Site icon Vistara News

Rohit Sharma : ರೋಹಿತ್​​ ಶರ್ಮಾಗೆ ಗಾಯ; ವಿಶ್ವ ಕಪ್​ ಮೊದಲೇ ಭಾರತ ತಂಡಕ್ಕೆ ಸಮಸ್ಯೆ?

Rohit Sharma

ಬೆಂಗಳೂರು: ಕೋಲ್ಕತಾ ನೈಟ್ ರೈಡರ್ಸ್ (KKR) ವಿರುದ್ಧದ ಪಂದ್ಯದ ವೇಳೆ ರೋಹಿತ್ ಶರ್ಮಾ (Rohit Sharma) ಮೈದಾನದಿಂದ ಹೊರಗುಳಿಯಲು ಏನು ಕಾರಣ ಎಂಬುದನ್ನು ಮುಂಬೈ ಇಂಡಿಯನ್ಸ್ (Mumbai Indians ) ಲೆಗ್ ಸ್ಪಿನ್ನರ್ ಪಿಯೂಷ್ ಚಾವ್ಲಾ (Piyush Chawla) ಬಹಿರಂಗಪಡಿಸಿದ್ದಾರೆ. ರೋಹಿತ್ ಶರ್ಮಾ ಬೆನ್ನುನೋವಿನಿಂದ ಬಳಲುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಹೀಗಾಗಿ 2024 ರ ಟಿ 20 ವಿಶ್ವಕಪ್​ಗೆ ಅವರ ಲಭ್ಯತೆಯ ಬಗ್ಗೆ ಅನುಮಾನಗಳನ್ನು ಹುಟ್ಟಿವೆ.

ಮುಂಬೈ ಇಂಡಿಯನ್ಸ್ ಮ್ಯಾನೇಜ್ಮೆಂಟ್ ರೋಹಿತ್ ಶರ್ಮಾ ಅವರನ್ನು ಪ್ಲೇಯಿಂಗ್ ಇಲೆವೆನ್​ನಲ್ಲಿ ಸೇರಿಸುವ ಬದಲು ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಯ್ಕೆ ಮಾಡಿದೆ. ಟಾಸ್ ವೇಳೆ ರೋಹಿತ್ ಅನುಪಸ್ಥಿತಿಯನ್ನು ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ವಿವರಿಸಲಿಲ್ಲ. ವಿಶೇಷವೆಂದರೆ 37 ವರ್ಷದ ಬ್ಯಾಟರ್ ಪ್ರಸ್ತುತ ಪಂದ್ಯಾವಳಿಯಲ್ಲಿ ಮುಂಬೈ ಪರ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಮುಂಬೈ ಇಂಡಿಯನ್ಸ್​ ಮಾಜಿ ನಾಯಕ ರನ್ ಚೇಸ್ ಸಮಯದಲ್ಲಿ 12 ಎಸೆತಗಳಲ್ಲಿ ಒಂದು ಸಿಕ್ಸರ್ ಸೇರಿದಂತೆ 11 ರನ್ ಮಾತ್ರ ಗಳಿಸಿದರು.

ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್ 24 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಕೆಕೆಆರ್ ವಿರುದ್ಧ ಮುಂಬೈ ಇಂಡಿಯನ್ಸ್ 12 ವರ್ಷಗಳ ಬಳಿಕ ಮೊದಲ ಸೋಲು ಅನುಭವಿಸಿದೆ. ಪಂದ್ಯದ ನಂತರದ ಸಂದರ್ಶನದಲ್ಲಿ, ಪಿಯೂಷ್ ಚಾವ್ಲಾ ಅವರು ರೋಹಿತ್ ಶರ್ಮಾ ಬೆನ್ನುನೋವಿನ ವಿಷಯ ಹೇಳಿದರು. ಹೀಗಾಗಿ ಅವರು ಆರಂಭಿಕ ಪ್ಲೇಯಿಂಗ್ ಇಲೆವೆನ್​ನಿಂದ ಹೊರಗುಳಿದಿದ್ದಾರೆ ಎಂದು ಬಹಿರಂಗಪಡಿಸಿದರು. ರೋಹಿತ್ ಅವರನ್ನು ಇಂಪ್ಯಾಕ್ಟ್​ ಪ್ಲೇಯರ್ ಆಗಿ ತರಲು ಇದು ಮುನ್ನೆಚ್ಚರಿಕೆ ಕ್ರಮವಾಗಿತ್ತು ಎಂದು ಎಂದು ಚಾವ್ಲಾ ಹೇಳಿದ್ದಾರೆ.

“ಅವರಿಗೆ ಸ್ವಲ್ಪ ಬೆನ್ನುನೋವು ಇತ್ತು. ಇದು ಕೇವಲ ಮುನ್ನೆಚ್ಚರಿಕೆಯ ವಿಷಯವಾಗಿತ್ತು, “ಎಂದು ಚಾವ್ಲಾ ನುಡಿದರು.

