Site icon Vistara News

ಸಿಕ್ಸರ್​ ಬಾರಿಸಿ ಅಂಪೈರ್​ಗೆ ತೋಳ್ಬಲ ತೋರಿದ ಹಿಟ್​ಮ್ಯಾನ್ ರೋಹಿತ್​ ಶರ್ಮ​

rohit sharma

ಅಹಮದಾಬಾದ್​: ಅತ್ಯಂತ ನೀರಸವಾಗಿ ನಡೆದ ಶನಿವಾರದ ಭಾರತ ಮತ್ತು ಪಾಕಿಸ್ತಾನ(IND vs PAK) ವಿರುದ್ಧದ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್​ಗಳ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಪಾಕಿಸ್ತಾನ ವಿರುದ್ಧ ಆಡಿದ 8 ಪಂದ್ಯಗಳಲ್ಲೂ ಭಾರತ ಸೋಲಿಲ್ಲದ ಸರದಾರನಾಗಿ ಮೆರೆದಾಡಿದೆ. ಈ ಪಂದ್ಯದಲ್ಲಿ ರೋಹಿತ್​ ಶರ್ಮ(rohit sharma) ಅವರು ಸಿಕ್ಸರ್​ ಬಾರಿಸಿದ ಬಳಿಕ ಅಂಪೈರ್​ಗೆ ತಮ್ಮ ತೋಳ್ಬಲವನ್ನು ತೋರಿಸಿದ ವಿಡಿಯೊ ವೈರಲ್​ ಆಗಿದೆ.

ಈ ಪಂದ್ಯದಲ್ಲಿ ರೋಹಿತ್ ಶರ್ಮಾ ತಮ್ಮ ಏಕದಿನ ವೃತ್ತಿಜೀವನದ 300ನೇ ಸಿಕ್ಸರ್ ಬಾರಿಸಿದ ಸಾಧನೆ ಮಾಡಿದರು. ಇದೇ ಖುಷಿಯಲ್ಲಿ ಅವರು ಅಂಪೈರ್‌ಗೆ ತಮ್ಮ ಬೈಸೆಪ್ಸ್ ತೋರಿಸಿ ಸಂಭ್ರಮಿಸಿದರು. ಇದೀಗ ರೋಹಿತ್ ಅವರ ಈ ವಿಶೇಷ ಸಂಭ್ರಮದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್​ ಆಗಿದೆ.

ನಾಯಕ ರೋಹಿತ್ ಶರ್ಮ ಈ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್​ ನಡೆಸಿ ಗಮನಸೆಳೆದರು. 63 ಎಸೆತಗಳಲ್ಲಿ 86 ರನ್ ಗಳಿಸಿ ನೆರೆದಿದ್ದ ಅಭಿಮಾನಿಗಳಿಗೆ ಬರಪೂರ ರಂಜನೆ ನೀಡಿದರು. ಅವರ ಸೊಗಸಾದ ಈ ಇನಿಂಗ್ಸ್​ನಲ್ಲಿ ಬರೋಬ್ಬರಿ 6 ಸಿಕ್ಸರ್ ಮತ್ತು 6 ಬೌಂಡರಿ ಸಿಡಿಯಿತು.

ಇದನ್ನೂ ಓದಿ Ind vs Pak : ಶ್ರೇಯಸ್​ ಕಡೆಗೆ ಚೆಂಡು ಎಸೆದು ಪ್ರೇಕ್ಷಕರಿಂದ ಲೇವಡಿಗೆ ಒಳಗಾದ ಪಾಕ್ ವೇಗಿ

ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ ಬಿಗಿ ಬೌಲಿಂಗ್ ದಾಳಿ ಸಂಘಟಿಸಿತು. ನಾಟಕೀಯ ಕುಸಿತ ಕಂಡ ಪಾಕಿಸ್ತಾನ 42.5 ಓವರ್ ಗಳಲ್ಲಿ 191 ರನ್ ಗಳಿಗೆ ಸರ್ವಪತನ ಕಂಡಿತು. ಗುರಿ ಬೆನ್ನಟ್ಟಿದ ಭಾರತ 30.3 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತು. ಡೆಂಗ್ಯೂ ಜ್ವರದಿಂದ ಚೇತರಿಕೆ ಕಂಡು ಆಡಲಿಳಿದ ಶುಭಮನ್ ಗಿಲ್ 16 ರನ್ ಗಳಿಸಿ ಔಟಾದರು. ವಿರಾಟ್ ಕೊಹ್ಲಿ ಕೂಡ 16 ರನ್ ಗಳಿಸಿ ಔಟಾದರು. ಅಂತಿಮ ಹಂತದಲ್ಲಿ ಶ್ರೇಯಸ್ ಅಯ್ಯರ್ ತಾಳ್ಮೆಯ ಆಟವಾಡಿ ಅರ್ಧಶತಕ ಗಳಿಸಿದರು. ಅವರು 62 ಎಸೆತಗಳಲ್ಲಿ ಅಜೇಯ 53 ಗಳಿಸಿದರು. ಕೆಎಲ್ ರಾಹುಲ್ 19 ರನ್ ಗಳಿಸಿ ಔಟಾಗದೆ ಉಳಿದರು.

