಗಾರರಿಗೆ ಒಂದು ತಿಂಗಳ ಕಾಲ ವಿಶ್ರಾಂತಿ ಲಭಿಸಿದೆ. ಹೀಗಾಗಿ ಆಟಗಾರರು ಊರು ಸುತ್ತಾಟ ಮಾಡುತ್ತಿದ್ದಾರೆ. ಅಂತೆಯೇ ನಾಯಕ ರೋಹಿತ್ ಶರ್ಮಾ (Rohit Sharma) ತಮ್ಮ ಕುಟುಂಬದೊಂದಿಗೆ ಜಾಲಿ ಟ್ರಿಪ್​ ಹೊಡೆಯುತ್ತಿದ್ದಾರೆ. ವಿಶ್ವ ಟೆಸ್ಟ್​ ಚಾಂಪಿಯನ್​​​ಷಿಪ್​ ಫೈನಲ್​ ಸೋಲಿನ ಹಿನ್ನೆಲೆಯಲ್ಲಿ ಟೀಕೆಗಳು ವ್ಯಕ್ತಗೊಳ್ಳುತ್ತಿರುವ ನಡುವೆಯೇ ಅವರು ಜಾಲಿ ಮೂಡ್​ನಲ್ಲಿದ್ದಾರೆ. ರೋಹಿತ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಪತ್ನಿ ರಿತಿಕಾ ಮತ್ತು ಮಗಳು ಸಮೈರಾ ಅವರೊಂದಿಗೆ ಪ್ರವಾಸ ಹೋಗಿರುವ ಚಿತ್ರವನ್ನು ಪೋಸ್ಟ್​ ಮಾಡಿದ್ದಾರೆ.

ಈ ಚಿತ್ರ ಹಾಕುವ ಮೊದಲು, ರೋಹಿತ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯ ಮೂಲಕ ಮತ್ತೊಂದು ಚಿತ್ರವನ್ನು ಹಂಚಿಕೊಂಡಿದ್ದರು. ಅದರಲ್ಲಿ ಅವರ ಪತ್ನಿ ಮತ್ತು ಮಗಳು ಇಬ್ಬರೂ ಸುಂದರವಾದ ಉದ್ಯಾನದಲ್ಲಿ ನಿಂತಿರುವುದನ್ನು ಕಾಣಬಹುದು. ಆದರೆ ಆ ಸ್ಥಳ ಎಲ್ಲಿ ಎಂಬುದು ಗೊತ್ತಾಗಿಲ್ಲ. ಬ್ಯಾಟಿಂಗ್​ನಲ್ಲಿ ಫಾರ್ಮ್ ಕಳೆದುಕೊಂಡಿರುವ ಅವರು ಆ ನೋವನ್ನು ಮರೆತು ತಿರುಗಾಟ ಆರಂಭಿಸಿದ್ದಾರೆ.

ಬಾರ್ಡರ್-ಗವಾಸ್ಕರ್ ಟ್ರೋಫಿಯ ಪಂದ್ಯಗಳನ್ನು ಮುಗಿಸಿದ ಬಳಿಕ ಐಪಿಎಲ್ 2023 ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ್ದರು ರೋಹಿತ್​ ಶರ್ಮಾ. ಡಬ್ಲ್ಯುಟಿಸಿ 2023ರ ಫೈನಲ್​​ನಲ್ಲಿ ಅವರು ಉತ್ತಮ ಆರಂಭ ಪಡೆದಿದ್ದ ಹೊರತಾಗಿಯೂ ಎರಡು ಇನಿಂಗ್ಸ್​​ಗಳಲ್ಲಿ ಸಿಕ್ಕಿದ ಅವಕಾಶವನ್ನು ಬಳಸಿಕೊಂಡಿರಲಿಲ್ಲ. ಹೀಗಾಗಿ ಅವರ ಬಗ್ಗೆ ಟೀಕೆಗಳು ವ್ಯಕ್ತಗೊಂಡಿದ್ದವು.

ಇದನ್ನೂ ಓದಿ : Virat Kohli : ಕೊಹ್ಲಿ ವಿರುದ್ಧ ಆರೋಪಗಳ ಸುರಿಮಳೆಗೈದ ನವಿನ್​ ಉಲ್ ಹಕ್​!

ನಾಯಕತ್ವದ ವಿಚಾರಕ್ಕೆ ಬಂದಾಗ , ರೋಹಿತ್ ಹಲವಾರು ಐಸಿಸಿ ಟೂರ್ನಿಗಳನ್ನು ಕಳೆದುಕೊಂಡು ತೀವ್ರ ಒತ್ತಡದಲ್ಲಿದ್ದಾರೆ. ಬಿಕ್ಕಟ್ಟಿನ ಸಂದರ್ಭಗಳಲ್ಲಿ ಅವರ ಕಳಪೆ ನಾಯಕತ್ವ ಹಾಗೂ ಬ್ಯಾಟಿಂಗ್ ಕಾರಣಕ್ಕೆ ಮಾಜಿ ಕ್ರಿಕೆಟಿಗರು ಮತ್ತು ಅಭಿಮಾನಿಗಳು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆದಾಗ್ಯೂ, ಏಷ್ಯಾ ಕಪ್ ಮತ್ತು ವಿಶ್ವಕಪ್ ಸಮೀಪಿಸುತ್ತಿರುವುದರಿಂದ ಶರ್ಮಾಗೆ ಇನ್ನೂ ತಮ್ಮನ್ನು ತಾವು ಸರಿಪಡಿಸಿಕೊಳ್ಳುವ ಅವಕಾಶವಿದೆ. ಏಷ್ಯಾಕಪ್ 2023ರ ಉದ್ಘಾಟನಾ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಎದುರಿಸಲಿದೆ.

ಪಾಕ್​ ವಿರುದ್ಧದ ಪಂದ್ಯ ಆಗಸ್ಟ್ 31ರಂದು ನಡೆಯಲಿದೆ. ವಿರಾಟ್ ಕೊಹ್ಲಿ ಮತ್ತೊಮ್ಮೆ ಪಾಕಿಸ್ತಾನದ ಬೌಲರ್​​ಗಳನ್ನು ದಂಡಿಸುವ ಸೂಚನೆ ಕೊಟ್ಟಿದ್ದಾರೆ. ತಂಡದ ಆಟಗಾರಿಗೆ ಬೇಸರಗೊಂಡಿರುವ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳನ್ನು ಸಂತೈಸಲು ಈ ಪಂದ್ಯ ಉತ್ತಮ ಅವಕಾಶವಾಗಿದೆ. ಆದಾಗ್ಯೂ, ಇದು 50 ಓವರ್​​ಗಳ ಸ್ವರೂಪವಾಗಿದ್ದು, ರೋಹಿತ್ ಕೂಡ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಉತ್ಸುಕರಾಗಿದ್ದಾರೆ.

Exit mobile version