ರೋಹಿತ್ ಶರ್ಮಾ ಈ ಹಿಂದೆಯೂ ಬೆನ್ನುನೋವಿನಿಂದ ಬಳಲುತ್ತಿದ್ದರು. ಮಾರ್ಚ್​ನಲ್ಲಿ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್​ನಲ್ಲಿ ಅನುಭವಿ ಆರಂಭಿಕ ಆಟಗಾರ ಬೆನ್ನುನೋವಿನಿಂದಾಗಿ ಫೀಲ್ಡಿಂಗ್ ಮಾಡಲಿಲ್ಲ. ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ದಿನದಾಟದ ಮೊದಲ ಸೆಷನ್​​ನಲ್ಲಿ ಬಿಸಿಸಿಐ ಈ ಸುದ್ದಿಯನ್ನು ದೃಢಪಡಿಸಿತ್ತು.

ಇದನ್ನೂ ಓದಿ: IPL 2024 : ಮುಂಬೈ ಬ್ಯಾಟರ್​​ಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ ಎಂದು ಮಾಲೀಕರಿಗೆ ಸಲಹೆ ನೀಡಿದ ಮಾಜಿ ಕ್ರಿಕೆಟಿಗ

ಐಪಿಎಲ್ 2024 ರ ಪ್ಲೇಆಫ್ ಸ್ಪರ್ಧೆಯಿಂದ ಮುಂಬೈ ಇಂಡಿಯನ್ಸ್ ಅಕ್ಷರಶಃ ಹೊರಗುಳಿದಿರುವುದರಿಂದ ರೋಹಿತ್ ಶರ್ಮಾ ಈಗ ಅಗತ್ಯ ವಿಶ್ರಾಂತಿ ಆರಿಸಿಕೊಳ್ಳುವ ಸಾಧ್ಯತೆಯಿದೆ. ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡವು 11 ಪಂದ್ಯಗಳಲ್ಲಿ ಎಂಟನೇ ಸೋಲನ್ನು ಅನುಭವಿಸಿದೆ. ಅವರು ಪ್ರಸ್ತುತ 6 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್​ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಐಪಿಎಲ್ 2024 ರಲ್ಲಿ ಅವರು ಗರಿಷ್ಠ 12 ರನ್ ಗಳಿಸಲು ಸಾಧ್ಯವಿದೆ.

ಈ ಋತುವಿನಲ್ಲಿ ಪೂರಕವಾಗಿರಲಿಲ್ಲ: ಪಿಯೂಷ್ ಚಾವ್ಲಾ

ತಂಡವು ಎಲ್ಲಾ ವಿಭಾಗಗಳಲ್ಲಿ ಹೆಣಗಾಡಿದೆ ಎಂದು ಪಿಯೂಷ್ ಚಾವ್ಲಾ ಹೇಳಿದರು. ಈ ಋತುವಿನಲ್ಲಿ ತಮ್ಮ ತಂಡ ಉತ್ತಮವಾದುದನನ್ಉ ಪಡೆಯಲಿಲ್ಲ ಎಂದು ಹೇಳಿದರು. ಚಾವ್ಲಾ ನಿರಾಶೆಯನ್ನು ಒಪ್ಪಿಕೊಂಡರು. ಆದರೆ ಅಂತಹ ಸಂದರ್ಭಗಳಲ್ಲಿ ಸ್ವೀಕಾರದ ಮಹತ್ವ ಒತ್ತಿ ಹೇಳಿದರು.

ಇದು ನಮಗೆ ಮೊದಲ ಬಾರಿಗೆ ಅಥವಾ ಬೇರೆ ಯಾವುದೇ ತಂಡಕ್ಕೆ ಎರಡನೇ ಬಾರಿಗೆ ಸಂಭವಿಸುತ್ತಿಲ್ಲ. ಇದು ಯಾರಿಗಾದರೂ ಸಂಭವಿಸಬಹುದು ಎಂದು ಚಾವ್ಲಾ ಹೇಳಿದ್ದಾರೆ.

” ವಾಂಖೆಡೆಯಲ್ಲಿ 170 ರನ್​ಗಳ ಗುರಿ ಬೆನ್ನಟ್ಟುವುದು ಸುಲಭ ಎಂದು ಜನರು ಭಾವಿಸಿದ್ದರು. ಆದರೆ ಇಂದು ವಿಕೆಟ್ ವಿಭಿನ್ನವಾಗಿತ್ತು. ಸ್ವಲ್ಪ ಜಿಗುಟುತನದಿಂದ ಕೂಡಿತ್ತು. ಚೆಂಡು ನಿಂತು ಬರುತ್ತಿತ್ತು. ಇಂಥ ವಿಷಯಗಳು ಸಂಭವಿಸಬಹುದು. ಇದು ನೋವುಂಟುಮಾಡುತ್ತದೆ, ಆದರೆ ನೀವು ಅದನ್ನು ಒಪ್ಪಿಕೊಳ್ಳಬೇಕು.”

ಮುಂಬೈ ಮೂಲದ ತಂಡವು ಮೇ 6 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ತನ್ನ ಮುಂದಿನ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ (ಎಸ್ ಆರ್ ಎಚ್) ವಿರುದ್ಧ ಸೆಣಸಲಿದೆ.

Exit mobile version