ಪೋರ್ಟ್ ಆಫ್ ಸ್ಪೈನ್: ವಿಂಡೀಸ್(IND vs WI) ವಿರುದ್ಧ ಸಾಗುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ದಿನ ಅರ್ಧಶತಕ ಬಾರಿಸಿದ ರೋಹಿತ್ ಶರ್ಮ(rohit sharma) ಕೆಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಟೂರ್ನಿಯಲ್ಲಿ(World Test Championships) 2 ಸಾವಿರ ರನ್ ಪೂರ್ತಿಗೊಳಿಸಿದ ಮೊದಲ ಭಾರತೀಯ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಜತೆಗೆ ಆರಂಭಿಕನಾಗಿ ಭಾರತ ಪರ 2 ಸಾವಿರ ರನ್ ಬಾರಿಸಿದ ಆಟಗಾರನಾಗಿಯೂ ಹೊರಹೊಮ್ಮಿದ್ದಾರೆ.
ಪೋರ್ಟ್ ಆಫ್ ಸ್ಪೇನ್‌ನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ಗುರುವಾರ ಆರಂಭವಾದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಭಾರತ ಸದ್ಯ ಮೊದಲ ದಿನದಾಟಕ್ಕೆ 4 ವಿಕೆಟ್ ಕಳೆದುಕೊಂಡು 288 ರನ್ ಬಾರಿಸಿದೆ. ಕೊಹ್ಲಿ(87*) ಮತ್ತು ಜಡೇಜಾ(36*) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಇನಿಂಗ್ಸ್ ಆರಂಭಿಸಿದ ಭಾರತ ತಂಡಕ್ಕೆ ಜೈಸ್ವಾಲ್ ಮತ್ತು ರೋಹಿತ್ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್‌ಗೆ 139 ರನ್‌ಗಳ ಕೊಡುಗೆ ನೀಡಿದರು. ಉಭಯ ಆಟಗಾರರ ಮೊದಲ ಪಂದ್ಯದ ಬ್ಯಾಟಿಂಗ್ ಪ್ರದರ್ಶನ ಈ ಪಂದ್ಯದಲ್ಲಿಯೂ ಕಂಡುಬಂದಿತು. ಆ ಬಳಿಕ ವಿರಾಟ್ ಕೂಡ ಉತ್ತಮ ಬ್ಯಾಟಿಂಗ್ ನಡೆಸಿ ಅಜೇಯ ಅರ್ಧಶತಕ ಬಾರಿಸಿ ಮಿಂಚಿದರು. ಕೊಹ್ಲಿ(87*) ಮತ್ತು ಜಡೇಜಾ(36*) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
2019ರಲ್ಲಿ ಭಾರತ ಟೆಸ್ಟ್ ತಂಡದಲ್ಲಿ ಆರಂಭಿಕನಾಗಿ ಬಡ್ತಿ ಪಡೆದೆ ರೋಹಿತ್ ಶರ್ಮಾ ಇದುವರೆಗೆ ಆರಂಭಿನಾಗಿ 7 ಶತಕ ಹಾಗೂ 5 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಆ ಮೂಲಕ 2000 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ.
ಇದನ್ನೂ ಓದಿ ind vs wi : ಬ್ಯಾಟಿಂಗ್ ಸಲಹೆಗಳನ್ನು ಹಂಚಿಕೊಂಡ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ
Milestone 🔓 – 2000 Test runs as an opener and counting for Captain @ImRo45 👏👏#WIvIND pic.twitter.com/rwbzgQ8v3b
— BCCI (@BCCI) July 20, 2023
ಜೈಸ್ವಾಲ್ ಮತ್ತು ರೋಹಿತ್ ಮೊದಲ ವಿಕೆಟ್‌ಗೆ 100ಕ್ಕೂ ಹೆಚ್ಚಿನ ರನ್‌ಗಳ ಜತೆಯಾಟವಾಡುವ ಮೂಲಕ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ಸತತ ಎರಡನೇ ಬಾರಿ ಮೊದಲನೇ ವಿಕೆಟ್‌ಗೆ 100ಕ್ಕೂ ಹೆಚ್ಚಿನ ರನ್‌ಗಳ ಜತೆಯಾಟವಾಡಿದ ಭಾರತದ ಆರನೇ ಜೋಡಿ ಎನಿಸಿಕೊಂಡರು. ರೋಹಿತ್ ಮತ್ತು ಜೈಸ್ವಾಲ್ ಮೊದಲ ಪಂದ್ಯದಲ್ಲಿ ಬರೋಬ್ಬರಿ 229 ರನ್‌ಗಳ ಜತೆಯಾಟ ನಡೆಸಿದ್ದರು. ದ್ವಿತೀಯ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ರೋಹಿತ್ 143 ಎಸೆತಗಳಿಂದ 80 ರನ್ ಬಾರಿಸಿದರು. ಈ ಇನಿಂಗ್ಸ್ನಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಯಿತು.
ಸೆಹವಾಗ್ ದಾಖಲೆ ಮುರಿದ ಕೊಹ್ಲಿ
ಆರಂಭದಲ್ಲಿ ನಿಧಾನಗತಿಯ ಬ್ಯಾಟಿಂಗ್ಗೆ ಒತ್ತು ಕೊಟ್ಟ ಕೊಹ್ಲಿ (virat kohli)ಮೊದಲ ರನ್ ಗಳಿಸಲು 21 ಎಸೆತಗಳನ್ನು ತೆಗೆದುಕೊಂಡರು. 21 ಎಸೆತದ ಬಳಿ ಬೌಂಡರಿ ಬಾರಿಸಿ ಖಾತೆ ತೆರೆದರು. 32 ರನ್ ಗಳಿಸಿದ ವೇಳೆ ವೀರೇಂದ್ರ ಸೆಹವಾಗ್(8586 ರನ್)(virender sehwag) ಅವರ ದಾಖಲೆಯೊಂದನ್ನು ಹಿಂದಿಕ್ಕಿದರು. ಸದ್ಯ ವಿರಾಟ್ 8642* ರನ್ ಬಾರಿಸಿದ್ದಾರೆ.