Site icon Vistara News

Rohit Sharma : ಗಾಯದ ನೋವಿಗೆ ಮೈದಾನವನ್ನೇ ಶಪಿಸಿದ ರೋಹಿತ್​ ಶರ್ಮಾ

Rohit Sharma

ಧರ್ಮಶಾಲಾ: ಧರ್ಮಶಾಲಾದ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವಕಪ್ 2023 ರ ಪಂದ್ಯದ ವೇಳೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಗಂಭೀರ ಗಾಯಗೊಳ್ಳುವ ಸಂದರ್ಭದಿಂದ ಪಾರಾಗಿದ್ದಾರೆ. ಇನಿಂಗ್ಸ್​​ನ 10 ನೇ ಓವರ್​ನಲ್ಲಿ ಈ ಘಟನೆ ನಡೆದಿದ್ದು, ರೋಹಿತ್ ಚೆಂಡನ್ನು ತಡೆಯಲು ಜಾರಿದಾಗ, ಅವರ ಬೆರಳುಗಳು ಅವರ ದೇಹ ಮತ್ತು ಟರ್ಫ್ ನಡುವೆ ಸಿಲುಕಿಕೊಂಡವು. ಹೀಗಾಗಿ ಅವರು ನೋವಿನ ಸಮಸ್ಯೆ ಎದುರಿಸಿದರು. ಈ ವೇಳೆ ಅವರು ಮೈದಾನವನ್ನು ನೋಡಿ ಶಪಿಸಿದರು.

ಸಮತೋಲನ ತಪ್ಪಿ ಜಾರಿದ ಔಟ್ ಫೀಲ್ಡ್ ನೋಡಿದ ಭಾರತೀಯ ನಾಯಕ ಕೋಪಗೊಂಡರು. ತಕ್ಷಣ ಚಿಕಿತ್ಸೆ ಪಡೆಯಲು ಮೈದಾನದಿಂದ ಹೊರನಡೆದರು. ಅವರ ಅನುಪಸ್ಥಿತಿಯಲ್ಲಿ ವಿಕೆಟ್ ಕೀಪರ್ ಕೆಎಲ್ ರಾಹುಲ್ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡರು. ರೋಹಿತ್ ಎರಡು ಓವರ್ ಗಳ ನಂತರ ಮೈದಾನಕ್ಕೆ ಮರಳಿದರು. ವಿಶೇಷವೆಂದರೆ, ಅಫ್ಘಾನಿಸ್ತಾನದ ಸ್ಪಿನ್ನರ್ ಮುಜೀಬ್ ಜಾರಿಬಿದ್ದು ಗಾಯಗೊಂಡ ನಂತರ ಧರ್ಮಶಾಲಾದ ಪಿಚ್ ಬಗ್ಗೆ ದೂರುಗಳು ಕೇಳಿ ಬಂದಿದ್ದವು. ಗುಣಮಟ್ಟ ಹೊಂದಿಲ್ಲ ಎಂಬುದಾಗಿ ಹೇಳಲಾಗಿತ್ತು. ಅದೇ ಸಮಸ್ಯೆಯನ್ನು ರೋಹಿತ್​ ಶರ್ಮಾ ಅನುಭವಿಸಿದರು.

ಇದನ್ನೂ ಓದಿ
Heinrich Klaasen: ಕ್ಲಾಸಿ ಶತಕ ಬಾರಿಸಿ ವಿಶ್ವಕಪ್​ನಲ್ಲಿ ದಾಖಲೆ ಬರೆದ ಕ್ಲಾಸೆನ್‌
KL Rahul: ರಾಹುಲ್​ ಬ್ಯಾಟಿಂಗ್​,ಕೀಪಿಂಗ್​ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಕೋಚ್​ ಡ್ರಾವಿಡ್​

ಮುಜೀಬ್​ ಜಾರಿ ಬಿದ್ದ ಪ್ರಕರಣದ ಬಳಿಕ ಅಫಘಾನಿಸ್ತಾನ ತಂಡದ ಮುಖ್ಯ ಕೋಚ್ ಜೊನಾಥನ್ ಟ್ರಾಟ್ ಔಟ್ ಫೀಲ್ಡ್ ಅನ್ನು ಟೀಕಿಸಿದ್ದರು. ಮುಜೀಬ್ ಗಂಭೀರ ಗಾಯದಿಂದ ಪಾರಾಗಿದ್ದಾರೆ ಎಂದು ಹೇಳಿಕೆ ನೀಡಿದ್ದರು.

