Site icon Vistara News

Rohit Sharma : ಬಾಲಿವುಡ್​ ಸಿನಿಮಾ ಸಾಂಗ್​ನಲ್ಲಿ ಕಾಣಿಸಿಕೊಂಡ ರೋಹಿತ್ ಶರ್ಮಾ

Rohit Sharma

ಬೆಂಗಳೂರು: ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಕ್ರಿಕೆಟ್​ ಸಾಧನೆ ಜತೆಗೆ ವಿಭಿನ್ನ ಮನೋಭಾವದ ಮೂಲಕ ಜನಪ್ರಿಯ. ಜನಪ್ರಿಯ ಕ್ರಿಕೆಟಿಗನಾಗಿರುವ ಅವರು ಹಲವಾರು ಉತ್ಪನ್ನಗಳ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಈ ಎಲ್ಲ ಕಂಪನಿಗಳ ಜಾಹೀರಾತುಗಳಿಗಾಗಿ ನಟಿಸುತ್ತಿದ್ದಾಎ. ಇದೀಗ ಅವರು ಬಾಲಿವುಡ್​ ಕಡೆಗೂ ಎಂಟ್ರಿ ಪಡೆದಿದ್ದಾರೆ ಎಂಬುದಾಗಿ ವರದಿಯಾಗಿದೆ. ಅವರು ಕ್ರೀಡೆಯನ್ನು ಆಧಾರಿಸಿ ಮಾಡಿರು ಸಿನಿಮಾ “ಮಿಸ್ಟರ್ & ಮಿಸೆಸ್ ಮಹಿ” ಚಿತ್ರದ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಬಿಡುಗಡೆಗೆ ಮುಂಚಿತವಾಗಿ ಚಲನಚಿತ್ರವನ್ನು ಪ್ರಚಾರ ಮಾಡುವ ಸಲುವಾಗಿ ಈ ಚಿತ್ರವು ಕ್ರೀಡೆಯ ಅತ್ಯಂತ ಪ್ರಸಿದ್ಧ ವ್ಯಕ್ತಿಗಳಲ್ಲಿ ಒಬ್ಬರನ್ನು ಒಳಗೊಂಡ ಮೂಲಕ ವಿಶಿಷ್ಟ ಹಾಡೊಂದನ್ನು ಬಿಡುಗಡೆ ಮಾಡಿದ್ದಾರೆ. ಅಲ್ಲಿ ರೋಹಿತ್ ಹೆಸರು ಕಾಣಿಸುತ್ತಿದೆ.

ಬಾಲಿವುಡ್ ಮತ್ತು ಕ್ರಿಕೆಟ್ ಭಾರತದಲ್ಲಿ ಮನರಂಜನೆಯ ಪ್ರಮುಖ ಮೂಲಗಳು. ಎರಡೂ ಕಡೆ ಭರ್ಜರಿ ಮನರಂಜನೆ ಸಿಗುತತದೆ. ಕಾಲ್ಪನಿಕ ಹಾಗೂ ನೈಜ ಪ್ರಪಂಚಲದಲ್ಲಿ ಇದು ಹೆಚ್ಚು ಹತ್ತಿರ ಹಾಗೂ ಅಭಿಮಾನಿಗಳ ಪಾಲಿಗೆ ಹೆಚ್ಚು ಖುಷಿ ಪಡುವಂಥ ಸಂಗತಿ. ಹೀಗಾಗಿ ಕ್ರಿಕೆಟ್​ ಕುರಿತು ಹಲವಾರು ಸಿನಿಮಾಗಳು ಬಂದಿವೆ. ಅದೇ ರೀತಿ ಇದೀಗ ಹೊಸ ಸಿನಿಮಾವೊಂದು ಸೆಟ್ಟೇರಿದ್ದು ಅದರಲ್ಲಿ ಕೆಲವು ಕ್ರಿಕೆಟಿಗರ ಉಪಸ್ಥಿತಿಯನ್ನು ನಿರೀಕ್ಷೆ ಮಾಡಲಾಗಿದೆ.

‘ಮಿಸ್ಟರ್ ಅಂಡ್ ಮಿಸೆಸ್ ಮಹಿ’ ಎಂಬ ಸಿನಿಮಾ ಬಾಲಿವುಡ್ ಮತ್ತೊಂದು ಕ್ರಿಕೆಟ್ ಆಧಾರಿತ ಡ್ರಾಮಾ ಸಿನಿಮಾಗಿದೆ. ಇದು ಈ ವಾರದ ಕೊನೆಯಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು ಭಾರಿ ನಿರೀಕ್ಷೆ ಮುಟ್ಟಿಸಿದೆ. ಪ್ರತಿಭಾವಂತ ನಟ ರಾಜ್ ಕುಮಾರ್ ರಾವ್ ಮತ್ತು ಜಾನ್ವಿ ಕಪೂರ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಈ ಕಾಲ್ಪನಿಕ ಚಿತ್ರವು ಕ್ರಿಕೆಟ್ ಬಗ್ಗೆ ಉತ್ಸಾಹ ಹೊಂದಿರುವ ದಂಪತಿ ಜೀವನದ ಕುರಿತಾಗಿದೆ.

