ಹೈದರಾಬಾದ್: ಇಂಗ್ಲೆಂಡ್ ವಿರುದ್ಧ ಭಾರತ ತಂಡ ಜನವರಿ 25ರಂದು ಮೊದಲ ಟೆಸ್ಟ್ ಪಂದ್ಯ(
India vs England, 1st Test) ಆಡಲಿದೆ. ಈ ಮೂಲಕ 5 ಪಂದ್ಯಗಳ ಟೆಸ್ಟ್ ಸರಣಿಗೆ ಚಾಲನೆ ದೊರೆಯಲಿದೆ. ಈ ಸರಣಿಯಲ್ಲಿ ನಾಯಕ ರೋಹಿತ್ ಶರ್ಮ(Rohit Sharma) ಅವರಿಗೆ ದಾಖಲೆಯೊಂದನ್ನು ಬರೆಯುವ ಅವಕಾಶವಿದೆ.
ರೋಹಿತ್ ಶರ್ಮ ಅವರು 5 ಪಂದ್ಯಗಳ ಸರಣಿಯಲ್ಲಿ ಒಟ್ಟು 14 ಸಿಕ್ಸರ್ ಬಾರಿಸಿದರೆ. ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ಮೊದಲ ಆಟಗಾರ ಎನ್ನುವ ಹಿರಿಮೆಗೆ ಪಾತ್ರರಾಗಲಿದ್ದಾರೆ. ಸದ್ಯ ದಾಖಲೆ ಮಾಜಿ ಡ್ಯಾಶಿಂಗ್ ಆಟಗಾರ ವಿರೇಂದ್ರ ಸೆಹವಾಗ್ ಹೆಸರಿನಲ್ಲಿದೆ. ಸೆಹವಾಗ್ 104 ಟೆಸ್ಟ್ ಪಂದ್ಯ ಆಡಿ 91 ಸಿಕ್ಸರ್ ಬಾರಿಸಿ ಟೀಮ್ ಇಂಡಿಯಾ ಆಟಗಾರರ ಪೈಕಿ ಅಗ್ರಸ್ಥಾನದಲ್ಲಿದ್ದಾರೆ. ಮಹೇಂದ್ರ ಸಿಂಗ್ ಧೋನಿ 78 ಸಿಕ್ಸರ್ ಬಾರಿಸಿ ದ್ವಿತೀಯ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ IND vs ENG: ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಟೀಮ್ ಇಂಡಿಯಾದ ದಾಖಲೆ ಹೇಗಿದೆ?
ರೋಹಿತ್ ಶರ್ಮ ಅವರು 2 ಸಿಕ್ಸರ್ ಬಾರಿಸಿದರೆ ಧೋನಿ ದಾಖಲೆ ಪತನಗೊಳ್ಳಲಿದೆ. 14 ಸಿಕ್ಸರ್ ಬಾರಿಸಿದರೆ ವೀರೇಂದ್ರ ಸೆಹವಾಗ್ ದಾಖಲೆ ಪತನಗೊಳ್ಳಲಿದೆ. ರೋಹಿತ್ ಸದ್ಯ 54 ಪಂದ್ಯ ಆಡಿ 77 ಸಿಕ್ಸರ್ ಬಾರಿಸಿದ್ದಾರೆ.
ಟೆಸ್ಟ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಟಾಪ್-5 ಭಾರತೀಯ ಆಟಗಾರರು
ವಿರೇಂದ್ರ ಸೆಹವಾಗ್- 91 ಸಿಕ್ಸರ್
ಮಹೇಂದ್ರ ಸಿಂಗ್ ಧೋನಿ- 77 ಸಿಕ್ಸರ್
ರೋಹಿತ್ ಶರ್ಮ- 76 ಸಿಕ್ಸರ್
ಸಚಿನ್ ತೆಂಡೂಲ್ಕರ್-69 ಸಿಕ್ಸರ್
ಕಪಿಲ್ ದೇವ್-61 ಸಿಕ್ಸರ್
Rohit Sharma needs 14 more sixes to become the leading six hitter for India in Test cricket. pic.twitter.com/6D71iM5Ay1
— Mufaddal Vohra (@mufaddal_vohra) January 20, 2024
ಟೆಸ್ಟ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ವಿಶ್ ದಾಖಲೆ ಇಂಗ್ಲೆಂಡ್ ತಂಡದ ಸ್ಟಾರ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಹೆಸರಿನಲ್ಲಿದೆ. ಸ್ಟೋಕ್ಸ್ 97 ಪಂದ್ಯ ಆಡಿ 124 ಸಿಕ್ಸರ್ ಬಾರಿಸಿದ್ದಾರೆ. ಭಾರತ ವಿರುದ್ಧದ ಸರಣಿಯಲ್ಲಿ ನಾಯಕನಾಗಿರುವ ಅವರು ಈ ಸಿಕ್ಸರ್ಗಳ ಸಂಖ್ಯೆಯನ್ನು ಇನ್ನೂ ಹೆಚ್ಚಿಸುವ ಅವಕಾಶವಿದೆ.
ಟೆಸ್ಟ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಟಾಪ್-5 ಬ್ಯಾಟರ್ಗಳು
ಬೆನ್ ಸ್ಟೋಕ್ಸ್- 124 ಸಿಕ್ಸರ್
ಬ್ರೆಂಡನ್ ಮೆಕಲಮ್-107 ಸಿಕ್ಸರ್
ಆ್ಯಡಂ ಗಿಲ್ಕ್ರಿಸ್ಟ್-100 ಸಿಕ್ಸರ್
ಕ್ರಿಸ್ ಗೇಲ್-98 ಸಿಕ್ಸರ್
ಜಾಕ್ ಕ್ಯಾಲಿಸ್-97 ಸಿಕ್ಸರ್
ಭಾರತ ಪ್ರವಾಸದಲ್ಲಿ ಇಂಗ್ಲೆಂಡ್ ಒಟ್ಟು 5 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಸರಣಿಯ ಮೊದಲ ಪಂದ್ಯ ಜನವರಿ 25ರಿಂದ ಹೈದರಾಬಾದ್ನಲ್ಲಿ ನಡೆಯಲಿದೆ. ಬಳಿಕದ 4 ಟೆಸ್ಟ್ಗಳನ್ನು ಕ್ರಮವಾಗಿ ವಿಶಾಖಪಟ್ಟಣ (ಫೆ.2-6), ರಾಜ್ಕೋಟ್ (ಫೆ.15-19), ರಾಂಚಿ (ಫೆ. 23-27) ಮತ್ತು ಧರ್ಮಶಾಲಾದಲ್ಲಿ (ಮಾ.7-11) ಆಡಲಿದೆ. ಇಂಗ್ಲೆಂಡ್ ಪೂರ್ಣ ಪ್ರಮಾಣದ ತಂಡ ಪ್ರಕಟಿಸಿದೆ. ಆದರೆ ಭಾರತ ಕೇವಲ 2 ಟಸ್ಟ್ಗೆ ಮಾತ್ರ ತಂಡ ಪ್ರಕಟಿಸಿದೆ. ಇದರರ್ಥ ಅಂತಿಮ ಮೂರು ಪಂದ್ಯಗಳಿಗೆ ಬದಲಾವಣೆ ನಿಶ್ಚಿತ.