“ಕ್ರಿಕೆಟ್ ಆಟಗಾರರು ತಮ್ಮ ಫೀಲ್ಡಿಂಗ್ ಅನ್ನು ಸುಧಾರಿಸಲು ಪ್ರೋತ್ಸಾಹಿಸುವುದನ್ನು ನಾವು ನೋಡುತ್ತೇವೆ, ಆದರೆ ಅವರು ಡೈವ್ ಮಾಡಲು ಹೆದರುವಂತಾಗಿದೆ, ಮುಜೀಬ್ (ಉರ್ ರೆಹಮಾನ್) ಕೊನೆಯಲ್ಲಿ ಗಂಭೀರ ಮೊಣಕಾಲು ಗಾಯವನ್ನು ಎದುರಿಸುವ ಸಾಧ್ಯತೆಗಳಿದ್ದವು. ನಮ್ಮ ಅದೃಷ್ಟ. ನಾವು ನ್ಯೂಜಿಲೆಂಡ್​​ನ ಡೆ​ ವೊನ್ ಕಾನ್ವೇ ಅವರು ಜಾರಿ ಬಿದ್ದಿರುವುದನ್ನು ಆರಂಭದಲ್ಲಿ ನೋಡಿದ್ದೇವೆ. ಎಂದು ಅವರು ಹೇಳಿದ್ದರು.

ಐಸಿಸಿಯಿಂದ ಸಾಧಾರಣ ಪಿಚ್​ ರೇಟಿಂಗ್​

ಟ್ರಾಟ್ ಅವರ ಹೇಳಿಕೆಯ ನಂತರ, ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ನ ಸ್ವತಂತ್ರ ಪಿಚ್ ಸಲಹೆಗಾರ ಆಂಡಿ ಅಟ್ಕಿನ್ಸನ್ ಅವರನ್ನು ಪರಿಶೀಲನೆಗೆ ಕಳುಹಿಸಿತ್ತು. ಬಳಿಕ ಅವರು ‘ಸರಾಸರಿ’ ಎಂದು ನಿರ್ಣಯಿಸಿದ್ದರು. ಆದರೆ ಪಂದ್ಯಗಳನ್ನು ಆಡಿಸುವುದಕ್ಕೆ ಅಡಚಣೆ ಇಲ್ಲ ಎಂದು ಹೇಳಿದ್ದರು.

ಪಿಚ್ ಮತ್ತು ಔಟ್​ಫೀಲ್ಡ್​ ಸ್ಥಿತಿಯನ್ನು ನಿರ್ಣಯಿಸುವ ಪ್ರಕ್ರಿಯೆಯು ಐಸಿಸಿ ಪಿಚ್ ಮತ್ತು ಔಟ್​ಫೀಲ್ಡ್​​ ಮಾನಿಟರಿಂಗ್ ಪ್ರಕ್ರಿಯೆ ಪಂದ್ಯದ ಅಧಿಕಾರಿಗಳ ಕೈಯಲ್ಲಿದೆ. ಅಫ್ಘಾನಿಸ್ತಾನ-ಬಾಂಗ್ಲಾದೇಶ ಪಂದ್ಯದ ನಂತರ ಧರ್ಮಶಾಲಾದಲ್ಲಿನ ಔಟ್​ಫೀಲ್ಡ್​ ಅನ್ನು ‘ಸರಾಸರಿ’ ಎಂದು ರೇಟ್ ಮಾಡಲಾಗಿದೆ. ಹೆಚ್ಚುವರಿಯಾಗಿ, ಐಸಿಸಿ ಸ್ವತಂತ್ರ ಪಿಚ್ ಸಲಹೆಗಾರ ಇಂದು ಔಟ್​ಫೀಲ್ಡ್​ ಅನ್ನು ನೋಡಿದ್ದಾರೆ. ಪರಿಸ್ಥಿತಿಗಳೊಂದಿಗೆ ಆರಾಮದಾಯಕವಾಗಿದೆ ಎಂದು ಹೇಳಿದ್ದಾರೆ.

ಪಂದ್ಯದಲ್ಲಿ ಟಾಸ್​ ಗೆದ್ದಿರುವ ಭಾರತ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಅಂತೆಯೇ ಮೊದಲು ಬ್ಯಾಟ್​ ಮಾಡಲು ಆರಂಭಿಸಿರುವ ನ್ಯೂಜಿಲ್ಯಾಂಡ್​ ತಂಡ ಆರಂಭದಲ್ಲಿ ಎರಡು ವಿಕೆಟ್​ಗಳನ್ನು ಕಳೆದುಕೊಂಡಿತು. ಆದರೆ, ನಂತರದಲ್ಲಿ ಸುಧಾರಿಸಿಕೊಂಡು ಆಟ ಮುಂದುವರಿಸಿತು.

Exit mobile version