ಮುಂಬಯಿ: ಭಾರತದ ನಾಯಕ ರೋಹಿತ್ ಶರ್ಮಾ (Rohit Sharma) ಪ್ರಸ್ತುತ ನಡೆಯುತ್ತಿರುವ ಐರ್ಲೆಂಡ್ ಪ್ರವಾಸದಿಂದ ವಿರಾಮ ತೆಗೆದುಕೊಂಡಿರಬಹುದು. ಆದರೆ ಏಷ್ಯಾ ಕಪ್ ಮತ್ತು ವಿಶ್ವ ಕಪ್ ಸೇರಿದಂತೆ ಬಿಡುವಿಲ್ಲದ ಟೂರ್ನಿಗಳು ಇರುವ ಕಾರಣ ಅವರು ಸುಮ್ಮನೆ ಕುಳಿತಿಲ್ಲ. ಮುಂಬಯಿಯಲ್ಲಿ ಅವರು ಅಭ್ಯಾಸ ಆರಂಭಿಸಿಕೊಂಡಿದ್ದಾರೆ. ನೆಟ್ನಲ್ಲಿ ಬೆವರು ಸುರಿಸುತ್ತಿರುವ ಅವರು ಮುಂದಿನ ಪ್ರಮುಖ ಟೂರ್ನಿಗಳಿಗಾಗಿ ಅವರು ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ.
ಏಷ್ಯಾಕಪ್ ಮತ್ತು ಏಕದಿನ ವಿಶ್ವಕಪ್ 2023 ಸಮೀಪಿಸುತ್ತಿದ್ದಂತೆ ತನ್ನ ಫಾರ್ಮ್ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಸತತವಾಗಿ ಅಭ್ಯಾಸ ಆರಂಭಿಸಿದ್ದಾರೆ. ಮುಂಬೈಕರ್ ನೆಟ್ನಲ್ಲಿ ಓಡುತ್ತಿರುವ ಚಿತ್ರಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಅಡಿಡಾಸ್ ಶಾರ್ಟ್ಸ್, ಜಾಗಿಂಗ್ ಶೂಗಳು ಮತ್ತು ಕ್ಯಾಶುಯಲ್ ಟೀಯಲ್ಲಿ ರೋಹಿತ್ ಆರಾಮದಾಯಕವಾಗಿ ಕಾಣುತ್ತಿದ್ದರು.
ಬೆಂಗಳೂರಿಗೆ ಬರಲಿದ್ದಾರೆ ನಾಯಕ
ಆಗಸ್ಟ್ 24ರಂದು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಏಷ್ಯಾ ಕಪ್ಗೆ ಆಯ್ಕೆಯಾಗಿರುವ ತಂಡಕ್ಕೆ ಶಿಬಿರ ಆರಂಭವಾಗಲಿದೆ. ಅಂತೆಯೇ ಆಗಸ್ಟ್ 23ರಂದು ರೋಹಿತ್ ಶರ್ಮಾ ಸೇರಿದಂತೆ ಪ್ರಮುಖ ಆಟಗಾರರು ಆಗಮಿಸಲಿದ್ದಾರೆ.
ಎನ್ಸಿಎನಲ್ಲಿ ಆಗಸ್ಟ್ 24 ರಿಂದ 29 ರವರೆಗೆ ಒಂದು ವಾರದ ಶಿಬಿರ ನಡೆಯಲಿದೆ. ಏಷ್ಯಾಕಪ್ನಲ್ಲಿ ಭಾಗವಹಿಸುವ ಆಟಗಾರರು ಮುಂಬರುವ ಪಂದ್ಯಾವಳಿಗೆ ತಮ್ಮನ್ನು ಸಂಪೂರ್ಣವಾಗಿ ಸಿದ್ಧಪಡಿಸಲು ಫಿಟ್ನೆಸ್ ಅಭ್ಯಾಸ ಮತ್ತು ಮತ್ತಿತ ಸಿದ್ದತೆಗಳಿಗೆ ಒಳಗಾಗಲಿದ್ದಾರೆ. ಏಷ್ಯಾಕಪ್ಗೂ ಮುನ್ನ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಬಿಸಿಸಿಐ ವಿರಾಮ ನೀಡಿತ್ತು. ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ, ಇವರಿಬ್ಬರು ಐರ್ಲೆಂಡ್ ಸರಣಿಯ ಭಾಗವಾಗಿಲ್ಲ., ಅಲ್ಲಿ ಬಿಸಿಸಿಐ ಎರಡನೇ ಹಂತದ ತಂಡವನ್ನು ಕಳುಹಿಸಿದೆ.