ದಾಖಲೆ ಬರೆದ ರೋಹಿತ್​

ಅಫ್ಘಾನಿಸ್ತಾನ ಪಂದ್ಯದಲ್ಲಿ, ರೋಹಿತ್​ 554 ಸಿಕ್ಸರ್​ಗಳ ಮೂಲಕ ಕ್ರಿಸ್ ಗೇಲ್ ಅವರನ್ನು ಹಿಂದಿಕ್ಕಿ ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಅತಿ ಹೆಚ್ಚು ಸಿಕ್ಸರ್​ ಬಾರಿಸಿದ ಆಟಗಾರ ಎನಿಸಿಕೊಂಡ ಮರು ಪಂದ್ಯದಲ್ಲೇ ಮತ್ತೊಂದು ದಾಖಲೆ ಬರೆದಿದ್ದಾರೆ. ಅದು ಕೂಡ ಸಿಕ್ಸರ್​ ಮೂಲಕವೇ ಎನ್ನುವುದು ವಿಶೇಷ. ಏಕದಿನ ಕ್ರಿಕೆಟ್​ನಲ್ಲಿ 300 ಸಿಕ್ಸರ್‌ಗಳನ್ನು ಬಾರಿಸಿದ ವಿಶ್ವದ ಮೂರನೇ ಬ್ಯಾಟ್ಸ್‌ಮನ್ ಮತ್ತು ಭಾರತದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

“ನಾನು ಈ ಆಟವನ್ನು ಆಡಲು ಪ್ರಾರಂಭಿಸಿದಾಗ, ನಾನು ಇಷ್ಟು ಸಿಕ್ಸರ್​ಗಳನ್ನು ಹೊಡೆಯಲು ಸಾಧ್ಯವಾಗುತ್ತದೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ. ನಿಸ್ಸಂಶಯವಾಗಿ, ಮುಂದಿನ ವರ್ಷಗಳಲ್ಲಿ ಸಿಕ್ಸರ್​ ಹೊಡೆಯಲು ಕಲಿತೆ. ಆದ್ದರಿಂದ, ನಾನು ಮಾಡಿದ ಕೆಲಸದಿಂದ ನನಗೆ ಸಾಕಷ್ಟು ಸಂತೋಷವಾಗಿದೆ ಎಂದು ರೋಹಿತ್ ಹೇಳಿದ್ದಾರೆ.

ಬೌಲರ್​ಗಳಿಗೆ ಶ್ಲಾಘನೆ

ಬ್ಯಾಟರ್​ಗಳಿಗೆ ಸೂಕ್ತವಾದ ಪಿಚ್​ನಲ್ಲಿ ಅಫ್ಘಾನಿಸ್ತಾನವನ್ನು ಕಡಿಮೆ ಮೊತ್ತಕ್ಕೆ ಸೀಮಿತಗೊಳಿಸಿದ್ದಕ್ಕಾಗಿ 36 ವರ್ಷದ ನಾಯಕ ತಮ್ಮ ಬೌಲರ್​ಗಳನ್ನು ಶ್ಲಾಘಿಸಿದರು. “ನಾವು ಅದ್ಭುತ ಆಟವನ್ನು ಆಡಿದ್ದೇವೆ ಎಂದು ನಾನು ಭಾವಿಸಿದ್ದೇವೆ. ಅಫ್ಘಾನಿಸ್ತಾನವನ್ನು 280 ಕ್ಕಿಂತ ಕಡಿಮೆ ರನ್​ಗಳಿಗೆ ನಿಯಂತ್ರಿಸಲು ಬೌರಲ್​ಗಳು ಅಸಾಧಾರಣ ಕೆಲಸ ಮಾಡಿದರು, ಏಕೆಂದರೆ ಪಿಚ್​ ಬ್ಯಾಟಿಂಗ್ ಮಾಡಲು ನಿಜವಾಗಿಯೂ ಅನುಕೂಲಕರವಾಗಿತ್ತು ಎಂದು ರೋಹಿತ್​ ಹೇಳಿದ್ದಾರೆ.

 

Exit mobile version