ಇದನ್ನೂ ಓದಿ: Shreyanka Patil: ನಟ ಸಮರ್ಜಿತ್ ಲಂಕೇಶ್ ಜತೆ ಮಸ್ತ್​ ಸ್ಟೆಪ್ಸ್ ಹಾಕಿದ ಆರ್​ಸಿಬಿ ಆಟಗಾರ್ತಿ ಶ್ರೇಯಾಂಕಾ; ವಿಡಿಯೊ ವೈರಲ್​

ಈ ಚಲನಚಿತ್ರವು ಅವರ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಹಲವಾರು ಏರಿಳಿತಗಳನ್ನು ಬಿಂಬಿಸುತ್ತದೆ. ಮಹಿಳಾ ಕ್ರೀಡಾಪಟುಗಳು ಎದುರಿಸುತ್ತಿರುವ ಸವಾಲುಗಳು ಮತ್ತು ಖ್ಯಾತಿಯನ್ನು ಇದು ಬೊಟ್ಟು ಮಾಡಿದೆ. ಇದಲ್ಲದೆ, ಕ್ರಿಕೆಟ್ ಕಥಾಹಂದರದ ಅವಿಭಾಜ್ಯ ಅಂಗವಾಗಿರುವುದರಿಂದ, ಚಿತ್ರದ ಆಕರ್ಷಣೆ ಮತ್ತು ವಾಸ್ತವಿಕತೆಯನ್ನು ಹೆಚ್ಚಿಸಲು ರೋಹಿತ್ ಶರ್ಮಾ ಅವರಂತಹ ಕ್ರಿಕೆಟ್ ಸೂಪಸ್ಟಾರ್​ಗಳನ್ನು ಚಿತ್ರ ತಂಡ ಸೇರಿಸಿಕೊಂಡಿದ್ದಾರೆ. ಅವರಲ್ಲಿ ರೋಹಿತ್ ಕೂಡ ಒಬ್ಬರು.

ಚಿತ್ರ ಬಿಡುಗಡೆಗೆ ಕೆಲವು ದಿನಗಳ ಮೊದಲು, ‘ಅಗರ್ ತುಮ್ ಹೋ’ ಎಂಬ ಹಾಡನ್ನು ಯೂಟ್ಯೂಟ್​ನಲ್ಲಿ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಭಾರತೀಯ ನಾಯಕ ರೋಹಿತ್ ಶರ್ಮಾ ಕೂಡ ಇದ್ದರು. ರಾಜ್​ಕುಮಾರ್​ ಮತ್ತು ಜಾನ್ವಿ ರೋಹಿತ್ ಅವರ ಶತಕವನ್ನು ಊಟದ ಮೇಜಿನ ಬಳಿ ಸಂಭ್ರಮಿಸುತ್ತಿರುವುದು ಹಾಡಿನಲ್ಲಿ ಕಂಡುಬಂದಿದೆ. ಕ್ರಿಕೆಟ್ ಪ್ರೇಮಿಗಳಾಗಿ ತಮ್ಮ ಉತ್ಸಾಹ ತೋರುವುದು ಕಾಣಿಸುತ್ತಿದೆ.

ಈ ಹಾಡಿನಲ್ಲಿ ಭಾರತೀಯ ನಾಯಕ ರೋಹಿತ್ ಶರ್ಮಾ ಅವರ ಉಪಸ್ಥಿತಿಯು ಕ್ರಿಕೆಟ್ ಅಭಿಮಾನಿಗಳನ್ನು ಚಲನಚಿತ್ರದ ಕಡೆಗೆ ಸೆಳೆಯುವ ಸಾಧ್ಯತೆಯಿದೆ. ಮೇ 31 ರ ಬಿಡುಗಡೆಗೆ ಮುಂಚಿತವಾಗಿ ಅದರ ನಿರೀಕ್ಷೆಯನ್ನು ಹೆಚ್ಚಿಸುತ್ತದೆ. ವಿಶೇಷವೆಂದರೆ, ಚಿತ್ರದ ಪ್ರಮುಖ ನಟಿ ಜಾನ್ವಿ ಕಪೂರ್ ಕೂಡ ಈ ತಿಂಗಳ ಆರಂಭದಲ್ಲಿ ಚಿತ್ರದ ಪ್ರಚಾರಕ್ಕಾಗಿ ಐಪಿಎಲ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.

Exit mobile version