ಇದನ್ನೂ ಓದಿ : Virat Kohli : ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾಗೆ ಮತ್ತೆ ದೀರ್ಘ ಅವಧಿಯ ರಜೆ! ಯಾಕೆ ಗೊತ್ತೇ?
2024ರ ಟಿ 20 ವಿಶ್ವಕಪ್ಗೆ ಹೋಗುವ ಹಾದಿಯಲ್ಲಿ ಯುವ ಆಟಗಾರರಿಗೆ ಅವಕಾಶ ನೀಡಲು ಆಯ್ಕೆದಾರರು ರೋಹಿತ್ ಮತ್ತು ಕೊಹ್ಲಿಗೆ ವಿಶ್ರಾಂತಿ ಕಲ್ಪಿಸಿದ್ದಾರೆ. ಈ ಇಬ್ಬರೂ ಈ ವರ್ಷ ಟಿ20 ಪಂದ್ಯವನ್ನು ಆಡಿಲ್ಲ. 2022ರ ಟಿ 20 ವಿಶ್ವಕಪ್ನಲ್ಲಿ ಭಾರತವನ್ನು ಮುನ್ನಡೆಸಿದ ರೋಹಿತ್ ಶರ್ಮಾ ಬದಲಿಗೆ ಹಾರ್ದಿಕ್ ಪಾಂಡ್ಯ ಅವರನ್ನು ಟಿ 20 ಐ ತಂಡದ ನಾಯಕರನ್ನಾಗಿ ನೇಮಿಸಲಾಗಿದೆ.
ಆಗಸ್ಟ್ 21ರಂದು ಆಯ್ಕೆ ಸಭೆ
ಏಷ್ಯಾ ಕಪ್ ತಂಡದ ಆಯ್ಕೆ ಸಭೆ ಆಗಸ್ಟ್ 21 ರ ಸೋಮವಾರ ನಿಗದಿಯಾಗಿದ್ದು, ಇದು 2023ರ ಏಕದಿನ ವಿಶ್ವಕಪ್ಗೂ ಅಂತಿಮ ರಿಹರ್ಸಲ್ ಎನ್ನಲಾಗುತ್ತಿದೆ. ಏಷ್ಯಾಕಪ್ 2023 ಆಗಸ್ಟ್ 30ರಂದು ಮುಲ್ತಾನ್ನಲ್ಲಿ ಪ್ರಾರಂಭವಾಗಲಿದ್ದು, ಸೆಪ್ಟೆಂಬರ್ 2 ರಂದು ಭಾರತ ತನ್ನ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ. ಈ ಹಂತದಲ್ಲಿ (ಆಗಸ್ಟ್ 21 ರಂದು) ಬಿಸಿಸಿಐ ಆಯ್ಕೆದಾರರು ಏಷ್ಯಾ ಕಪ್ 2023 ತಂಡವನ್ನು ಮಾತ್ರ ಆಯ್ಕೆ ಮಾಡುತ್ತಾರೆ ಎಂದು ನಿರೀಕ್ಷಿಸಲಾಗಿದೆ. ಬಳಿಕ 2023ರ ವಿಶ್ವಕಪ್ ತಂಡವನ್ನು ಆಯ್ಕೆ ನಡೆಯಲಿದೆ.