ಲಂಡನ್: ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ covid-೧೯ ಸೋಂಕಿನಿಂದ ಮುಕ್ತರಾಗಿದ್ದಾರೆ. ಸೋಮವಾರ ಅವರು ಐಸೋಲೇಷನ್‌ನಿಂದ ಹೊರ ಬಂದಿದ್ದು, ಟಿ೨೦ ಸರಣಿಗಾಗಿ ಅಭ್ಯಾಸ ಆರಂಭಿಸಿದ್ದಾರೆ.
ಟೆಸ್ಟ್ ತಂಡದ ನಾಯಕರಾಗಿ ಇಂಗ್ಲೆಂಡ್ ತೆರಳಿದ್ದ ರೋಹಿತ್ ಶರ್ಮ ಅಭ್ಯಾಸ ಪಂದ್ಯದ ನಡುವೆ ಸೋಂಕಿಗೆ ಒಳಗಾಗಿದ್ದರು. ಹೀಗಾಗಿ ಅವರು ವಿದೇಶಿ ನೆಲದಲ್ಲಿ ಭಾರತ ಟೆಸ್ಟ್ ತಂಡದ ನಾಯಕರಾಗುವ ಅವಕಾಶಕ್ಕಾಗಿ ಇನ್ನಷ್ಟು ದಿನ ಕಾಯುವಂತಾಯಿತು ಹಾಗೂ ಆಡುವ ಚಾನ್ಸ್ ಕೂಡ ಕಳೆದುಕೊಂಡಿದ್ದರು. ಇದೀಗ ಅವರು ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಮೂಲಗಳು ತಿಳಿಸಿದ್ದು, ಕ್ವಾರಂಟೈನ್‌ನಿಂದ ಹೊರಕ್ಕೆ ಬಂದಿದ್ದಾರೆ.
“ರೋಹಿತ್ ಶರ್ಮ ಕೊರೊನಾ ಸೋಂಕಿನಿಂದ ಮುಕ್ತಿ ಪಡೆದಿದ್ದಾರೆ. ಅವರು ಐಸೋಲೇಷನ್‌ನಿಂದ ಹೊರಕ್ಕೆ ಬಂದಿದ್ದಾರೆ. ಅದಾಗ್ಯೂ ಅವರು ಅಭ್ಯಾಸ ಪಂದ್ಯಗಳಲ್ಲಿ ಪಾಲ್ಗೊಂಡಿಲ್ಲ. ಟಿ೨೦ ಸರಣಿ ಆರಂಭವಾಗುವ ಮೊದಲು ಅವರಿಗೆ ವಿಶ್ರಾಂತಿಯ ಅಗತ್ಯವಿದೆ,ʼʼ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Team India ಪ್ರಕಟ: ಇಂಗ್ಲೆಂಡ್ ಟೆಸ್ಟ್‌ಗಿಲ್ಲ ರೋಹಿತ್