Site icon Vistara News

Rohit Sharma: ಮಹೇಂದ್ರ ಸಿಂಗ್​ ಧೋನಿ ದಾಖಲೆ ಮುರಿದ ರೋಹಿತ್​ ಶರ್ಮ

Rohit Sharma hits a six

ರಾಜ್​ಕೋಟ್​: ಇಂಗ್ಲೆಂಡ್​ ವಿರುದ್ಧದ ಮೂರನೇ ಟೆಸ್ಟ್​(India vs England 3rd Test) ಪಂದ್ಯದಲ್ಲಿ ಶತಕ ಬಾರಿಸಿ ಭಾರತ ತಂಡಕ್ಕೆ ಆಸರೆಯಾದ ನಾಯಕ ರೋಹಿತ್​ ಶರ್ಮಾ(Rohit Sharma) ಅವರು ಸಿಕ್ಸರ್​ ಮೂಲಕ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ಇದೇ ವೇಳೆ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ(Mahendra Singh Dhoni) ಅವರ ದಾಖಲೆ ಪತನಗೊಂಡಿತು.

ರಾಜ್​ಕೋಟ್​ನ ನಿರಂಜನ್​ ಶಾ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಟೆಸ್ಟ್​ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಭಾರತಕ್ಕೆ ಮಾರ್ಕ್​ ವುಡ್​ ಆರಂಭದಲ್ಲೇ ಅವಳಿ ಆಘಾತವಿಕ್ಕಿದರು. ಯಶಸ್ವಿ ಜೈಸ್ವಾಲ್​ ಮತ್ತು ಶುಭಮನ್​ ಗಿಲ್​ ವಿಕೆಟ್​ ಕಿತ್ತರು. ಜೈಸ್ವಾಲ್​ 10 ರನ್​ ಗಳಿಸಿದರೆ, ಶುಭಮನ್​ ಗಿಲ್​ ಖಾತೆಯೇ ತೆರೆಯದೆ ಶೂನ್ಯ ಸುತ್ತಿದರು. ಈ ವಿಕೆಟ್​ ಪತನದ ಬೆನ್ನಲ್ಲೇ ರಜತ್​ ಪಾಟಿದಾರ್​ ಕೂಡ 5 ರನ್​ ಗಳಿಸಿ ವಿಕೆಟ್​ ಕೈಚೆಲ್ಲಿದರು.

33ಕ್ಕೆ 3 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಭಾರತ ತಂಡಕ್ಕೆ ನೆರವಾದದ್ದು ನಾಯಕ ರೋಹಿತ್​ ಶರ್ಮಾ ಮತ್ತು ರವೀಂದ್ರ ಜಡೇಜಾ. ಉಭಯ ಆಟಗಾರರು ಕೂಡ ಆಂಗ್ಲರ ಬೌಲಿಂಗ್​ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಂತು ಉತ್ತಮ ಇನಿಂಗ್ಸ್​ ಕಟ್ಟುತ್ತಿದ್ದಾರೆ. ರೋಹಿತ್​ ಸದ್ಯ 102 ರನ್​ ಪೂರ್ತಿಗೊಳಿಸಿದರೆ, ಜಡೇಜಾ ಅರ್ಧಶತಕ ಬಾರಿಸಿದ್ದಾರೆ. ಉಭಯ ಆಟಗಾರತು ಕೂಡ ಬ್ಯಾಟಿಂಗ್​ ನಡೆಸುತ್ತಿದ್ದು. ಇವರ ತಾಳ್ಮೆಯುತ ಬ್ಯಾಟಿಂಗ್​ನಿಂದಾಗಿ ತಂಡ ಆರಂಭಿಕ ಆಘಾತದಿಂದ ಚೇತರಿಕೆ ಕಂಡಿದೆ.

