ದುಬೈ : ಭಾರತ ತಂಡದ ನಾಯಕ ರೋಹಿತ್ ಶರ್ಮ ಬುಧವಾರ ನಡೆದ ಏಷ್ಯಾ ಕಪ್ (Asia Cup) ಟೂರ್ನಿಯಲ್ಲಿ ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ಎರಡೆರಡು ದಾಖಲೆಗಳನ್ನು ಮಾಡಿದ್ದಾರೆ. ಮೊದಲ ದಾಖಲೆ ಟಿ೨೦ ಮಾದರಿಯಲ್ಲಿ ಗರಿಷ್ಠ ರನ್‌ಗಳನ್ನು ಬಾರಿಸಿದ ದಾಖಲೆ, ಮತ್ತೊಂದು ಏಷ್ಯಾ ಕಪ್‌ನಲ್ಲಿ ಗರಿಷ್ಠ ಪಂದ್ಯಗಳನ್ನು ಆಡಿದ ದಾಖಲೆ.
ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮ ೧೩ ಎಸೆತಗಳಲ್ಲಿ ೨೧ ರನ್ ಬಾರಿಸಿದ್ದರು. ಈ ಮೂಲಕ ಅವರು ೩೫೨೦ ಟಿ೨೦ ಅಂತಾರಾಷ್ಟ್ರೀಯ ರನ್‌ಗಳನ್ನು ಬಾರಿಸಿದ ದಾಖಲೆಯನ್ನು ಸೃಷ್ಟಿಸಿದರು. ಅಲ್ಲದೆ, ಈ ಮಾದರಿಯಲ್ಲಿ ಗರಿಷ್ಠ ರನ್‌ಗಳನ್ನು ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ನ್ಯೂಜಿಲೆಂಡ್ ತಂಡದ ಮಾರ್ಟಿನ್ ಗಪ್ಟಿಲ್ ೩೪೯೭ ರನ್ ಬಾರಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಇದರೊಂದಿಗೆ ರೋಹಿತ್ ಅವರು ೩೫೦೦ ರನ್‌ಗಳ ಮೈಲುಗಲ್ಲನ್ನೂ ದಾಟಿದರು.
ಇದೇ ವೇಳೆ ರೋಹಿತ್ ಏಷ್ಯಾ ಕಪ್‌ನಲ್ಲಿ ಅತ್ಯಧಿಕ ಪಂದ್ಯವಾಡಿದ ದಾಖಲೆಯನ್ನೂ ತಮ್ಮೆಸರಿಗೆ ಬರೆಸಿಕೊಂಡರು. ರೋಹಿತ್ ಈಗ ೨೯ ಏಷ್ಯಾ ಕಪ್ ಪಂದ್ಯಗಳನ್ನು ಆಡಿದ್ದಾರೆ. ಈ ಹಿಂದೆ ಈ ದಾಖಲೆ ಶ್ರೀಲಂಕಾ ತಂಡದ ಮಹೆಲಾ ಜಯವರ್ಧನೆ ಅವರ ಹೆಸರಿನಲ್ಲಿತ್ತು. ಅವರು ಒಟ್ಟು ೨೮ ಪಂದ್ಯಗಳನ್ನು ಆಡಿದ್ದಾರೆ.
29 ಪಂದ್ಯಗಳಲ್ಲಿ 27 ಇನಿಂಗ್ಸ್ ಬ್ಯಾಟ್ ಮಾಡಿರುವ ರೋಹಿತ್ ಶರ್ಮಾ 40.68 ಸರಾಸರಿಯಲ್ಲಿ 895 ರನ್ ಗಳಿಸಿದ್ದಾರೆ. ಅದರಲ್ಲೊಂದು ಶತಕವಿದೆ.
ಇದನ್ನೂ ಓದಿ | INDvsENG ODI : ಅಫ್ರಿದಿ ದಾಖಲೆಯನ್ನೂ ಪುಡಿಗಟ್ಟಿದ ರೋಹಿತ್ ಶರ್ಮ