Site icon Vistara News

Ind vs Pak | ಮದುವೆಯಾಗೊ ಬಾಬರ್‌ ಎಂದ ರೋಹಿತ್, ಸದ್ಯಕ್ಕಿಲ್ಲ ಎಂದ ಪಾಕ್‌ ನಾಯಕ

ದುಬೈ : ಏಷ್ಯಾ ಕಪ್‌ ಟೂರ್ನಿಯಲ್ಲಿ ಪಾಲ್ಗೊಂಡಿರುವ ಭಾರತ ಹಾಗೂ ಪಾಕಿಸ್ತಾನ ತಂಡಗಳ (Ind vs Pak) ಆಟಗಾರರ ನಡುವಿನ ಉಭಯ ಕುಶಲೋಪರಿ ಸದ್ಯದ ಟ್ರೆಂಡಿಂಗ್‌ ಸುದ್ದಿ. ಸಾಂಪ್ರದಾಯಿಕ ವೈರಿಗಳಾದ ಈ ಎರಡೂ ತಂಡಗಳ ನಡುವೆ ಭಾನುವಾರ ಪಂದ್ಯ ಆಯೋಜನೆಗೊಂಡಿದ್ದು, ಇತ್ತಂಡಗಳೂ ಭರ್ಜರಿ ಅಭ್ಯಾಸ ನಡೆಸುತ್ತಿದೆ. ಅದರ ನಡುವೆ ಅವರು ಪರಸ್ಪರ ಭೇಟಿಯಾದಾಗ ಬೇರೆಬೇರೆ ವಿಚಾರಗಳ ಬಗ್ಗೆ ಮಾತನಾಡುತ್ತಾರೆ. ಅಂತೆಯೇ ಶನಿವಾರ ಅಭ್ಯಾಸ ಮುಗಿಸಿ ವಾಪಸ್‌ ತೆರಳುತ್ತಿದ್ದ ಪಾಕ್‌ ತಂಡದ ನಾಯಕ ಬಾಬರ್ ಅಜಮ್‌ ಹಾಗೂ ರೋಹಿತ್‌ ಶರ್ಮ ಪರಸ್ಪರ ಭೇಟಿಯಾದಾಗ ಕ್ರಿಕೆಟ್‌ ಬಿಟ್ಟು ಪರಸ್ಪರ ತಮಾಷೆ ಮಾಡಿಕೊಂಡಿದ್ದಾರೆ.

ರೋಹಿತ್ ಹಾಗೂ ಬಾಬರ್‌ ಬೇರೆ ಬೇರೆ ವಿಚಾರಗಳ ಬಗ್ಗೆ ಮಾತನಾಡಿಕೊಂಡಿದ್ದಾರೆ. ಇದೇ ವೇಳೆ ರೋಹಿತ್‌ ಶರ್ಮ ಹಿಂದಿಯಲ್ಲಿ ಮದುವೆಯಾಗು ಭಾಯಿ (ಸಹೋದರ) ಎಂದ ಹೇಳಿದ್ದಾರೆ. ಈ ವೇಳೆ ಅಡ್ಡಡ್ಡ ತಲೆಯಾಡಿಸಿದ ಬಾಬರ್‌ ಅಜಮ್‌ ಸದ್ಯಕ್ಕಿಲ್ಲ ಎಂದು ಹೇಳಿದ್ದಾರೆ.

ಶುಕ್ರವಾರ ಅಭ್ಯಾಸಕ್ಕೆ ಹೋಗುತ್ತಿದ್ದ ವೇಳೆ ಟೀಮ್‌ ಇಂಡಿಯಾದ ಆಟಗಾರರು ಪಾಕಿಸ್ತಾನ ತಂಡದ ಬೌಲರ್‌ ಶಾಹಿನ್‌ ಶಾ ಅಫ್ರಿಯಲ್ಲಿ ಜತೆ ಮಾತುಕತೆ ನಡೆಸಿದ್ದರು. ಸ್ಪಿನ್ನರ್ ಯಜ್ವೇಂದ್ರ ಚಹಲ್‌, ವಿರಾಟ್‌ ಕೊಹ್ಲಿ, ರಿಷಭ್‌ ಪಂತ್‌ ಹಾಗೂ ಕೆ. ಎಲ್‌ ರಾಹುಲ್‌ ವೇಗದ ಬೌಲರ್‌ ಅಫ್ರಿದಿ ಜತೆ ಮಾತನಾಡಿದ್ದರು. ಅದಕ್ಕಿಂತ ಮೊದಲು ವಿರಾಟ್‌ ಕೊಹ್ಲಿ ಮತ್ತು ಬಾಬರ್‌ ಅಜಮ್‌ ಪರಸ್ಪರ ಕೈಕುಲುಕಿ ಮಾತನಾಡಿದ್ದರು.

ಇದನ್ನೂ ಓದಿ | Sourav Ganguly | ಶಹೀನ್‌ ಅಫ್ರಿದಿ ಅಲಭ್ಯತೆ ದೊಡ್ಡ ಸಂಗತಿಯಲ್ಲ, ಒಬ್ಬನಿಂದ ಗೆಲುವು ಎಂಬುದು ತಪ್ಪು

Exit mobile version