Site icon Vistara News

Rohit Sharma: ಬೌಂಡರಿ ಮೂಲಕವೂ ದಾಖಲೆ ಬರೆದ ಹಿಟ್​ಮ್ಯಾನ್​ ರೋಹಿತ್​

Rohit Sharma was among runs after being dismissed for ducks in the first two games

ಬೆಂಗಳೂರು: ಅಫಘಾನಿಸ್ತಾನ(India vs Afghanistan, 3rd T20I) ಹಾಗೂ ಭಾರತ ನಡುವೆ ಬುಧವಾರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಹಿಟ್​ಮ್ಯಾನ್​ ಖ್ಯಾತಿಯ ರೋಹಿತ್​ ಶರ್ಮಾ(Rohit Sharma) ಭರ್ಜರಿ ಬ್ಯಾಟಿಂಗ್​ ನಡೆಸಿ ಗಮನಸೆಳದರು. ಇದೇ ವೇಳೆ ಅವರು ಬೌಂಡಿಗಳ ಮೂಲಕ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ರೋಹಿತ್ ಈ ಪಂದ್ಯದಲ್ಲಿ 11 ಬಾರಿಸಿದ ವೇಳೆ ಟಿ20 ಕ್ರಿಕೆಟ್‌ನಲ್ಲಿ 1,000 ಬೌಂಡರಿಗಳನ್ನು ಪೂರೈಸಿದ ಮೈಲುಗಲ್ಲು ತಲುಪಿದರು. ಈ ಮೂಲಕ ಈ ಸಾಧನೆ ಮಾಡಿದ ಮೂರನೇ ಭಾರತೀಯ ಬ್ಯಾಟರ್ ಎನಿಸಿಕೊಂಡರು. ರೋಹಿತ್​ಗೂ ಮುನ್ನ ಕಿಂಗ್​ ಖ್ಯಾತಿಯ ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಭಾರತ ಪರ ಈ ಸಾಧನೆ ಮಾಡಿದ್ದರು.

ಶಿಖರ್ ಧವನ್ 1,090 ಬೌಂಡರಿ ಬಾರಿಸಿ ಟಿ20ಯಲ್ಲಿ ಅತಿ ಹೆಚ್ಚು ಬೌಂಡರಿ ಬಾರಿಸಿದ ಭಾರತೀಯ ಬ್ಯಾಟರ್​ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡದಿದ್ದಾರೆ. 1074 ಬೌಂಡರಿ ಬಾರಿಸಿರುವ ಕೊಹ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. ವಿಶ್ವ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ಬೌಂಡರಿ ಬಾರಿದ ಆಟಗಾರನೆಂದರೆ ಇಂಗ್ಲೆಂಡ್​ನ ಅಲೆಕ್ಸ್ ಹೇಲ್ಸ್​. ಅವರು ಇದುವರೆಗೆ 1317* ಬೌಂಡರಿ ಬಾರಿಸಿದ್ದಾರೆ.

ಕೊಹ್ಲಿ ದಾಖಲೆ ಮುರಿದ ರೋಹಿತ್​


ಈ ಪಂದ್ಯದಲ್ಲಿ ರೋಹಿತ್​ 44ರನ್​ ಗಳಿಸುತ್ತಿದ್ದಂತೆ ಟೀಮ್​ ಇಂಡಿಯಾದ ಮಾಜಿ ನಾಯಕ ವಿರಾಟ್​ ಕೊಹ್ಲಿಯ ದಾಖಲೆಯೊಂದನ್ನು ಮುರಿದರು. ನಾಯಕನಾಗಿ ಭಾರತ ಪರ ಅತ್ಯಧಿಕ ರನ್​ಗಳಿಸಿದ ಆಟಗಾರನಾಗಿ ಮೂಡಿಬಂದರು. ಕೊಹ್ಲಿ ನಾಯಕನಾಗಿ 1570 ರನ್​ ಬಾರಿಸಿದ್ದರು. ಆದರೆ, ಈಗ ರೋಹಿತ್​ ಈ ಮೊತ್ತವನ್ನು ಹಿಂದಿಕ್ಕಿ ದಾಖಲೆಯನ್ನು ತಮ್ಮ ಹೆಸರಿಗೆ ಬರೆದಿದ್ದಾರೆ.

ಇದನ್ನೂ ಈಗಾಗಲೇ 2 ಶೂನ್ಯ ಸುತ್ತಿದ್ದೇನೆ ಎಂದು ಅಂಪೈರ್ ಕಾಲೆಳೆದ ರೋಹಿತ್​; ವಿಡಿಯೊ ವೈರಲ್

ಜತೆಯಾಟದ ದಾಖಲೆ


ರಿಂಕು ಮತ್ತು ರೋಹಿತ್​ ಸೇರಿಕೊಂಡು 5ನೇ ವಿಕೆಟ್​ಗೆ ಅಜೇಯ 190 ರನ್​ ಜತೆಯಾಟ ನಡೆಸಿ ಭಾರತದ ಬೃಹತ್​ ಮೊತ್ತಕ್ಕೆ ಕಾರಣರಾದರು. ಜತೆಗೆ ಈ ಜೋಡಿ ಯಾವುದೇ ವಿಕೆಟ್​ಗೆ ಭಾರತ ಪರ ಅತ್ಯಧಿಕ ಜತೆಯಾಟ ನಡೆಸಿದ ಮೊದಲ ಜೋಡಿ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಸಂಜು ಸ್ಯಾಮ್ಸನ್​ ಮತ್ತು ದೀಪಕ್​ ಹೂಡಾ ಹಸರಿನಲ್ಲಿತ್ತು. ಈ ಜೋಡಿ ಐರ್ಲೆಂಡರ್​ ವಿರುದ್ಧ 2022ರಲ್ಲಿ 176 ರನ್​ಗಳ ಜತೆಯಾಟ ನಡೆಸಿತ್ತು.

ಶತಕದ ದಾಖಲೆ


ರೋಹಿತ್​ ಶರ್ಮ ಈ ಪಂದ್ಯದಲ್ಲಿ ಕೇವಲ 69 ಎಸೆತಗಳಿಂದ ಸೊಗಸಾದ 8 ಸಿಕ್ಸರ್​ ಮತ್ತು 11 ಬೌಂಡರಿ ಸಿಡಿಸಿ ಅಜೇಯ 121 ರನ್​ ಬಾರಿಸಿ ಶತಕ ಪೂರ್ತಿಗೊಳಿಸಿದರು. ರೋಹಿತ್​ ಈ ಶತಕ ಬಾರಿಸುವ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ಶತಕ ಬಾರಿಸಿದ ಮೊದಲ ಆಟಗಾರ ಎಂಬ ದಾಖಲೆ ಬರೆದರು. ಇದು ರೋಹಿತ್​ ಅವರ 5ನೇ ಅಂತಾರಾಷ್ಟ್ರೀಯ ಟಿ20 ಶತಕ. 4 ಶತಕ ಬಾರಿಸಿದ ಸೂರ್ಯಕುಮಾರ್ ಯಾದವ್​ ಮತ್ತು ಆಸೀಸ್​ ಆಲ್​ರೌಂಡರ್​ ಗ್ಲೆನ್​ ಮ್ಯಾಕ್ಸ್​ವೆಲ್​ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.

Exit mobile version