ಸಿಕ್ಸರ್​ ದಾಖಲೆ ಬರೆದ ರೋಹಿತ್​


ಈ ಪಂದ್ಯದಲ್ಲಿ 2 ಸಿಕ್ಸರ್​ ಬಾರಿಸುವ ಮೂಲಕ ರೋಹಿತ್​ ಶರ್ಮ ಅವರು ಟೆಸ್ಟ್​ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಸಿಕ್ಸರ್​ ಬಾರಿಸಿದ ಭಾರತದ 2ನೇ ಆಟಗಾರ ಎನಿಸಿಕೊಂಡರು. ಈ ಹಿಂದೆ 78 ಸಿಕ್ಸರ್ ಬಾರಿಸಿ ದ್ವಿತೀಯ ಸ್ಥಾನದಲ್ಲಿದ್ದ ಧೋನಿ ಇದೀಗ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ರೋಹಿತ್​ ಸದ್ಯ 79* ಸಿಕ್ಸರ್​ ದಾಖಲಿಸಿದ್ದಾರೆ. ಮಾಜಿ ಡ್ಯಾಶಿಂಗ್​ ಆಟಗಾರ ವಿರೇಂದ್ರ ಸೆಹವಾಗ್​ ಅಗ್ರಸ್ಥಾನದಲ್ಲಿದ್ದಾರೆ. ಸೆಹವಾಗ್ 104 ಟೆಸ್ಟ್​ ಪಂದ್ಯ ಆಡಿ 91 ಸಿಕ್ಸರ್​ ಬಾರಿಸಿದ್ದಾರೆ. ಸೆಹವಾಗ್​ ದಾಖಲೆ ಮುರಿಯಲು ರೋಹಿತ್​ಗೆ ಇನ್ನು 13 ಸಿಕ್ಸರ್​ಗಳ ಅಗತ್ಯವಿದೆ. ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್​ ಅವರು 69 ಸಿಕ್ಸರ್​ ಬಾರಿಸಿ ನಾಲ್ಕನೇ ಸ್ಥಾನ, ಕಪಿಲ್​ ದೇವ್​ 61 ಸಿಕ್ಸರ್​ ಬಾರಿಸಿ 5ನೇ ಸ್ಥಾನ ಪಡೆದಿದ್ದಾರೆ.

ಟೆಸ್ಟ್​ನಲ್ಲಿ ಅತಿ ಹೆಚ್ಚು ಸಿಕ್ಸರ್​ ಬಾರಿಸಿದ ಟಾಪ್​-5 ಭಾರತೀಯ ಆಟಗಾರರು

ಆಟಗಾರಸಿಕ್ಸರ್​
ವಿರೇಂದ್ರ ಸೆಹವಾಗ್​91
ರೋಹಿತ್​ ಶರ್ಮ79*
ಮಹೇಂದ್ರ ಸಿಂಗ್​ ಧೋನಿ78
ಸಚಿನ್​ ತೆಂಡೂಲ್ಕರ್69
ಕಪಿಲ್​ ದೇವ್61

ಟೆಸ್ಟ್​ನಲ್ಲಿ ಅತಿ ಹೆಚ್ಚು ಸಿಕ್ಸರ್​ ಬಾರಿಸಿದ ವಿಶ್ ದಾಖಲೆ ಇಂಗ್ಲೆಂಡ್​ ತಂಡದ ಸ್ಟಾರ್​ ಆಲ್ ​ರೌಂಡರ್ ಬೆನ್​ ಸ್ಟೋಕ್ಸ್​ ಹೆಸರಿನಲ್ಲಿದೆ. ಸ್ಟೋಕ್ಸ್​ 97 ಪಂದ್ಯ ಆಡಿ 128 ಸಿಕ್ಸರ್​ ಬಾರಿಸಿದ್ದಾರೆ. ಭಾರತ ವಿರುದ್ಧದ ಸರಣಿಯಲ್ಲಿ ನಾಯಕನಾಗಿರುವ ಅವರು ಈ ಸಿಕ್ಸರ್​ಗಳ ಸಂಖ್ಯೆಯನ್ನು ಇನ್ನೂ ಹೆಚ್ಚಿಸುವ ಅವಕಾಶವಿದೆ.​

ಟೆಸ್ಟ್​ನಲ್ಲಿ ಅತಿ ಹೆಚ್ಚು ಸಿಕ್ಸರ್​ ಬಾರಿಸಿದ ಟಾಪ್-5 ಬ್ಯಾಟರ್​ಗಳು

ಆಟಗಾರಸಿಕ್ಸರ್​
ಬೆನ್​ ಸ್ಟೋಕ್ಸ್​128*
ಬ್ರೆಂಡನ್​ ಮೆಕಲಮ್107
ಆ್ಯಡಂ ಗಿಲ್​ಕ್ರಿಸ್ಟ್​100
ಕ್ರಿಸ್​ ಗೇಲ್98
ಜಾಕ್‌ ಕ್ಯಾಲಿಸ್‌97
Exit mobile version